ಬೀದರ್: ‘ಪಂಚಪೀಠಗಳು ಬಸವತತ್ವದ ಪ್ರಚಾರ ಮಾಡುತ್ತಿವೆ ಎಂಬುದು ಅಪ್ಪಟ ಸುಳ್ಳು. ಬದಲಾಗಿ ಬಸವಣ್ಣ, ಬಸವತತ್ವದ ಅಪಪ್ರಚಾರ ಮಾಡುತ್ತಿವೆ’ ಎಂದು ಬಸವಕಲ್ಯಾಣ ಬಸವ ಧರ್ಮ ಪೀಠದ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ನಗರದ ಗಾಂಧಿಗಂಜ್ ಬಸವೇಶ್ವರ ದೇವಸ್ಥಾನದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಮಾಸಿಕ ವಚನ ಮಂಟಪ ಹಾಗೂ ಬಸವ ಸಂಸ್ಕೃತಿ-ವಿಶ್ವ ಶ್ರೇಷ್ಠ ಸಂಸ್ಕೃತಿ ಕುರಿತ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಬಸವಣ್ಣ ವೀರಶೈವ ಧರ್ಮ ಸ್ವೀಕರಿಸಿರಲಿಲ್ಲ. ಪಂಚಾಚಾರ್ಯರ ತತ್ವಗಳಿಗೆ ಮಾರು ಹೋಗಿ ವೀರಶೈವ ಧರ್ಮ ಸ್ವೀಕರಿಸಿದ್ದರೆಂಬ ರಂಭಾಪುರಿ ಶ್ರೀಗಳ ಹೇಳಿಕೆ ಶುದ್ಧ ಸುಳ್ಳು ಹಾಗೂ ಖಂಡನೀಯ. ಬಸವಣ್ಣ ಅಡ್ಡಪಲ್ಲಕ್ಕಿಯಂತಹ ಕೊಳಕು ಆಚರಣೆಯ ಧರ್ಮವನ್ನು ಯಾವತ್ತೂ ಸ್ವೀಕರಿಸಿರಲಿಲ್ಲ. ಅನಿಷ್ಟ, ದುಷ್ಟ ಆಚರಣೆಗಳ ನಿರ್ಮೂಲನೆಗಾಗಿಯೇ ವೈಜ್ಞಾನಿಕ, ಸತ್ಯ, ಸರಳ, ಪ್ರಗತಿಪರ ಲಿಂಗಾಯತ ಧರ್ಮವನ್ನು ಕೊಟ್ಟರು’ ಎಂದು ಹೇಳಿದರು.

ದಾವಣಗೆರೆಯಲ್ಲಿ ಇತ್ತೀಚೆಗೆ ನಡೆದ ವೀರಶೈವ ಪೀಠಾಚಾರ್ಯರು ಹಾಗೂ ಶಿವಾಚಾರ್ಯರ ಶೃಂಗದಲ್ಲಿ ಈ ಕುರಿತು ಹೇಳಿಕೆ ಕೊಟ್ಟಿರುವ ರಂಭಾಪುರಿ ಶ್ರೀಗಳು 12ನೇ ಶತಮಾನದಲ್ಲಿ ಬಸವಣ್ಣನವರು ವೀರಶೈವ ಧರ್ಮ ಸ್ವೀಕರಿಸಿದ್ದನ್ನು ನೋಡಿದ್ದಾರೆಯೇ? ಇದು ಜನರ ದಿಕ್ಕು ತಪ್ಪಿಸುವ ಹೇಳಿಕೆ ಎಂದು ತಿಳಿಸಿದರು.

ಅವರವರ ಅನುಯಾಯಿಗಳಿಗೆ ಅವರವರ ಆಚಾರ್ಯರೇ ಶ್ರೇಷ್ಠ. ಪಂಚ ಪೀಠಗಳಿಗೆ ಹೊರತಾದ ಬಸವ ಧರ್ಮದ, ತತ್ವದ ಯಾವುದೇ ಮಠಗಳು ಹಾಗೂ ಬಸವಾನುಯಾಯಿಗಳು, ಪಂಚಾಚಾರ್ಯರು, ಶೈವ ಪ್ರಣೀತ ವೀರಶೈವ ಮತಕ್ಕೆ ಮಹತ್ವ ಹಾಗೂ ಪಾವಿತ್ರ್ಯ ಕೊಡುವ ಅಗತ್ಯವೇ ಇಲ್ಲ ಎಂದು ಹೇಳಿದರು.

ಉದ್ಘಾಟನೆ ನೆರವೇರಿಸಿದ ಮಹಾಸಭಾ ಕೇಂದ್ರ ಸಮಿತಿಯ ಹಿರಿಯ ಉಪಾಧ್ಯಕ್ಷ ಬಸವರಾಜ ಬುಳ್ಳಾ ಮಾತನಾಡಿ, ಬಸವ ಸಂಸ್ಕೃತಿ ಶ್ರೇಷ್ಠ ಸಂಸ್ಕೃತಿಯಾಗಿದೆ. ಇದನ್ನು ಅರಿತು ಆಚರಿಸಿದರೆ ಜೀವನ ಸುಂದರವಾಗುತ್ತದೆ. ಇಷ್ಟಲಿಂಗ ಬಸವ ಸಂಸ್ಕೃತಿಯ ಜೀವಾಳವಾಗಿದೆ. ಸಮಾನತೆಯ ಸಂಕೇತವೂ ಹೌದು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಸೆ. 3ರಂದು ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಬಸವ ಸಂಸ್ಕೃತಿ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಶಿಕ್ಷಕ ಶಿವಲಿಂಗ ಹೇಡೆ, ಚಿತ್ರ ಕಲಾವಿದ ಸಿ.ಬಿ. ಸೋಮಶೆಟ್ಟಿ, ರೋಟರಿ ಕ್ಲಬ್ ಬೀದರ್ ಕ್ವೀನ್ಸ್ ಅಧ್ಯಕ್ಷೆ ಸುಲೋಚನಾ ಪಾಟೀಲ ಹಾಗೂ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸುನೈನಾ ಗುತ್ತಿ ಅವರನ್ನು ಸನ್ಮಾನಿಸಲಾಯಿತು.

ಬಸವದೇವರು ಸಮ್ಮುಖ ವಹಿಸಿದ್ದರು. ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪೂರ, ಗಾನಯೋಗಿ ಪಂಚಾಕ್ಷರಿ ಗವಾಯಿ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾಳೆ, ನಿವೃತ್ತ ಎಂಜಿನಿಯರ್ ಪ್ರಕಾಶ ಮಠಪತಿ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಲ್ಲಮ್ಮ ಸಂತಾಜಿ, ಮಹಾಸಭಾ ಜಿಲ್ಲಾ ಮಹಿಳಾ ಘಟಕದ ಕೋಶಾಧ್ಯಕ್ಷೆ ನಿರ್ಮಲಾ ಮಸೂದಿ, ಸುವರ್ಣಾ ಧನ್ನೂರ, ಲಾವಣ್ಯ ಹಂಗರಗಿ, ಸಾಹಿತಿ ಸುರೇಖಾ ಹುಲಸೂರು ಇದ್ದರು. ರೇಖಾ ಲಿಂಗದಳ್ಳಿ ವಚನ ಗಾಯನ ಮಾಡಿದರು. ಜ್ಞಾನದೇವಿ ಬಬಚೇಡಿ ಸ್ವಾಗತಿಸಿದರು. ಕರುಣಾ ಶೆಟಕಾರ್ ನಿರೂಪಿಸಿದರು. ವಚನ ವೈಭವ ಸಮಿತಿ ಅಧ್ಯಕ್ಷ ರೇವಣಪ್ಪ ಮೂಲಗೆ ಭಕ್ತಿ ದಾಸೋಹ ಮಾಡಿದರು.

‘ಇವು ಬಸವಣ್ಣನ ತತ್ವವೇ?’

ಶಿಷ್ಯರ ತಲೆ ಮೇಲೆ ಹಾಗೂ ಇಷ್ಟಲಿಂಗದ ಮೇಲೆ ಅಂಗಾಲು ಇಟ್ಟು ವಿಕೃತವಾಗಿ ಪಾದಪೂಜೆ ಮಾಡುವುದು ಆಶೀರ್ವಾದ ನೀಡುವುದು ಬಹುದೇವೋಪಾದನೆ ಅಡ್ಡಪಲ್ಲಕ್ಕಿ ಪಂಚಾಂಗ ನೋಡುವುದು ವಾಸ್ತು ಜ್ಯೋತಿಷ್ಯದ ನೆಪದಲ್ಲಿ ಮನೆ ಕೆಡಹುವುದು ಇವೆಲ್ಲ ಬಸವಣ್ಣನವರ ತತ್ವಗಳೇ ಎಂದು ಬಸವಕಲ್ಯಾಣ ಬಸವ ಧರ್ಮ ಪೀಠದ ಸಿದ್ಧರಾಮೇಶ್ವರ ಸ್ವಾಮೀಜಿ ಪ್ರಶ್ನಿಸಿದರು. ಬಸವ ತತ್ವ ಪಾಲನೆ ಮಾಡುವ ಯಾವುದೇ ಮಠವಾಗಲಿ ಪಂಚಾಚಾರ್ಯ ಶೈವ ಮತದ ಪೀಠಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಬಸವ ತತ್ವ ಪಾಲನೆ ಮಾಡುವ ಮಠಗಳನ್ನು ಪಂಚಾಚಾರ್ಯರು ಎಂದಿಗೂ ಸಮೀಪಿಸಲು ಆಗದಷ್ಟು ಕಂದಕ ಸೃಷ್ಟಿಸಬೇಕು. ಆಗಲೇ ಬಸವಣ್ಣನವರು ನೀಡಿದ ಶ್ರೇಷ್ಠ ಲಿಂಗಾಯತ ಧರ್ಮ ಉಳಿಯುತ್ತದೆ ಬೆಳೆಯುತ್ತದೆ ಎಂದು ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.