ಬಸವಕಲ್ಯಾಣ: ತಾಲ್ಲೂಕಿನ ಗಡಿಯಿಂದ ಕೇವಲ ಒಂದು ಕಿ.ಮೀ ಅಂತರದಲ್ಲಿದ್ದರೂ ಮಹಾರಾಷ್ಟ್ರ ರಾಜ್ಯಕ್ಕೊಳಪಟ್ಟಿರುವ ನೆಪದಿಂದ ಹಾಲಹಳ್ಳಿ ಗ್ರಾಮದ ಚನ್ನಬಸವಣ್ಣನವರ ಸ್ಮಾರಕವನ್ನು ನಿರ್ಲಕ್ಷಿಸಲಾಗಿದೆ. ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಚನ್ನಬಸವಣ್ಣನವರು ಬಸವಣ್ಣನವರ ಅಕ್ಕ ನಾಗಮ್ಮನವರ ಪುತ್ರ. ಕಲ್ಯಾಣದಲ್ಲಿ ಮೂವರೂ ಜೊತೆಯಲ್ಲಿಯೇ ಇದ್ದರು. ಆದರೂ, ನಗರದಲ್ಲಿ ಅವರ ಯಾವುದೇ ಸ್ಮಾರಕ ಇಲ್ಲ. 10 ಕಿ.ಮೀ ಅಂತರದಲ್ಲಿನ ಹಾಲಹಳ್ಳಿಯ ಗುಡ್ಡದ ಮೇಲಿದೆ. ರಾತ್ರಿ ಸಮಯದಲ್ಲಿ ಬಸವಕಲ್ಯಾಣದಲ್ಲಿನ ವಿದ್ಯುತ್ ದೀಪಗಳು ಈ ಗುಡ್ಡದಿಂದ ಕಾಣುತ್ತವೆ. ಮೋರಖಂಡಿಯಿಂದ ಹೋದರೆ ತಾಲ್ಲೂಕಿನ ಗಡಿಯಲ್ಲಿರುವ ಚೌಕಿವಾಡಿಯಿಂದ ಬರೀ ಒಂದು ಕಿ.ಮೀ ದೂರದಲ್ಲಿ ಈ ಊರಿದೆ. ಪ್ರತಾಪುರ ಮಾರ್ಗವಾಗಿ ಸಾಗಿದರೆ ಮಮದಾಪುರ ಬಳಿಕ ಇದೇ ಗ್ರಾಮವಿದೆ.

ವಯಸ್ಸಿನಲ್ಲಿ ಚಿಕ್ಕವರಿದ್ದರೂ ಜ್ಞಾನಿ ಆಗಿದ್ದರು. ಆದ್ದರಿಂದಲೇ ಅವರನ್ನು ಚಿನ್ಮಯಜ್ಞಾನಿ ಚನ್ನಬಸವಣ್ಣ ಎಂದು ಕರೆಯಲಾಗುತ್ತದೆ. ಸಾವಿರಾರು ವಚನಗಳನ್ನು ಬರೆದಿದ್ದಾರೆ. ಅಂದಿನ ಅನುಭವ ಮಂಟಪದಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು. ಇಲ್ಲಿಂದ ಅವರು ಉಳವಿಗೆ ಹೋದರು. ಅಲ್ಲಿ ಅವರ ಗುಡಿ ಇದೆ. ಆದರೆ, ಕಲ್ಯಾಣದಲ್ಲಿ ಮಾತ್ರ ಏಕೆ ಅವರ ಯಾವುದೇ ಕುರುಹು ಇಲ್ಲ ಎಂಬುದೇ ತಿಳಿಯುತ್ತಿಲ್ಲ. ಹಾಲಹಳ್ಳಿಯು ಸಮೀಪವೇ ಇರುವುದರಿಂದ ಅವರಿಗೆ ಸಂಬಂಧಿಸಿದ ಇನ್ನೊಂದು ಸ್ಥಳ ಈ ಭಾಗದಲ್ಲಿ ಇರಲಿಕ್ಕಿಲ್ಲ ಎಂಬುದು ಕೆಲವರ ಅಭಿಪ್ರಾಯವಾಗಿದೆ.

ಈ ಊರ ಗುಡ್ಡದಲ್ಲಿ ಚನ್ನಬಸವಣ್ಣನವರ ಗುಹೆ ಇದೆ. ಇಲ್ಲಿ ಅವರು ಧ್ಯಾನಗೈದಿದ್ದರಿಂದ ಒಳಗೆ ಅವರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಎದುರಲ್ಲಿ ಹಳೆಯ ಗುಡಿ ಇದ್ದು ಅಲ್ಲಿ ಲಿಂಗವಿದೆ. ಪಕ್ಕದಲ್ಲಿಯೇ ಅಕ್ಕ ಮಹಾದೇವಿ ಅವರ ಗುಡಿಯೂ ಈಚೆಗೆ ಕಟ್ಟಿಸಲಾಗಿದೆ. ಸುತ್ತಲೂ ಮಂಟಪ ನಿರ್ಮಿಸಲಾಗಿದೆ. ಪೂರ್ವಾಭಿಮುಖವಾಗಿರುವ ಈ ದೇವಸ್ಥಾನಕ್ಕೆ ಹೋಗಲು ಮೆಟ್ಟಿಲುಗಳಿವೆ. ವರ್ಷದ ಹಿಂದೆ ಪ್ರವೇಶದ್ವಾರ ಕಟ್ಟಲಾಗಿದೆ.

ಇಲ್ಲಿ ದೀಪಾವಳಿ ಹಬ್ಬದಲ್ಲಿ ಚನ್ನಬಸವಣ್ಣನವರ ಜಯಂತಿ ನಿಮಿತ್ತ ತೊಟ್ಟಿಲು ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಇದೇ ವೇಳೆ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ನಡೆಯುವ ಶರಣ ಕಮ್ಮಟ ಸಮಾರಂಭಕ್ಕೆ ಇಲ್ಲಿಂದ ಕೆಲ ವರ್ಷ ಚನ್ನಬಸವಣ್ಣನವರ ಜ್ಯೋತಿಯಾತ್ರೆ ನಡೆಸಲಾಯಿತು. ಕಲ್ಯಾಣ ಪರ್ವ ವಾರ್ಷಿಕ ಸಮಾರಂಭಕ್ಕೂ ಇಲ್ಲಿಂದ ಜ್ಯೋತಿ ತರಲಾಗುತ್ತದೆ. ‘ನಾನು ಹಲವಾರು ಪ್ರಮುಖರೊಂದಿಗೆ 10 ವರ್ಷದವರೆಗೆ ಶರಣ ಕಮ್ಮಟಕ್ಕೆ ಜ್ಯೋತಿ ಹೊತ್ತಿಸಿಕೊಂಡು ತಂದಿದ್ದೇನೆ’ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಗುರುನಾಥ ಗಡ್ಡೆ ತಿಳಿಸಿದ್ದಾರೆ.

‘ಗ್ರಾಮದಲ್ಲಿ ಎಲ್ಲ ಸಮುದಾಯದವರೂ ಚನ್ನಬಸವಣ್ಣನ ಭಕ್ತರಾಗಿದ್ದಾರೆ. ಕೌಟುಂಬಿಕ ಕಾರ್ಯಕ್ರಮವಿದ್ದಾಗ ಆರಾಧನಾ ಕಾರ್ಯಕ್ರಮ ಹಮ್ಮಿಕೊಂಡು ಅನ್ನ ದಾಸೋಹ ಏರ್ಪಡಿಸುತ್ತಾರೆ. ಎಲ್ಲರ ಮನೆಗಳಲ್ಲಿ ಚನ್ನಬಸವಣ್ಣನವರ ಭಾವಚಿತ್ರ ಮತ್ತು ಗ್ರಂಥಗಳಿವೆ. ಬಸವಕಲ್ಯಾಣದ ಶರಣ ಸ್ಥಳಗಳಿಗೂ ಆಗಾಗ ಭೇಟಿ ನೀಡುತ್ತೇವೆ ಎಂದು ಗ್ರಾಮದ ಪ್ರಾಥಮಿಕ ಕೃಷಿ ಸಹಕಾರ ಪತ್ತಿನ ಸಂಘದ ಅಧ್ಯಕ್ಷ ರಾಜೀವ ಜಾಧವ, ಪ್ರಮುಖರಾದ ವಿಜಯಕುಮಾರ ಜಾಧವ, ಪ್ರಕಾಶ ಬಿರಾದಾರ ತಿಳಿಸಿದ್ದಾರೆ. ದೇವಸ್ಥಾನದ ಆವರಣದಲ್ಲಿ ವಚನಗಳ ಫಲಕಗಳನ್ನು ಅಳವಡಿಸಬೇಕಾಗಿದೆ. ಬೃಹತ್ ಮೂರ್ತಿ ಪ್ರತಿಷ್ಠಾಪಿಸಬೇಕಿದೆ. ವಿವಿಧ ಅಭಿವೃದ್ಧಿ ಕಾರ್ಯ ನಡೆಯಬೇಕಿದೆ’ ಎಂಬುದು ಜನರ ಅನಿಸಿಕೆ.

ಯಾರು ಏನು ಹೇಳುತ್ತಾರೆ?

ಮಾತೆ ಮಹಾದೇವಿಯವರು ಬಸವಕಲ್ಯಾಣದಲ್ಲಿ ನಡೆಸುತ್ತಿದ್ದ ಕಲ್ಯಾಣ ಪರ್ವಕ್ಕೆ ಚನ್ನಬಸವಣ್ಣನವರ ಗುಡಿಯಿಂದ ಜ್ಯೋತಿ ತಂದಿದ್ದೇನೆ. ಈ ಸ್ಥಳ ಅಭಿವೃದ್ಧಿ ಆಗಬೇಕು
ಬಸವರಾಜ ಪಾಟೀಲ ಶಿವಪುರ ರಾಷ್ಟ್ರೀಯ ಬಸವದಳದ ಮುಖಂಡ

ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಪಟ್ಟಿಗೆ ಗುಡಿ ಸೇರ್ಪಡೆಗೊಳಿಸಿದ ಬಗ್ಗೆ ಸ್ಥಳಕ್ಕೆ ಬಂದಿದ್ದ ಸಂಬಂಧಿತರು ತಿಳಿಸಿದ್ದರಾದರೂ ಅವರಿಂದ ಇದುವರೆಗೆ ಕೆಲಸ ನಡೆದಿಲ್ಲ
ಶಂಭುಲಿಂಗ ಬಿರಾದಾರ ಅಧ್ಯಕ್ಷ ಚನ್ನಬಸವಣ್ಣ ದೇವಸ್ಥಾನ ಸಮಿತಿ ಹಾಲಹಳ್ಳಿ

ಬಸವಣ್ಣನವರ ಕಾಲದ ಶರಣರ ಸ್ಮಾರಕಗಳು ಎಲ್ಲಿಯೇ ಇದ್ದರೂ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ವ್ಯಾಪ್ತಿಗೊಳಪಡಿಸಿ ಜೀರ್ಣೋದ್ಧಾರ ನಡೆಸುವುದು ಅಗತ್ಯವಾಗಿದೆ
ಬಸವಣ್ಣಪ್ಪ ನೆಲ್ಲೋಗಿ ಮುಖಂಡ ಬಸವಕಲ್ಯಾಣ

ಶರಣ ಸಂಸ್ಕೃತಿಗೆ ಬಸವಣ್ಣನವರೇ ನಾಯಕರು. ಆದರೂ, ಇತರೆ ಎಲ್ಲ ಶರಣರ ಸ್ಮಾರಕಗಳ ಅಭಿವೃದ್ಧಿಯಾದರೆ ಬಸವತತ್ವ ಎಲ್ಲೆಡೆ ಹರಡಲು ಅನುಕೂಲ ಆಗುತ್ತದೆ.
ಸೋನಾಲಿ ಎಸ್.ನೀಲಕಂಠೆ ಸಾಮಾಜಿಕ ಕಾರ್ಯಕರ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.