12ನೇ ಶತಮಾನದಲ್ಲಿ ಈ ತಾಲ್ಲೂಕಿನ ಅನೇಕ ಕಡೆ ಶರಣ ಕ್ಷೇತ್ರಗಳಿದ್ದವು. ಮಂಠಾಳದಲ್ಲಿಯೂ ವಿವಿಧ ಶರಣರ ನೂರೊಂದು ಮಠಗಳಿದ್ದವು. ಈ ಕಾರಣಕ್ಕೇ ಗ್ರಾಮವನ್ನು ಮಠಾಲಯ ಎಂದು ಕರೆಯುವುದು ರೂಢಿಯಾಗಿ ಮುಂದೆ ಮಂಠಾಳ ಎಂದು ಹೆಸರಾಗಿದೆ. ಆದರೆ, ಕಾಲಾನಂತರದಲ್ಲಿ ಅನೇಕ ಮಠಗಳು ನಶಿಸಿದ್ದು ಕೆಲವು ಮಾತ್ರ ಸುಸ್ಥಿತಿಯಲ್ಲಿವೆ. ಹೀಗೆ ಉತ್ತಮವಾಗಿರುವ ಮಠಗಳಲ್ಲಿ ಗುರುಲಿಂಗೇಶ್ವರರ ಮಠ ಒಂದಾಗಿದೆ.