ಬಸವಕಲ್ಯಾಣ: ತಾಲ್ಲೂಕಿನ ಚಂಡಕಾಪುರದ ಅಮೃತಕುಂಡ ದೇವಸ್ಥಾನ ಎಂದೇ ಕರೆಯುವ ಪ್ರಸಿದ್ಧ ರಾಮಲಿಂಗೇಶ್ವರ ದೇವಸ್ಥಾನಕ್ಕೆ ಶುಕ್ರವಾರ ಶ್ರಾವಣ ಸಮಾಪ್ತಿ ಅಂಗವಾಗಿ ನಡೆದ ಜಾತ್ರೆಗೆ ರಾಜ್ಯದ ವಿವಿಧೆಡೆಯ ಹಾಗೂ ಮಹಾರಾಷ್ಟ್ರ, ತೆಲಂಗಾಣದ ಅಪಾರ ಭಕ್ತರು ಬಂದು ದರ್ಶನ ಪಡೆದರು.

ರಾಷ್ಟ್ರೀಯ ಹೆದ್ದಾರಿ ಪಕ್ಕದ ಗುಡ್ಡದ ಇಳಿಜಾರಿನಲ್ಲಿರುವ ದೇವಸ್ಥಾನದ ಗರ್ಭಗೃಹದಲ್ಲಿನ ರಾಮಲಿಂಗಕ್ಕೆ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು. ಸಮೀಪದ ಗುಡ್ಡದ ಮೇಲಿನ ಸೋಮಲಿಂಗಕ್ಕೂ ವಿಶೇಷವಾಗಿ ಸಿಂಗರಿಸಿದ್ದರಿಂದ ಎರಡೂ ಕಡೆ ಭಕ್ತರು ಸಾಲಿನಲ್ಲಿ ನಿಂತು ತೆಂಗು, ಕರ್ಪೂರ, ಪುಷ್ಪಮಾಲೆ ಅರ್ಪಿಸಿದರು. ಕಾಣಿಕೆ ನೀಡಿ ಹರಕೆ ತೀರಿಸಿದರು. ಎದುರಿನ ಕಲ್ಯಾಣಿಯಲ್ಲಿ ಅಪಾರ ಭಕ್ತರು ಸ್ನಾನಗೈದರು. ಸುತ್ತಲಿನಲ್ಲಿ ಹಾಕಲಾಗಿದ್ದ ಅಂಗಡಿಗಳಿಂದ ಬೆಂಡು ಬತ್ತಾಸು, ಆಟಿಕೆ ಸಾಮಗ್ರಿಗಳನ್ನು ಖರೀದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.