ಭಾಲ್ಕಿ: ಬೀದರ್ ವಿಶ್ವವಿದ್ಯಾಲಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯುವ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು. ಅಂದಾಗ ಮಾತ್ರ ವಿಶ್ವವಿದ್ಯಾಲಯ ಆರಂಭವಾಗಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ತಾಲ್ಲೂಕಿನ ಹಾಲಹಳ್ಳಿ ಗ್ರಾಮದ ಬೀದರ್ ವಿಶ್ವವಿದ್ಯಾಲಯದಲ್ಲಿ ನಡೆದ ಬೀದರ್ ವಿಶ್ವವಿದ್ಯಾಲಯದ ಎರಡನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಬೀದರ್ ವಿಶ್ವವಿದ್ಯಾಲಯಕ್ಕೆ 322 ಎಕರೆ ಜಮೀನು ಕೊಡಿಸಿದ್ದೇನೆ. ವಿಶ್ವವಿದ್ಯಾಲಯಕ್ಕೆ ಜಮೀನಿನ ಕೊರತೆ ಇಲ್ಲ. ಹಾಲಹಳ್ಳಿಯಲ್ಲಿ ಮೊದಲು ಕಲಬುರಗಿ ವಿಶ್ವವಿದ್ಯಾಲಯದ ಭಾಗವಾಗಿ ಸ್ನಾತಕೋತ್ತರ ಕೇಂದ್ರ ನಡೆಯುತ್ತಿತ್ತು. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬೀದರ್ ವಿಶ್ವವಿದ್ಯಾಲಯ ಘೋಷಣೆ ಮಾಡಲಾಗಿತ್ತು. ಆದರೆ, ಕೇವಲ ಎರಡು ಕೋಟಿ ಅನುದಾನವು ಮೀಸಲಿಡಲಾಗಿತ್ತು. ಆದರೆ ಅನುದಾನ ಬಂದಿಲ್ಲ’ ಎಂದು ತಿಳಿಸಿದರು.

‘ಒಂದು ರಾಷ್ಟ್ರ, ಸಮಾಜದ ಪ್ರಗತಿ ಆ ರಾಷ್ಟ್ರದಲ್ಲಿ ಎಷ್ಟು ಜನ ಸುಶಿಕ್ಷಿತರಿದ್ದಾರೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಇಂದಿನದು ಜ್ಞಾನ ಆಧಾರಿತ ಸಮಾಜ. ಜ್ಞಾನವೇ ಶಕ್ತಿ. ಆಧುನಿಕ ಯುಗದಲ್ಲಿ ಎಲ್ಲ ಕ್ಷೇತ್ರದಲ್ಲೂ ಪೈಪೋಟಿ ಇದೆ. ಜ್ಞಾನ ಇದ್ದವರು ಶಿಕ್ಷಣದಲ್ಲಿ ಸುಲಭವಾಗಿ ಯಶಸ್ಸು ಗಳಿಸಬಹುದು’ ಎಂದು ಹೇಳಿದರು.

‘ಅಂಗನವಾಡಿಯಿಂದ 10ನೇ ತರಗತಿವರೆಗೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಲಾಗುತ್ತದೆ. ಅಲ್ಲಿ ಮೂಲಸೌಕರ್ಯ ಕಲ್ಪಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆದರೆ ಪದವಿಪೂರ್ವ, ಪದವಿ, ಸ್ನಾತಕೋತ್ತರ ಹಂತಗಳಲ್ಲಿ ಮೂಲಸೌಕರ್ಯದ ಕೊರತೆ ನಿವಾರಣೆಗೆ ಅಷ್ಟೇ ಪ್ರಮಾಣದ ಆದ್ಯತೆ ದೊರಕುತ್ತಿಲ್ಲ’ ಎಂದು ತಿಳಿಸಿದರು.

‘ವಿಶ್ವವಿದ್ಯಾಲಯ ಅಧೀನಕ್ಕೊಳಪಟ್ಟ ಕಾಲೇಜುಗಳಲ್ಲಿ ಸುಮಾರು ಮೂವತ್ತು ಸಾವಿರ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಪ್ರತಿಭೆಯ ಕೊರತೆ ಇಲ್ಲ. ಕಠಿಣ ಪರಿಶ್ರಮ ಪಟ್ಟರೆ ಎಷ್ಟೇ ದೊಡ್ಡ ಗುರಿ ಇದ್ದರೂ ಅದನ್ನು ನನಸು ಮಾಡಿಕೊಳ್ಳಬಹುದು. ಶಕ್ತಿಯೇ ಜೀವನ. ದುರ್ಬಲತೆಯ ಮರಣ’ ಎಂದರು.

‘ಮಹಿಳಾ ಸಬಲೀಕರಣಕ್ಕಾಗಿ ಹೆಚ್ಚಿನ ಮಹತ್ವ ಕೊಡಲಾಗುತ್ತಿದೆ. ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿ ಶಕ್ತಿ ತುಂಬುವ ಕಾರ್ಯ ನಮ್ಮ ಸರ್ಕಾರ ಮಾಡುತ್ತಿದೆ. ವಿದ್ಯಾರ್ಥಿಗಳು ಉದ್ಯೋಗಿಗಳಾಗದೆ ಬೇರೆಯವರಿಗೆ ಉದ್ಯೋಗ ನೀಡುವ ಉದ್ಯೋಗದಾತರು ಆಗಬೇಕು’ ಎಂದು ತಿಳಿಸಿದರು.

‘ವಿಶ್ವವಿದ್ಯಾಲಯದಲ್ಲಿ ಮೂಲಸೌಕರ್ಯ ಕೊರತೆ ಇದೆ. ಆಡಳಿತ ಕಟ್ಟಡ ಬೇಕು. ಸುಮಾರು 14 ಸ್ನಾತಕೋತ್ತರ ಕೋರ್ಸ್ಗಳಿಗೆ ಪ್ರತ್ಯೇಕ ವಿಭಾಗಗಳು ಬೇಕು. ಕ್ರೀಡಾಂಗಣ, ವಸತಿ ಸಂಕೀರ್ಣ, ಬಾಲಕ, ಬಾಲಕಿಯರ ವಸತಿ ಗೃಹ, ಕಾಯಂ ಉಪನ್ಯಾಸಕರು ನೇಮಕ ಸೇರಿದಂತೆ ಒಟ್ಟು 24 ಬೇಡಿಕೆಗಳು ಇವೆ. ಇವುಗಳನ್ನು ಈಡೇರಿಸಲಾಗುವುದು’ ಎಂದು ಹೇಳಿದರು.

‘ವಿಶ್ವವಿದ್ಯಾಲಯಕ್ಕೆ ಮಂಜೂರಿ ಆಗಿರುವ 29 ಬೋಧಕ ಹುದ್ದೆಗಳನ್ನು ಮೇರಿಟ್ ಕಂ ರೋಸ್ಟರ್ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ನೇಮಕಾತಿ ಆರಂಭಿಸಬೇಕು. ಯಾವುದೇ ಕಾರಣಕ್ಕೂ ದೂರು ಬರದಂತೆ ಪಾರದರ್ಶಕವಾಗಿ ನೇಮಕ ನಡೆಯಬೇಕು. 109 ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಿ. ನೇಮಕಾತಿಯಲ್ಲಿ ಯಾರೂ ಹಸ್ತಕ್ಷೇಪ ಮಾಡುವುದಿಲ್ಲ. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ನೇಮಕಾತಿ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದರು.

ಪೌರಾಡಳಿತ ಸಚಿವ ರಹೀಂ ಖಾನ್ ಮಾತನಾಡಿ, ‘ಬಿಜೆಪಿ ಸರ್ಕಾರದಲ್ಲಿ ಬೀದರ್ ವಿಶ್ವವಿದ್ಯಾಲಯ ಆರಂಭಕ್ಕೆ ₹100 ಕೋಟಿ ಬಿಡುಗಡೆಗೆ ಅಂದಿನ ಸಚಿವ ಅಶ್ವಥ್ ನಾರಾಯಣ್ ಅವರಿಗೆ ಆಗ್ರಹಿಸಿದ್ದೆ. ₹2 ಕೋಟಿ ಅನುದಾನ ಮೀಸಲಿಟ್ಟಿದ್ದಕ್ಕೆ ವಿಧಾನಸಭೆಯಲ್ಲಿ ತಕರಾರು ತೆಗೆದಿದ್ದೆ’ ಎಂದರು.

‘ಬೀದರ್ ಹೆಸರು ಇಡೀ ಜಗತ್ತಿನಲ್ಲಿದೆ. ಬೀದರ್ನಲ್ಲಿದ್ದ ಗವಾನ್ ವಿಶ್ವವಿದ್ಯಾಲಯದಲ್ಲಿ ಓದಲು ಜಗತ್ತಿನ ವಿವಿಧ ದೇಶಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ನಾನು, ಸಚಿವ ಈಶ್ವರ ಖಂಡ್ರೆ ಜವಬ್ದಾರಿ ವಹಿಸಿಕೊಂಡು ಮುಂದಿನ ಐದು ವರ್ಷದಲ್ಲಿ ಉತ್ತಮ ವಿಶ್ವವಿದ್ಯಾಲಯವನ್ನಾಗಿ ಬೀದರ್ ವಿಶ್ವವಿದ್ಯಾಲಯವನ್ನು ಬದಲಾವಣೆ ಮಾಡುತ್ತೇವೆ’ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಮಾರುತಿರಾವ್ ಮೂಳೆ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಕುಲಪತಿ ಬಿ.ಎಸ್. ಬಿರಾದಾರ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ, ಬೀದರ್ ನಗರಸಭೆ ಅಧ್ಯಕ್ಷ ಗೌಸೋದ್ದಿನ್, ಸಿಂಡಿಕೇಟ್ ಸದಸ್ಯರಾದ ನಾಗಭೂಷಣ ಮಡೆಪ್ಪಾ, ಬಿ.ಸಿ.ಶಾಂತಲಿಂಗ, ಮಲ್ಲಿಕಾರ್ಜುನ ಕನಕಟ್ಟೆ, ಶಿವನಾಥ ಎಂ.ಪಾಟೀಲ, ಸಚಿನ್ ಶಿವರಾಜ, ವಿಠ್ಠಲದಾಸ ಪ್ಯಾಗೆ, ಅರ್ಜುನ್ ಮರೆಪ್ಪಾ ಕನಕ, ಅಬ್ದುಲ್ ಸತ್ತಾರ್ ಚಾಂದಸಾಬ್, ವೈಷ್ಣವಿ ಪಾಟೀಲ, ಕುಲಸಚಿವ ಪರಮೇಶ್ವರ ನಾಯಕ್, ಸುರೇಖಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.