ಸೋಮವಾರ, ಮಾರ್ಚ್ 27, 2023
31 °C

ಬಸವಕಲ್ಯಾಣ: ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ತಾಲ್ಲೂಕಿನ ದಾಸರವಾಡಿಯ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ 10 ನೇ ತರಗತಿ ವಿದ್ಯಾರ್ಥಿ ಪವನ ನಾಗಪ್ಪ ಹಣಮಂತವಾಡಿ (16) ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

‘ಸಂಜೆ 5 ಗಂಟೆಗೆ ವಿದ್ಯಾರ್ಥಿಗಳು ಕೊಠಡಿಗಳ ಹೊರಗೆ ಬಂದು ಅಧ್ಯಯನದಲ್ಲಿ‌ ನಿರತರಾಗಿದ್ದಾಗ ಪವನ ಅಲ್ಲಿಂದ ಬಾರದೆ ಕಿಟಕಿಯ ಸರಳುಗಳಿಗೆ ಬಟ್ಟೆಯನ್ನು ಕಟ್ಟಿ ನೇಣು ಹಾಕಿಕೊಂಡಿದ್ದಾನೆ’ ಎನ್ನಲಾಗಿದೆ.

ನಂತರ ಈ ಬಗ್ಗೆ ತಿಳಿದ ವಸತಿ ಶಾಲೆಯ ಸಿಬ್ಬಂದಿ ತಾಲ್ಲೂಕಿನ ಹಣಮಂತವಾಡಿಯಲ್ಲಿರುವ ಪಾಲಕರಿಗೆ ಈ ವಿಷಯ ತಿಳಿಸಿದ್ದಾರೆ. ಆಗ ತಾಯಿ ಮಹಾದೇವಿ ಹಾಗೂ ಅಣ್ಣ ಗುಂಡಪ್ಪ ಹಾಗೂ ಗ್ರಾಮದ ಹತ್ತಾರು ಜನರು ಸ್ಥಳಕ್ಕೆ ಬಂದು ನೋಡಿದ್ದಾರೆ.

‘ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುವಂಥ ಪರಿಸ್ಥಿತಿ ಇರಲಿಲ್ಲ. ಅಲ್ಲದೆ ಕೊರಳಿಗೆ ಬಟ್ಟೆ ಸುತ್ತಿಕೊಂಡು ನೆಲಕ್ಕೆ ಕುಳಿತಂತಿದ್ದಾನೆ. ಇದು ಆತ್ಮಹತ್ಯೆ ಅಲ್ಲ, ಕೊಲೆ ಆಗಿದ್ದು ಈ ಬಗ್ಗೆ ತನಿಖೆ ಆಗಬೇಕು’ ಎಂದು ಪಾಲಕರು ರಾತ್ರಿ 9.30 ಗಂಟೆಯವರೆಗೂ ಪಟ್ಟು ಹಿಡಿದು ಕುಳಿತಿದ್ದರು. ಮುಡಬಿ ಪೊಲೀಸ್ ಠಾಣೆಯ ಪಿಎಸ್ಐ ವಿಜಯಕುಮಾರ ಹಾಗೂ ಇತರೆ ಸಿಬ್ಬಂದಿ ಕೂಡ ಸ್ಥಳಕ್ಕೆ ಬಂದಿದ್ದರು. ಆದರೆ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬಂದಿರಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು