ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜನವಾಡ: ಸಂಭ್ರಮದ ನಂದಿ ಬಸವಣ್ಣ ಜಾತ್ರೆ

Published 20 ಮೇ 2024, 16:08 IST
Last Updated 20 ಮೇ 2024, 16:08 IST
ಅಕ್ಷರ ಗಾತ್ರ

ಶಮಶೇರ್‌ನಗರ(ಜನವಾಡ): ಸಿಂದಿಗೇರಿ ನಂದಿ ಬಸವಣ್ಣ ಜಾತ್ರಾ ಮಹೋತ್ಸವ ಬೀದರ್ ತಾಲ್ಲೂಕಿನ ಶಮಶೇರ್‌ನಗರದಲ್ಲಿ ಈಚೆಗೆ ಸಂಭ್ರಮ, ಸಡಗರದಿಂದ ನಡೆಯಿತು.

ಜಾತ್ರೆ ನಿಮಿತ್ತ ಸರ್ವ ಧರ್ಮ ಸಮ್ಮೇಳನ, ಹೇಮರಡ್ಡಿ ಮಲ್ಲಮ್ಮ ಪುರಾಣ, ಪ್ರವಚನ, ಅಗ್ನಿ ಪೂಜೆ, ರುದ್ರಾಭಿಷೇಕ, ಭಜನೆ, ನಂದಿ ಬಸವಣ್ಣ ಪಲ್ಲಕ್ಕಿ ಮೆರವಣಿಗೆ, ರಥೋತ್ಸವ ಮೊದಲಾದ ಕಾರ್ಯಕ್ರಮ ಜರುಗಿದವು.

ಜಾತ್ರೆ ಸೌಹಾರ್ದಕ್ಕೆ ಸಹಕಾರಿ: ಜಾತ್ರೆಗಳು ಸಮಾಜದಲ್ಲಿ ಶಾಂತಿ, ನೆಮ್ಮದಿ ಹಾಗೂ ಸೌಹಾರ್ದ ನೆಲೆಗೊಳ್ಳಲು ಸಹಕಾರಿಯಾಗುತ್ತವೆ ಎಂದು ಸರ್ವ ಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಆಶ್ರಮದ ಪೀಠಾಧಿಪತಿ ಬಸವಲಿಂಗ ಅವಧೂತರು ನುಡಿದರು.

ಆಧ್ಯಾತ್ಮ ಜ್ಞಾನದಿಂದ ಸುಂದರ ಬದುಕು ರೂಪಿಸಿಕೊಳ್ಳಬಹುದು ಎಂದು ಬೇಮಳಖೇಡ ಹಿರೇಮಠದ ರಾಜಶೇಖರ ಶಿವಾಚಾರ್ಯ ಹೇಳಿದರು.

ಚನ್ನಮಲ್ಲಯ್ಯ ಸ್ವಾಮೀಜಿ, ನಂದಿ ಬಸವಣ್ಣ ದೇವಸ್ಥಾನ ಪಂಚ ಕಮಿಟಿಯ ಅಧ್ಯಕ್ಷ ಶಿವರಾಜ ಪಾಟೀಲ, ಪ್ರಮುಖರಾದ ವೀರಶೆಟ್ಟಿ ಪಾಟೀಲ, ಸೋಮನಾಥ ಮೈಲೂರ, ಶಾಂತಕುಮಾರ ಸ್ವಾಮಿ ಬಾವಗಿ, ಭೀಮರಾವ್ ಹೂಗಾರೆ, ಯೋಗೇಂದ್ರ ಯದಲಾಪುರೆ, ಧೂಳಪ್ಪ ತೋರಣ, ರಾಜು ಗುನ್ನಳ್ಳಿ ಇದ್ದರು.

ಬೀದರ್ ತಾಲ್ಲೂಕಿನ ಶಮಶೇರ್‍ನಗರದಲ್ಲಿ ಸಿಂದಿಗೇರಿ ನಂದಿ ಬಸವಣ್ಣ ಜಾತ್ರೆ ನಿಮಿತ್ತ ಈಚೆಗೆ ನಡೆದ ಧರ್ಮಸಭೆಯನ್ನು ಬೇಮಳಖೇಡ ಹಿರೇಮಠ ಸಂಸ್ಥಾನದ ರಾಜಶೇಖರ ಶಿವಾಚಾರ್ಯ ಉದ್ಘಾಟಿಸಿದರು
ಬೀದರ್ ತಾಲ್ಲೂಕಿನ ಶಮಶೇರ್‍ನಗರದಲ್ಲಿ ಸಿಂದಿಗೇರಿ ನಂದಿ ಬಸವಣ್ಣ ಜಾತ್ರೆ ನಿಮಿತ್ತ ಈಚೆಗೆ ನಡೆದ ಧರ್ಮಸಭೆಯನ್ನು ಬೇಮಳಖೇಡ ಹಿರೇಮಠ ಸಂಸ್ಥಾನದ ರಾಜಶೇಖರ ಶಿವಾಚಾರ್ಯ ಉದ್ಘಾಟಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT