ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್: ಅಪರೂಪದ ಬೆಂಗಾಲ್ ಫಾಕ್ಸ್ ಪತ್ತೆ

Last Updated 26 ಫೆಬ್ರುವರಿ 2022, 3:15 IST
ಅಕ್ಷರ ಗಾತ್ರ

ಔರಾದ್ (ಬೀದರ್ ಜಿಲ್ಲೆ): ತಾಲ್ಲೂಕಿನ ಹೆಡಗಾಪುರ ಅರಣ್ಯ‌ ಪ್ರದೇಶದಲ್ಲಿ ಶುಕ್ರವಾರ ಅಪರೂಪದ ಬೆಂಗಾಲ್ ಫಾಕ್ಸ್ (ವಲ್ಪೆಸ್ ಬೆಂಗಾಲೆನ್ಸಿಸ್) ನರಿ‌ ಪತ್ತೆಯಾಗಿದೆ.

ಅವಸಾನದ ಅಂಚಿನಲ್ಲಿರುವ ಈ ತಳಿಯ ನಾಲ್ಕು ಮರಿಗಳು ಹಾಗೂ ಒಂದು ಹೆಣ್ಣು ಸೇರಿ ಒಟ್ಟು ಐದು ನರಿಗಳು ಪತ್ತೆಯಾಗಿವೆ.

ಉಪ ವಲಯ ಅರಣ್ಯಾಧಿಕಾರಿ ಅಂಕುಶ ಮಚಕುರಿ ಅವರು ಈ ವಿಶೇಷ ತಳಿಯ ನರಿಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

‘ನಮ್ಮ ಭಾಗದಲ್ಲಿ ‌ಈ ನರಿಗಳು ಸಿಗುವುದು ಅಪರೂಪ. ಕಾಡು‌ ನಾಶ, ಕಾಡಿಗೆ ಬೆಂಕಿ ಬೀಳುವಂತಹ ಘಟನೆಯಿಂದ ಈ ನರಿಗಳ‌ ಸಂತತಿ ಅಳಿವಿನ ಅಂಚಿನಲ್ಲಿವೆ. ಭೂಮಿಯಲ್ಲಿ ರಂಧ್ರ ಕೊರೆದು ಮನೆ ಮಾಡಿಕೊಂಡು ವಾಸಿಸುವ ಈ ನರಿಗಳು ವಿಚಿತ್ರ ಧ್ವನಿಯಿಂದ ಕೂಗು ಹಾಕುತ್ತವೆ’ ಎಂದು ವಲಯ ಅರಣ್ಯಾಧಿಕಾರಿ ಪ್ರೇಮಶೇಖರ್ ಚಾಂದೋರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT