ಜನವಾಡ: ರೋಟರಿ ಕ್ಲಬ್ಗಳ ಸದಸ್ಯರ ಕ್ರೀಡಾ ಪ್ರತಿಭೆಗೆ ವೇದಿಕೆ ಒದಗಿಸುವ ಭಾಗವಾಗಿ ರೋಟರಿ ಕಲ್ಯಾಣ ಝೋನ್ ವತಿಯಿಂದ ಬೀದರ್ ತಾಲ್ಲೂಕಿನ ಕಮಠಾಣ ಬಳಿಯ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ವಾರ್ಷಿಕ ಕ್ರೀಡಾಕೂಟ ನಡೆಯಿತು.

ರೋಟರಿ ಕ್ಲಬ್ ಆಫ್ ಬೀದರ್, ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ, ರೋಟರಿ ಕ್ಲಬ್ ಆಫ್ ಬೀದರ್ ಫೋರ್ಟ್, ರೋಟರಿ ಕ್ಲಬ್ ಆಫ್ ಬಸವಕಲ್ಯಾಣ, ರೋಟರಿ ಕ್ಲಬ್ ಆಫ್ ಹುಮನಾಬಾದ್, ರೋಟರಿ ಕ್ಲಬ್ ಆಫ್ ಭಾಲ್ಕಿ, ರೋಟರಿ ಕ್ಲಬ್ ಆಫ್ ಬೀದರ್ ಕ್ವೀನ್ಸ್ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಸದಸ್ಯರು ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ತಮ್ಮ ಕ್ರೀಡಾ ಕೌಶಲವನ್ನು ಪ್ರದರ್ಶಿಸಿದರು.

ಕ್ರಿಕೆಟ್, ಬಾಡ್ಮಿಂಟನ್, ಚೆಸ್, ಕೇರಂ, ಶಾಟ್ಪಟ್, ಜಾವೆಲಿನ್ ಥ್ರೋ, ಡಿಸ್ಕಸ್ ಥ್ರೋ, ಹಗ್ಗ ಜಗ್ಗಾಟ, 100 ಮೀ. ಓಟ, 200 ಮೀ. ಓಟ ಹಾಗೂ 400 ಮೀ. ರಿಲೇ ಸ್ಪರ್ಧೆಗಳು ನಡೆದವು.

ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ದಿಲೀಪಕುಮಾರ ಅವರು, ‘ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಲು ಸಹಕಾರಿಯಾಗಿವೆ’ ಎಂದು ತಿಳಿಸಿದರು.

ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಸುಮೀತ್ ಸಿಂದೋಲ್, ದಾವಣಗೆರೆಯ ರೋಟರಿ ಕ್ಲಬ್ ಡಿಸ್ಟ್ರಿಕ್ಟ್ ಕಾನ್ಫರೆನ್ಸ್ ಅಧ್ಯಕ್ಷ ಉಮೇಶ ಶೆಟ್ಟಿ ಮಾತನಾಡಿದರು.

ರೋಟರಿ ಕ್ಲಬ್ ಆಫ್ ಬೀದರ್ ಅಧ್ಯಕ್ಷ ಅಮರ ಡೋಲಿ, ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷೆ ಶ್ವೇತಾ ಮೇಗೂರ, ಕಾರ್ಯದರ್ಶಿ ಡಾ. ನಿತೇಶ ಬಿರಾದಾರ, ರೋಟರಿ ಕ್ಲಬ್ ಆಫ್ ಬೀದರ್ ಫೋರ್ಟ್ ಅಧ್ಯಕ್ಷ ಕಾಶೀನಾಥ ಪಾಟೀಲ, ರೋಟರಿ ಕ್ಲಬ್ ಆಫ್ ಬಸವಕಲ್ಯಾಣ ಅಧ್ಯಕ್ಷ ಸಾಗರ ಬಸನಾಳೆ, ರೋಟರಿ ಕ್ಲಬ್ ಆಫ್ ಬೀದರ್ ಕ್ವೀನ್ಸ್ ಅಧ್ಯಕ್ಷೆ ರುಚಿಕಾ ಷಾ, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಪ್ರತಿಭಾ ಪಾಟೀಲ, ಡಾ. ಸುಭಾಷ ಕರ್ಪೂರ್, ರೋಟರಿ ಕ್ಲಬ್ಗಳ ಸದಸ್ಯರಾದ ಸತೀಶ ಸ್ವಾಮಿ, ನಿತಿನ್ ಕರ್ಪೂರ, ಸೂರ್ಯಕಾಂತ ರಾಮಶೆಟ್ಟಿ, ರವಿ ಮೂಲಗೆ. ರಾಮಕೃಷ್ಣ, ವಿಕ್ರಮ ತಗಾರೆ, ವಿವೇಕ ಪಟ್ನೆ, ಸತ್ಯಪ್ರಕಾಶ ಇದ್ದರು. ಸಚ್ಚಿದಾನಂದ ಚಿದ್ರೆ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.