ಬೀದರ್: ಇಲ್ಲಿನ ಸಾಫ್ಟವೇರ್ ಎಂಜಿನಿಯರ್ ದಂಪತಿ ಸಚಿನ್ ಜಾಬಶೆಟ್ಟಿ ಹಾಗೂ ಮಂಗಳಾ ಗೌರಿ ಜಾಬಶೆಟ್ಟಿ ಅತಿ ಕಡಿಮೆ ಅವಧಿಯಲ್ಲಿ ಹೈದರಾಬಾದ್ನ 57 ಮೆಟ್ರೊ ರೈಲು ನಿಲ್ದಾಣಗಳನ್ನು ತಲುಪಿ ಹೊಸ ಗಿನ್ನಿಸ್ ವಿಶ್ವ ದಾಖಲೆ ಬರೆದಿದ್ದಾರೆ.

ಕಳೆದ ಡಿಸೆಂಬರ್ 14 ರಂದು ನವದೆಹಲಿಯ ಸುಜಯಕುಮಾರ ಮಿತ್ರಾ 2 ಗಂಟೆ 35 ನಿಮಿಷ 32 ಸೆಕೆಂಡ್ಗಳಲ್ಲಿ ಹೈದರಾಬಾದ್ನ ಎಲ್ಲ ಮೆಟ್ರೊ ರೈಲು ನಿಲ್ದಾಣಗಳಿಗೆ ಭೇಟಿ ಕೊಟ್ಟು ಹಿಂದಿನ ದಾಖಲೆಯನ್ನು ಹಿಂದಿಕ್ಕಿದರು. ಸಚಿನ್ ಜಾಬಶೆಟ್ಟಿ ಹಾಗೂ ಮಂಗಳಾ ಗೌರಿ ಜಾಬಶೆಟ್ಟಿ ದಂಪತಿ ಡಿಸೆಂಬರ್ 24 ರಂದು 2 ಗಂಟೆ 32 ನಿಮಿಷದ 45 ಸೆಕೆಂಡ್ಗಳಲ್ಲೇ ಎಲ್ಲ ಮೆಟ್ರೊ ರೈಲು ನಿಲ್ದಾಣಗಳಿಗೆ ಭೇಟಿ ನೀಡಿ ಹತ್ತು ದಿನಗಳ ಅಂತರದಲ್ಲೇ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.

ಮಿಯಾಪುರದಿಂದ ರಾಯದುರ್ಗ ವರೆಗಿನ 57 ಮೆಟ್ರೊ ರೈಲು ನಿಲ್ದಾಣಗಳನ್ನು ತಲುಪುವಾಗ ಅವರು 27 ಕೆಂಪು, 9 ಹಸಿರು ಹಾಗೂ 21 ನೀಲಿ ಗೆರೆ ಮೆಟ್ರೊ ರೈಲು ನಿಲ್ದಾಣಗಳನ್ನು ದಾಟಿದ್ದಾರೆ. ತಮ್ಮ ಇಡೀ ಪಯಣದ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಪ್ರತಿ ನಿಲ್ದಾಣಗಳಲ್ಲಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಸಾಕ್ಷಿಗಳ ಸಹಿ ಕೂಡ ಪಡೆದುಕೊಂಡಿದ್ದಾರೆ. ಇವರ ದಾಖಲೆಗೆ ಬೀದರ್ನ ಶಿವಕುಮಾರ ಲದ್ದೆ ಹಾಗೂ ಬೆಂಗಳೂರಿನ ಸಂಗಮೇಶ ನೈನೆಗಲಿ ಸಾಕ್ಷಿಯಾಗಿದ್ದಾರೆ.

‘ಮೂರು ತಿಂಗಳ ಮೊದಲೇ ಯೋಜನೆ ರೂಪಿಸಿದೇವು. ಅದಕ್ಕೆ ಬಹಳಷ್ಟು ಪೂರ್ವ ತಯಾರಿಯನ್ನೂ ನಡೆಸಿದೇವು. ಕೊನೆಗೆ ಪಯಣ ಆರಂಭಿಸಿ ಯಶ ಕಂಡೇವು’ ಎಂದು ಜಾಬಶೆಟ್ಟಿ ದಂಪತಿ ಸಂತಸ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.