ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾಲ್ಕಿ: ಸಿಡಿಲು ಬಡಿದು 27 ಆಡು, 4 ಕುರಿ ಸಾವು

Published 13 ಜೂನ್ 2024, 15:14 IST
Last Updated 13 ಜೂನ್ 2024, 15:14 IST
ಅಕ್ಷರ ಗಾತ್ರ

ಭಾಲ್ಕಿ: ತಾಲ್ಲೂಕಿನ ಕೋಟಗ್ಯಾಳ ಗ್ರಾಮದ ಸಂತೋಷ ಕಾಶಿನಾಥ ಮೇತ್ರೆ ಅವರಿಗೆ ಸೇರಿದ ಆಡು, ಕುರಿಗಳು ಗುರುವಾರ ಸಿಡಿಲು ಬಡಿದು ಸಾವನ್ನಪ್ಪಿವೆ.

ಸಂಜೆ ಮಳೆ ಆರಂಭವಾದಾಗ ಸಂತೋಷ ಮೇತ್ರೆ ಅವರು ಮೇಯಿಸುತ್ತಿದ್ದ ಆಡು, ಕುರಿಗಳು ಮರದ ಕೆಳಗೆ ನಿಂತಿದ್ದವು. ಆ ಸಮಯದಲ್ಲಿ ಸಿಡಿಲು ಬಡಿದು 27 ಆಡು, 2 ಕುರಿ, 2 ಕುರಿ ಮರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಒಂದು ಆಡಿನ ಬೆಲೆ ಅಂದಾಜು ₹15 ಸಾವಿರ ಇದೆ. ಆಡು, ಕುರಿಗಳ ಸಾವಿನಿಂದ ಸುಮಾರು ನಾಲ್ಕು ಲಕ್ಷ ರೂಪಾಯಿ ನಷ್ಟವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ನನಗೆ ಸೂಕ್ತ ಪರಿಹಾರ ನೀಡಿ ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕು ಎಂದು ಸಂತೋಷ ಮೇತ್ರೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT