ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ವಿಮೆ ಪರಿಹಾರ ವಿತರಣೆಗೆ ಆಗ್ರಹ

ಕೃಷಿ ಸಚಿವ ಬಿ.ಸಿ.ಪಾಟೀಲಗೆ ಪತ್ರ ಬರೆದ ಶಾಸಕ ಈಶ್ವರ ಖಂಡ್ರೆ
Last Updated 4 ಮೇ 2020, 10:58 IST
ಅಕ್ಷರ ಗಾತ್ರ

ಭಾಲ್ಕಿ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 2016 -17ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೀದರ್ ಜಿಲ್ಲೆಯ 10 ಹೊಸ ಗ್ರಾಮ ಪಂಚಾಯಿತಿ ವ್ಯಾಪ್ತಿಯ 4365 ರೈತರ ಬೆಳೆ ವಿಮೆ ಪರಿಹಾರ ಮೊತ್ತ ₹594.13 ಲಕ್ಷವನ್ನು ತಕ್ಷಣವೇ ರೈತರ ಖಾತೆಗೆ ಜಮಾ ಮಾಡಲು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ.

ಈ ಸಂಬಂಧ ಕೃಷಿ ಸಚಿವ ಬಿ.ಸಿ.ಪಾಟೀಲಗೆ ಪತ್ರ ಬರೆದಿರುವ ಅವರು, 2016-17ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಹೊಸ ದಾಗಿ ರಚನೆಯಾದ 10 ಗ್ರಾಮ ಪಂಚಾಯಿತಿಗಳಾದ ಗುಡಪಳ್ಳಿ, ಚಿಕನಗಾಂವ್, ಅಟ್ಟರ್ಗಾ, ಬೀರಿ (ಕೆ), ಏಣ
ಕೂರು, ಕೋಸಂ, ಲಂಜವಾಡ್, ಹೋಕ್ರಣಾ (ಬಿ), ಶ್ರೀಮಂಡಲ್ ಮತ್ತು ಜಲಸಂಗಿ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರು ವಿಮಾ ಕಂತು ಕಟ್ಟಿದರೂ ಕೂಡ ಬೆಳೆ ವಿಮೆ ಸಂಸ್ಥೆಯವರು ತಂತ್ರಾಂಶದಲ್ಲಿ ಹೊಸ ಗ್ರಾಮ ಪಂಚಾಯತಿಗಳು ನಮೂದಿಸಿಲ್ಲ ಎನ್ನುವ ನೆಪ ಹೇಳಿ, ಜಿಲ್ಲೆಯ 4365 ರೈತರ ₹594.13 ಲಕ್ಷ ಪರಿಹಾರ ಮೊತ್ತದಿಂದ ವಂಚಿತರನ್ನಾಗಿ ಮಾಡಿದ್ದಾರೆ.

ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಈ ವಿಷಯವನ್ನು ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ, ರಾಜ್ಯ ಸರ್ಕಾರದಿಂದ ವಿಮಾ ಸಂಸ್ಥೆ, ಕೇಂದ್ರ ಸರ್ಕಾರಕ್ಕೆ ಈ ತೀರ್ಮಾನ ಪುನರ್ ಪರಿಶೀಲಿಸಿ ರೈತರಿಗೆ ಬೆಳೆ ವಿಮೆ ಪರಿಹಾರ ಬಿಡುಗಡೆ ಮಾಡಲು ಪ್ರಸ್ತಾವನೆಯನ್ನು ಕಳುಹಿಸುವ ವ್ಯವಸ್ಥೆ ಮಾಡಿದ್ದೆ. ಹಾಗಾಗಿ, ವಿಮೆ ಸಂಸ್ಥೆಯವರು ವಿಮಾ ಕಂತು ಕಟ್ಟಿದ ರೈತರಿಗೆ ಪರಿಹಾರ ಮೊತ್ತ ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದಾರೆ.

ಸದ್ಯ ಕೋವಿಡ್ -19 ಲಾಕ್ ಡೌನ್ ನಿಂದ ರೈತರು ಅತ್ಯಂತ ಸಂಕಷ್ಟ ಎದುರಿಸುತ್ತಿರುವುದರಿಂದ ತಕ್ಷಣ ವಿಮೆ ಹಣವನ್ನು ಅವರ ಖಾತೆಗೆ ಜಮಾ ಮಾಡಲು ಸಂಬಂಧ ಪಟ್ಟವರಿಗೆ ಸೂಚಿಸಬೇಕು ಎಂದು ಕೃಷಿ ಸಚಿವರಿಗೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT