ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ: ತಾಲ್ಲೂಕು ಬೇಡ ಜಂಗಮ ಸಮಾವೇಶ ಮೇ 27ಕ್ಕೆ 

Published 24 ಮೇ 2023, 12:51 IST
Last Updated 24 ಮೇ 2023, 12:51 IST
ಅಕ್ಷರ ಗಾತ್ರ

ಬಸವಕಲ್ಯಾಣ: ಹೈದರಾಬಾದ್ ಕರ್ನಾಟಕ ಬೇಡ ಜಂಗಮ ಸಮಾಜ ಸಂಸ್ಥೆ ಹಾಗೂ ಬೇಡ ಜಂಗಮ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಮೇ 27 ರಂದು ನಗರದಲ್ಲಿ ತಾಲ್ಲೂಕು ಮಟ್ಟದ ಸಮಾವೇಶ ಹಾಗೂ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಗೌರವ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

‘ಬೇಡ ಜಂಗಮರ ಸಮಸ್ಯೆಗಳು ಹಾಗೂ ಜಾತಿ ಪ್ರಮಾಣಪತ್ರ ನೀಡುವ ಕುರಿತಂತೆ ಸಮಾವೇಶದಲ್ಲಿ ಚರ್ಚಿಸಲಾಗುತ್ತದೆ. ಸಮಾಜದ 100 ಜನ ನಿವೃತ್ತ ನೌಕರರು ಹಾಗೂ ಅಧಿಕಾರಿಗಳನ್ನು ಸನ್ಮಾನಿಸಲಾಗುತ್ತದೆ’ ಎಂದು ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ರಾಜ್ಯ ವಕ್ತಾರ ಡಾ.ಬಸವರಾಜಸ್ವಾಮಿ ತ್ರಿಪುರಾಂತ ತಿಳಿಸಿದ್ದಾರೆ.

100 ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುತ್ತದೆ. ಸಮಾವೇಶದ ಕುರಿತು ತಾಲ್ಲೂಕಿನ ಪ್ರತಿ ಹಳ್ಳಿಗ ಲ್ಲಿ ಸಂಚರಿಸಿ ಪ್ರಚಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಮೇ 27 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಬಸವೇಶ್ವರ ವೃತ್ತದಲ್ಲಿನ ಬಿಕೆಡಿಬಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯುವುದು. ತಡೋಳಾ ರಾಜೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಭಾತಂಬ್ರಾದ ಶಿವಯೋಗೇಶ್ವರ ಸ್ವಾಮೀಜಿ, ಹಿರೇನಾಗಾಂವ ಜಯಶಾಂತಲಿಂಗ ಸ್ವಾಮೀಜಿ, ಹಾರಕೂಡದ ಚನ್ನವೀರ ಶಿವಾಚಾರ್ಯರು, ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಹುಲಸೂರಿನ ಶಿವಾನಂದ ಸ್ವಾಮೀಜಿ ಹಾಗೂ ಗಡಿಗೌಡಗಾಂವದ ಶಾಂತವೀರ ಶಿವಾಚಾರ್ಯರು ನೇತೃತ್ವ ವಹಿಸುವರು.

ಶಾಸಕ ಶರಣು ಸಲಗರ ಉದ್ಘಾಟಿಸುವರು. ಡಾ.ಬಸವರಾಜ ಸ್ವಾಮಿ ಅಧ್ಯಕ್ಷತೆ ವಹಿಸುವರು. ಮುಖಂಡರಾದ ವಿಜಯಸಿಂಗ್, ಧನರಾಜ ತಾಳಂಪಳ್ಳಿ, ಯಶ್ರಬಅಲಿ ಖಾದ್ರಿ, ಬೇಡ ಜಂಗಮ ಸಮಾಜ ಸಂಘಟನೆಗಳ ಪ್ರಮುಖರಾದ ಮುರಗಯ್ಯಸ್ವಾಮಿ ವಸ್ತ್ರದ್, ರೇವಣಸಿದ್ದಯ್ಯ ಮಠಪತಿ, ಶಾಂತವೀರ ಪೂಜಾರಿ, ಬಸವರಾಜಸ್ವಾಮಿ, ಶಿವಲಿಂಗಯ್ಯ ಕನಾಡೆ, ಸದಾನಂದ ಕಣಜೆ, ಶಾಂತವೀರಸ್ವಾಮಿ, ರಾಕೇಶ ಪುರವಂತ, ಬೂದಯ್ಯ ಮಠಪತಿ, ಲೋಕೇಶ, ಚನ್ನವೀರ ಚಿಟ್ಟೆ, ಶರಣಯ್ಯಸ್ವಾಮಿ, ನಾಗೇಶ ಸಂಗೋಳಗೆ, ಅನಿಲ ಕವಡೆ, ಸಿದ್ದಯ್ಯ ಪತ್ರಿ, ಚಿದಾನಂದ ಮಠಪತಿ, ರೇಣುಕಾ ಮಠಪತಿ, ಸರಸ್ವತಿ ಬೆಂಬಳೆ, ರಾಜಮ್ಮ ಮಠ, ಮಹದೇವಿ ವಸ್ತ್ರದ್, ಲಕ್ಷ್ಮಿ ಗುಂಡಯ್ಯ, ತನುಜಾ ಶಿವಪುತ್ರಯ್ಯ, ರೇಣುಕಾ ಶಾಂತವೀರಯ್ಯ, ಪೂಜಾ ಶಿವಶಂಕರಯ್ಯ, ಮಹಾದೇವಿ ಮಹಾದೇವಯ್ಯ, ಸವಿತಾ ರಮೇಶಸ್ವಾಮಿ, ನೀಲಾಂಬಿಕಾ ಕೊಳ್ಳೆ ಹಾಗೂ ಚಾಮುಂಡೇಶ್ವರಿ ಪಂಚಯ್ಯ ಪಾಲ್ಗೊಳ್ಳುವರು ಎಂದರು.

ಡಾ.ಬಸವರಾಜ ಸ್ವಾಮಿ
ಡಾ.ಬಸವರಾಜ ಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT