ಮಂಗಳವಾರ, ನವೆಂಬರ್ 29, 2022
29 °C

ಕುಂದು ಕೊರತೆ: ರಸ್ತೆ ಮೇಲೆ ಚರಂಡಿ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಮನಾಬಾದ್: ತಾಲ್ಲೂಕಿನ ಬೇನ್ ಚಿಂಚೋಳಿ ಗ್ರಾಮದಲ್ಲಿ ಬಹುತೇಕ ಬಡಾವಣೆಗಳಲ್ಲಿ ಚರಂಡಿಗಳಿಲ್ಲ.

ಕೆಲವು ದಿನಗಳ‌ ಹಿಂದೆ ಮೂರ್ನಾಲ್ಕು ಕಡೆಗಳಲ್ಲಿ ಚರಂಡಿ ನಿರ್ಮಿಸಲಾಗಿದೆ. ಅದು ಅವೈಜ್ಞಾನಿಕವಾಗಿದೆ. ಹೀಗಾಗಿ ಸಂಬಂಧಿಸಿದವರು ಕಾಮಗಾರಿ ಮಾಡಿರುವವರ‌ ವಿರುದ್ಧ ಕ್ರಮಕೈಗೊಳ್ಳಬೇಕು.

ಸುನೀಲ, ನಿವಾಸಿ

ಕಾಮಗಾರಿ ಮುಗಿಸಿ

ಜನವಾಡ: ಚಿಮಕೋಡ–ನೇಮತಾಬಾದ್ ನಡುವಿನ ಸೇತುವೆ ಕಾಮಗಾರಿ 20 ವರ್ಷಗಳಿಂದ ಅಪೂರ್ಣವಾಗಿದೆ. 600-ರಿಂದ 700 ಎಕರೆ ಭೂಮಿ ಹೊಂದಿರುವ ರೈತರು ಇದೇ ಮಾರ್ಗದಲ್ಲಿ ಸಾಗುತ್ತಾರೆ. ಮಳೆಗಾಲದಲ್ಲಿ ನೀರು ನಿಂತು ಫತೇಪುರ, ಕಂಗಟ್ಟಿ, ಅಲ್ಲಾಪೂರ ರೈತರು ತಮ್ಮ ಹೊಲಗಳಿಗೆ ಹೋಗುವ ಪರಿಸ್ಥಿತ್ತಿ ನಿಮಾರ್ಣನವಾಗಿದೆ.

ಸೇತುವೆ ಕಾಮಗಾರಿ ಪೂರ್ಣಗೊಂಡರೆ ಗ್ರಾಮದ ರೈತರಿಗೆ ಅನೂಕುಲವಾಗಲಿದೆ. ಜಿಲ್ಲಾಡಳಿತ ಈ ದಿಸೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು.

ಜಗನ್ನಾಥ ಕಂದಗುಳೆ, ಅಣ್ಣಾರಾವ ಬಿರಾದರ್ ಸಂಜುಕುಮಾರ ಸಾಗರ, ಅರ್ಜುನರಾವ್ ಬಿರಾದರ್, ವಿನೋದ ಬಾಬುರಾವ್, ಬಸವರಾಜ ವರೊಟ್ಟಿ, ಶಿವಕುಮಾರ ಢೆಂಪೆ, ಪಿರಪ್ಪ ಹಳ್ಳೆ, ಮಾರುತಿ ಕಡೆದ್ದೊಡೆ

ಬೋರಾಳ: ರಸ್ತೆ ದುರಸ್ತಿ ಮಾಡಿ

ಔರಾದ್: ತಾಲ್ಲೂಕಿನ ಬೋರಾಳ ಗ್ರಾಮದಲ್ಲಿ ಕೆಟ್ಟ ರಸ್ತೆಯ ಕಾರಣಕ್ಕೆ ಜನರಿಗೆ ತೊಂದರೆ ಆಗಿದೆ.

ಬಡಿಗೇರಾರ ಬಡಾವಣೆ ಸೇರಿದಂತೆ ವಿವಿಧೆಡೆ ರಸ್ತೆ ಮೇಲೆ ಹೊಲಸು ನೀರು ನಿಂತು ಸುಗಮ ಸಂಚಾರಕ್ಕೆ ಸಮಸ್ಯೆಯಾಗಿದೆ. ಮಕ್ಕಳು, ಮಹಿಳೆಯರು ಇಲ್ಲಿ ಓಡಾಡಲು ಹರಸಹಾಸ ಪಡಬೇಕಿದೆ. ಕೆಲವರು ಬಿದ್ದು ಕೈ–ಕಾಲು ಮುರಿದುಕೊಂಡಿದ್ದಾರೆ. ಈ ವಿಷಯವನ್ನು ಗ್ರಾಮ ಪಂಚಾಯಿತಿಯವರ ಗಮನಕ್ಕೆ ತಂದರೂ ಕನಿಷ್ಠ ಗುಂಡಿ ಮುಚ್ಚುಲೂ ಸಾಧ್ಯವಾಗಿಲ್ಲ. ಮೇಲಧಿಕಾರಿಗಳು ಈ ಕುರಿತು ಕಾಳಜಿವಹಿಸಿ ಕಚ್ಚಾ ರಸ್ತೆಯನ್ನಾದರೂ ಮಾಡಿ ಜನರ ಸಮಸ್ಯೆಗೆ ಸ್ಪಂದಿಸಬೇಕು.

ಸಂತೋಷ ಮೇತ್ರೆ, ರಾಜಕುಮಾರ, ಬೋರಾಳ ನಿವಾಸಿಗಳು

ಕೊಳವೆಬಾವಿ ದುರಸ್ತಿ ಮಾಡಿ

ಕಮಲನಗರ: ತಾಲ್ಲೂಕಿನ ತಪಶ್ಯಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೊಳವೆಬಾವಿ ಕೆಟ್ಟು ಹೋಗಿ ಎರಡು ವರ್ಷಗಳು ಕಳೆದಿವೆ. ಮಕ್ಕಳಿಗೆ ಸಮರ್ಪಕವಾಗಿ ಕುಡಿಯುವ ನೀರು ಸಿಗುತ್ತಿಲ್ಲ. ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಪ್ರಯೋಜನವಾಗಿಲ್ಲ.
ಸಂಬಂಧಪಟ್ಟ ಅಧಿಕಾರಿಗಳು ಕೊಳವೆಬಾವಿ ದುರಸ್ತಿ ಮಾಡಬೇಕು.

ಅಜಯ ಕೋಟೆ, ಕಮಲನಗರ ಕರವೇ ಅಧ್ಯಕ್ಷ

ನಾಮಫಲಕ ತೆರವು ಮಾಡಿ

ಬೀದರ್‌: ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಆದರೆ ನಗರದ ಹೃದಯ ಭಾಗದಲ್ಲಿರುವ ಕನ್ನಡಾಂಬೆ ವೃತ್ತದ ಮೇಲೆ ಇಂಗ್ಲಿಷ್ ಪದ ರಾರಾಜಿಸುತ್ತಿದೆ. ಬೀದರ್ ನಗರದಾದ್ಯಂತ ವಿವಿಧ ಹೋಟೆಲ್, ಅಂಗಡಿಗಳ ಮೇಲೆ ಇಂಗ್ಲಿಷ್ ಮತ್ತು ಹಿಂದಿ ಬರಹಗಳು ಇವೆ. ಅಕ್ಟೋಬರ್ ಒಳಗೆ ಅವುಗಳನ್ನು ತೆರವು ಮಾಡಿ ಕನ್ನಡದಲ್ಲಿ ಬರೆಸುವಂತೆ ಸೂಚಿಸಬೇಕು. ಇಲ್ಲವಾದಲ್ಲಿ ಮುಂದಿನ ಆಗು-ಹೋಗುಗಳಿಗೆ ನೇರ ಹೊಣೆ ಜಿಲ್ಲಾಡಳಿತವೇ ಆಗುತ್ತದೆ.

ಸ್ವಾಮಿದಾಸ ಕೆಂಪೆನೋರ, ಕಲ್ಯಾಣ ಕರ್ನಾಟಕಾ ನಿರ್ಮಾಣ ಸೇನೆಯ ಅಧ್ಯಕ್ಷ, ನವೀನ ಅಲ್ಲಾಪೂರೆ, ಸಂಗಮೇಶ ಯಣಕೂರ, ಶಶಿಕಾಂತ ಪಾಟೀಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.