ಭಾನುವಾರ, ಜನವರಿ 26, 2020
23 °C
ರಾಜ್ಯಮಟ್ಟದ ಮುಕ್ತ ಶಟಲ್ ಬ್ಯಾಡ್ಮಿಂಟನ್ ಟೂರ್ನಿ

ಕೊಲ್ಹಾಪುರದ ಗಣೇಶಗೆ ಸಿಂಗಲ್ಸ್ ಟ್ರೋಫಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಡಾ.ಸಂಜಯಕುಮಾರ ಎಸ್. ದುಬಲಗುಂಡೆ ಸ್ಮರಣಾರ್ಥ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ವತಿಯಿಂದ ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಎರಡು ದಿನಗಳ ರಾಜ್ಯಮಟ್ಟದ ಮುಕ್ತ ಶಟಲ್ ಬ್ಯಾಡ್ಮಿಂಟನ್ ಟೂರ್ನಿ ಭಾನುವಾರ ಮುಕ್ತಾಯಗೊಂಡಿತು.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮಹಾರಾಷ್ಟ್ರದ ಕೊಲ್ಹಾಪುರದ ಗಣೇಶ (ಪ್ರಥಮ), ನರೇಂದ್ರ ಜಗತಾಪ (ದ್ವಿತೀಯ) ಬಹುಮಾನ ಪಡೆದರು.

ಪುರುಷರ ಡಬಲ್ಸ್‌ನಲ್ಲಿ ಕೊಲ್ಹಾಪೂರದ ಗಣೇಶ ಮತ್ತು ಪುಣೆಯ ತೇಜಸ್ ಖೂಮಾನೆ (ಪ್ರಥಮ), ಕಲಬುರ್ಗಿಯ ಜಕ್ರಿಯಾ ಮತ್ತು ಫಿರೋಜ್ (ದ್ವಿತೀಯ) ಬಹುಮಾನ ಗಳಿಸಿದರು. 40 ವರ್ಷ ಮೇಲ್ಪಟ್ಟ ಪುರುಷರ ಡಬಲ್ಸ್ ವಿಭಾಗದಲ್ಲಿ ಹುಬ್ಬಳ್ಳಿ-ಧಾರವಾಡದ ಪ್ರಭು ನರಸಿಂಹ (ಪ್ರಥಮ), ಬಳ್ಳಾರಿಯ ಚಂದ್ರಶೇಖರ ಮತ್ತು ಪ್ರಕಾಶ (ದ್ವಿತೀಯ) ಬಹುಮಾನ ತಮ್ಮದಾಗಿಸಿಕೊಂಡರು.

19 ವರ್ಷದೊಳಗಿನ ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ಪ್ರೀತಮ್ ಭಗಮುರ್ಗೆ (ಪ್ರಥಮ) ಹಾಗೂ ನಿಹಾಲ್ ವಿಜಯಕುಮಾರ ಸೋನಾರೆ (ದ್ವಿತೀಯ) ಬಹುಮಾನ ಗೆದ್ದುಕೊಂಡರು.

14 ವರ್ಷದೊಳಗಿನ ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ಬೀದರ್‌ನ ನಿಖಿಲ್ (ಪ್ರಥಮ) ಮತ್ತು ಕಲಬುರ್ಗಿಯ ಶ್ರೇಯಸ್ (ದ್ವಿತೀಯ) ಬಹುಮಾನ ಪಡೆದರು.

ಟೂರ್ನಿಯ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಮಂಡ್ಯ ಜಿಲ್ಲೆಯ ಶ್ರೀನಿವಾಸ ಗಳಿಸಿದರು.

ಅಥ್ಲೆಟಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ಬಾಬುವಾಲಿ ಸಮಾರೋಪ ಸಮಾರಂಭದಲ್ಲಿ ವಿಜೇತ ಆಟಗಾರರಿಗೆ ಟ್ರೋಫಿ ಹಾಗೂ ನಗದು ಬಹುಮಾನ ವಿತರಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಡಾ. ಮಕ್ಸೂದ್ ಚಂದಾ, ಉಪಾಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ರೇಖಾ ಸಂಜಯಕುಮಾರ ದುಬಲಗುಂಡೆ, ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್‌ ಉಪಾಧ್ಯಕ್ಷ ಡಾ. ಶಿವಶಂಕರ ಭತಮುರ್ಗೆ, ಕಾರ್ಯದರ್ಶಿ ಪ್ರಕಾಶ ಭೂರೆ, ಶೆಟ್ಲರ್ ಕ್ಲಬ್ ಅಧ್ಯಕ್ಷ ಓಂಕಾರ ಕುಂಚಗೆ, ಉದ್ಯಮಿ ಎಂ.ಡಿ. ಇರ್ಫಾನ್ ಹಾಗೂ ರವಿಶಂಕರ ಶೆಟ್ಟಿ ಇದ್ದರು.

ಪ್ರತಿಕ್ರಿಯಿಸಿ (+)