ಬೀದರ್: ಜಿಲ್ಲೆಯಲ್ಲಿ ಒಟ್ಟು ಏಳು ಪ್ರಮುಖ ದೇಗುಲಗಳಿವೆ. ಕೆಲ ದೇವಸ್ಥಾನಗಳು ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿದ್ದರೆ, ಇನ್ನೂ ಕೆಲ ಮಂದಿರಗಳು ಕಂದಾಯ ಇಲಾಖೆಯ ಅಧೀನದಲ್ಲಿವೆ. ಎಲ್ಲ ದೇವಸ್ಥಾನಗಳಲ್ಲಿ ಸಾಕಷ್ಟು ಆದಾಯ ಬರುತ್ತಿದ್ದರೂ ದೇವಸ್ಥಾನಗಳ ಅಭಿವೃದ್ಧಿ ಅಷ್ಟಕ್ಕಷ್ಟೇ ಇತ್ತು. ಆದರೆ, ಮೂರು ವರ್ಷಗಳಲ್ಲಿ ದೇವಸ್ಥಾನ ಅಭಿವೃದ್ಧಿಗೂ ಪ್ರಾಮುಖ್ಯ ನೀಡಿರುವುದು ಭಕ್ತರಲ್ಲಿ ಸಂತಸ ತಂದಿದೆ.

ಕೋವಿಡ್ ಅವಧಿಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿದ ಕಾರಣ ಆದಾಯ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆದರೆ, ಅಭಿವೃದ್ಧಿಗೆ ಯಾವುದೇ ಸಮಸ್ಯೆಯಾಗಿಲ್ಲ. ದೇವಸ್ಥಾನ ಆಡಳಿತ ಮಂಡಳಿಗಳು ಕೋವಿಡ್ ಅವಧಿಯನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಂಡಿವೆ.

ನಗರದ ಹೊರವಲಯದಲ್ಲಿರುವ ನರಸಿಂಹ ಝರಣಾ ಗುಹಾದೇವಾಲಯಕ್ಕೆ ಹೋಗಲು ಮಂದಿರದ ಆವರಣದ ವರೆಗೂ ರಸ್ತೆ ನಿರ್ಮಿಸಿ ಒಂದು ಬಸ್ ತಂಗುದಾಣ ಸಹ ಕಟ್ಟಲಾಗಿದೆ. ಮಳೆಗಾಲದಲ್ಲಿ ಭಕ್ತರಿಗೆ ತೊಂದರೆಯಾಗದಂತೆ ಬೃಹತ್ ಹಾಲ್ ನಿರ್ಮಿಸಲಾಗಿದೆ. ಪಾಳು ಬಿದ್ದಿದ್ದ ಶೌಚಾಲಯಗಳಲ್ಲಿ ನೈರ್ಮಲ್ಯ ಕಾಪಾಡಲು ಒತ್ತು ಕೊಡಲಾಗಿದೆ.

ತೆಲಂಗಾಣ ಹಾಗೂ ಮಹಾರಾಷ್ಟ್ರದ ಭಕ್ತರೇ ನರಸಿಂಹ ಝರಣಾ ದೇವಸ್ಥಾನಕ್ಕೆ ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ. ಹೀಗಾಗಿ ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಾಡುತ್ತಿತ್ತು. ಒಂದು ಕೊಳವೆಬಾವಿ ತೋಡಿದ ನಂತರ ಪಕ್ಕದಲ್ಲೇ ಚಿಕ್ಕದಾದ ಹೊಂಡ ನಿರ್ಮಿಸಲಾಗಿದೆ. ಬೇಸಿಗೆಯಲ್ಲೂ ಅಂತರ್ಜಲ ಕಡಿಮೆಯಾಗದಂತೆ ಮಾಡಲಾಗಿದೆ.

ದೇವಸ್ಥಾನ ಹುಂಡಿಯಿಂದ 2020ರ ಏಪ್ರಿಲ್ 20ರಿಂದ ಆಗಸ್ಟ್ ವರೆಗೆ ₹ 14.27 ಲಕ್ಷ, ಸೆಪ್ಟೆಂಬರ್ನಲ್ಲಿ ₹ 79 ಸಾವಿರ, ಅಕ್ಟೋಬರ್ನಿಂದ ಡಿಸೆಂಬರ್ ವರೆಗೆ
₹91 ಸಾವಿರ ಆದಾಯ ಬಂದಿದೆ. ದೇವಸ್ಥಾನದಿಂದ ಬಂದ ಆದಾಯವನ್ನು ಸಿಬ್ಬಂದಿ ವೇತನ, ವಿದ್ಯುತ್ ಬಿಲ್ ಹಾಗೂ ಭಕ್ತರಿಗೆ ಸೇವೆ ಒದಗಿಸಲು ಬಳಸಲಾಗುತ್ತಿದೆ. ಹೆಚ್ಚುವರಿಯಾಗಿ ಉಳಿದ ಹಣವನ್ನು ಭಕ್ತರಿಗೆ ಮೂಲಸೌಕರ್ಯ ಒದಗಿಸಲು ವಿನಿಯೋಗಿಸಲಾಗುತ್ತಿದೆ. ಇಲ್ಲಿ ಎಲ್ಲ ಕಾರ್ಯ ಪಾರದರ್ಶಕವಾಗಿ ನಡೆಯುತ್ತಿದೆ ಎಂದು ನರಸಿಂಹ ಝರಣಾ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಅನಂತರಾವ್ ಕುಲಕರ್ಣಿ ಹೇಳುತ್ತಾರೆ.

‘ಮೂರು ವರ್ಷಗಳ ಅವಧಿಯಲ್ಲಿ ಸಾಕಷ್ಟು ಸುಧಾರಣೆ ಮಾಡಲಾಗಿದೆ. ಭಕ್ತರು ಇಲ್ಲಿಗೆ ಬಂದು ಪುಣ್ಯಸ್ನಾನ ಮಾಡುತ್ತಾರೆ. ನೀರಿನಲ್ಲಿ ಗುಹಾದೇವಾಲಯಕ್ಕೆ ಹೋಗಿ ಬಂದ ನಂತರ ಬಟ್ಟೆ ಬದಲಿಸಿಕೊಳ್ಳಲು ಕೊಠಡಿ, ಸ್ನಾನಗೃಹ ಹಾಗೂ ಇನ್ನಷ್ಟು ಶಾಚಾಲಯಗಳ ಬ್ಲಾಕ್ ನಿರ್ಮಿಸಲು ಉದ್ದೇಶಿಸಲಾಗಿದೆ’ ಎಂದು ತಿಳಿಸುತ್ತಾರೆ.

‘ನಾಲ್ಕು ವರ್ಷಗಳ ಹಿಂದೆ ಇಲ್ಲಿ ಸರಿಯಾದ ವ್ಯವಸ್ಥೆ ಇರಲಿಲ್ಲ. ಈಗ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಭಕ್ತರಿಗೆ ಎಲ್ಲ ರೀತಿಯ ವ್ಯವಸ್ಥೆಯನ್ನೂ ಮಾಡಲಾಗಿದೆ. ದೇಗುಲದ ಆವರಣದ ಸೌಂದರ್ಯೀಕರಣಕ್ಕೂ ಒತ್ತು ಕೊಡುವ ಅಗತ್ಯವಿದೆ. ಇದರಿಂದ ದೇವಸ್ಥಾನಕ್ಕೆ ಇನ್ನಷ್ಟು ಮೆರಗು ಬರಲಿದೆ’ ಎಂದು ದೇವರ ದರ್ಶನಕ್ಕೆ ಬಂದಿದ್ದ ತೆಲಂಗಾಣದ ನರಸಿಂಹಲು ಹಾಗೂ ನಾಗವೇಣಿ ಹೇಳುತ್ತಾರೆ.

ಐತಿಹಾಸಿಕ ಮಹತ್ವ ಪಡೆದ ಪಾಪನಾಶ ದೇಗುಲ ಸಹ ಅಭಿವೃದ್ಧಿ ಹೊಂದಿದೆ. ಪಕ್ಕದಲ್ಲಿ ಕಲ್ಯಾಣ ಮಂಟಪ ನಿರ್ಮಿಸಲಾಗಿದೆ. ಪುಷ್ಕರಣಿ ಶುಚಿಗೊಳಿಸಿ ಭಕ್ತರಿಗೆ ಅನುಕೂಲ ಮಾಡಿಕೊಡಲಾಗಿದೆ. ವಾಹನಗಳ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಲಾಗಿದೆ.

ಪೂರಕ ಮಾಹಿತಿ: ನಾಗೇಶ ಪ್ರಭಾ, ವೀರೇಶ ಮಠಪತಿ, ಮನ್ಮಥ ಸ್ವಾಮಿ, ಬಸವರಾಜ ಪ್ರಭಾ, ಮಾಣಿಕ ಭುರೆ, ಗುಂಡು ಅತಿವಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.