ಸ್ಟ್ಯಾಂಡ್‌ನಲ್ಲಿ ಸಾಲಾಗಿ ಜೋಡಿಸಿಟ್ಟಿರುವ ವಿವಿಧ ಬಗೆಯ ಸಸಿಗಳು
ಆರು ತಿಂಗಳು ಹೂ ಆರು ತಿಂಗಳು ತರಕಾರಿ
ರೋಹಿತ್ ಜಿರೋಬೆ ಅವರು ತಾರಸಿ ಹಾಗೂ ಮನೆಯ ಮೆಟ್ಟಿಲುಗಳ ಉದ್ದಕ್ಕೂ ಇರುವ ಕುಂಡಗಳಲ್ಲಿ ವರ್ಷದ ಆರು ತಿಂಗಳು ವಿವಿಧ ಬಗೆಯ ತರಕಾರಿ ಬೆಳೆದರೆ ಇನ್ನುಳಿದ ಅರ್ಧ ವರ್ಷ ಹೂ ಬೆಳೆಸುತ್ತಾರೆ. ತರಕಾರಿ ಬೆಳೆದಾಗ ಮನೆಯಲ್ಲಿ ಅಡುಗೆ ತಯಾರಿಸಲು ಹೊರಗಿನಿಂದ ಯಾವುದೇ ತರಕಾರಿ ತರುವುದಿಲ್ಲ. ಪೂಜೆಗೆ ಹೂ ಕೂಡ. ಇದರಿಂದ ಅವರಿಗೆ ಪ್ರತಿ ತಿಂಗಳು ಹಣ ಉಳಿತಾಯವಾಗುತ್ತಿದೆ. ‘ಹಣಕ್ಕಿಂತ ಮುಖ್ಯವಾಗಿ ತಾರಸಿ ಹೂದೋಟದಿಂದ ಮನಸ್ಸಿಗೆ ಖುಷಿ ನೀಡುತ್ತದೆ. ಒತ್ತಡದಲ್ಲಿ ಕೆಲಸ ನಿರ್ವಹಿಸಿ ಮನೆಗೆ ಬಂದು ಅಲ್ಲಿ ಕಾಲ ಕಳೆಯುತ್ತೇನೆ. ರಾತ್ರಿ ಮನೆ ಮಂದಿಯೆಲ್ಲ ಕುಳಿತುಕೊಂಡು ಹರಟುತ್ತೇವೆ. ಏನೋ ಒಂಥರಾ ಖುಷಿ ನೆಮ್ಮದಿ’ ಎನ್ನುತ್ತಾರೆ ರೋಹಿತ್ ಜಿರೋಬೆ.