ಬುಧವಾರ, ಸೆಪ್ಟೆಂಬರ್ 22, 2021
21 °C

ಸಂಭ್ರಮದ ಬುತ್ತಿ ಬಸವಣ್ಣ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಇಲ್ಲಿಯ ಚಿದ್ರಿಯಲ್ಲಿ ಬುತ್ತಿ ಬಸವಣ್ಣ ದೇವಸ್ಥಾನದ 19ನೇ ಜಾತ್ರಾ ಮಹೋತ್ಸವ ಪ್ರಯುಕ್ತ ಸಂಭ್ರಮ ಸಡಗರದೊಂದಿಗೆ ರಥೋತ್ಸವ ನಡೆಯಿತು.

ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.
ರಥ, ನಂದಿ ಮೂರ್ತಿಗೆ ಅಭಿಷೇಕ, ಷಟ್‌ಸ್ಥಲ ಧ್ವಜಾರೋಹಣ, ದೀಪೋತ್ಸವ, ಮಹಾ ಮಂಗಳಾರತಿ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನಡೆದವು.

ಕಲಾವಿದ ತುಕಾರಾಮ ಜಾದು ಹಾಗೂ ವೈಜಿನಾಥ ಸಜ್ಜನಶೆಟ್ಟಿ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಬೇಮಳಖೇಡ ಮಠದ ಡಾ. ರಾಜಶೇಖರ ಸ್ವಾಮೀಜಿ ಗೋರಟಾ ಸಾನಿಧ್ಯ ವಹಿಸಿದ್ದರು.

ದೇವಸ್ಥಾನ ಟ್ರಸ್ಟ್‌ನ ರಮೇಶ ಮಾಶೆಟ್ಟಿ ಚಿದ್ರಿ, ಅಮೃತ ಟೋಕರೆ, ಅನೀಲ ಪಾಟೀಲ, ಸಂಗಶೆಟ್ಟಿ ಸಿದ್ಧೇಶ್ವರ, ರಾಜಶೇಖರ ಬಿರಾದಾರ, ರಾಜಕುಮಾರ ಬಿರಾದಾರ, ಸೋಮಶೇಖರ ಬಿರಾದಾರ, ಅನೀಲ ಪಾಟೀಲ, ಅಪ್ಪಣ್ಣ ಪಾಟೀಲ, ಚಂದ್ರಕಾಂತ ಚಿದ್ರಿ, ಸಂಗಪ್ಪ ಚಿದ್ರಿ, ರವಿ ಪ್ರಭು, ಶಿವಾನಂದ ಸ್ವಾಮಿ, ವಿಜಯಕುಮಾರ ಸ್ವಾಮಿ, ಅಶೋಕ ಸ್ವಾಮಿ, ಅನಂತರೆಡ್ಡಿ, ನಾರಾಯಣರೆಡ್ಡಿ ಸಂಜುರೆಡ್ಡಿ, ಸಂದೀಪರೆಡ್ಡಿ, ಸೋಮಶೇಖರ ಪಾಟೀಲ ಕಾಡವಾದ, ನಾಗಶೆಟ್ಟಿ ಧರಂಪುರ, ವೀರಶೆಟ್ಟಿ ಮಾಶೆಟ್ಟಿ, ಗಿರೀಶ ಪಾಟೀಲ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.