ಬೀದರ್: ‘ಬೀದರ್ ಜಿಲ್ಲೆಯಲ್ಲಿ ಪೊಲೀಸರು ಇದ್ದಾರೋ ಅಥವಾ ಇಲ್ಲವೋ ಎಂಬಂತೆ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಸಾಲು ಸಾಲು ಅಪರಾಧ ಪ್ರಕರಣಗಳೇ ಇದಕ್ಕೆ ಸಾಕ್ಷಿ. ಇದು ಸರ್ಕಾರಿ ಪ್ರಾಯೋಜಿತ ದರೋಡೆ ಅನಿಸುತ್ತದೆ’ ಎಂದು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸೋಮನಾಥ ಪಾಟೀಲ ಗಂಭೀರ ಆರೋಪ ಮಾಡಿದರು.

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ. ಕಳೆದ ಒಂದು ವರ್ಷದಿಂದ ತಿಂಗಳಿಗೆ ಸರಾಸರಿ ಜಿಲ್ಲೆಯಲ್ಲಿ ಎರಡು ಕೊಲೆಗಳಾಗುತ್ತಿವೆ. ಕೂಡಲೇ ಜಿqಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಬದಲಿಸಬೇಕೆಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಬಸವಕಲ್ಯಾಣದಲ್ಲಿ ವಾಹನಗಳ ಸ್ಕ್ರ್ಯಾಪ್ ಮಾಫಿಯಾ ಕೆಲಸ ಮಾಡುತ್ತಿದೆ. ಯಾವುದೇ ವಾಹನ ಸ್ಕ್ಯಾಪ್ ಮಾಡಬೇಕಾದರೆ ಆರ್ಟಿಒ ಅನುಮತಿ ಅಗತ್ಯ. ಆದರೆ, ಅದನ್ನು ಮಾಡುತ್ತಿಲ್ಲ. ಬಯೋ ಡೀಸೆಲ್ ಜಾಲ ಕೂಡ ಸಕ್ರಿಯವಾಗಿದೆ. ಪೊಲೀಸರು ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣವನ್ನು ಸರಿಯಾಗಿ ನಿಭಾಯಿಸಲಿಲ್ಲ. ಎಸ್ಬಿಐ ಎಟಿಎಂ ದರೋಡೆ ಪ್ರಕರಣದ ಆರೋಪಿಗಳು ಇಂದಿಗೂ ಪತ್ತೆ ಮಾಡಿಲ್ಲ. ಆ ಘಟನೆ ನಂತರ ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಪೊಲೀಸರು ದೊಡ್ಡದಾಗಿ ಹೇಳಿದ್ದರು. ಇನ್ನು ಮುಂದಾದರೂ ಪರಿಸ್ಥಿತಿ ಸರಿಹೋಗಬಹುದು ಎಂದು ಜನ ಅಂದುಕೊಂಡಿದ್ದರು. ಆದರೆ, ಏನೂ ಬದಲಾಗಿಲ್ಲ ಎಂದು ಟೀಕಿಸಿದರು.

ಮಾಜಿ ಯೋಧನ ಮನೆಯಲ್ಲಿ 25 ತೊಲೆ ಬಂಗಾರ ಕಳ್ಳತನವಾಗಿದ್ದರೆ 15 ತೊಲೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದಾರೆ. ಹುಮನಾಬಾದ್ನಲ್ಲಿ ಡೈಜೋಡೆ ಎಂಬುವರ ಮನೆಯಿಂದ 24 ತೊಲೆ ಬಂಗಾರ ಕಳುವಾಗಿತ್ತು. ಆದರೆ, 17 ತೊಲೆ ಮರಳಿಸಿದ್ದಾರೆ. ಬೀದರ್ನ ಓಲ್ಡ್ ಆದರ್ಶ ಕಾಲೊನಿಯಲ್ಲಿ ನಡೆದ ಡಕಾಯಿತಿಯಲ್ಲಿ 50 ತೊಲೆ ಚಿನ್ನಾಭರಣ ಒಯ್ದಿದ್ದಾರೆ. ಆದರೆ, ಎಫ್ಐಆರ್ನಲ್ಲಿ ಕಡಿಮೆ ದಾಖಲಿಸಿದ್ದಾರೆ. ಹುಮನಾಬಾದ್ನಲ್ಲಿ ಎಸ್ಬಿಐ ನೌಕರನ ಮನೆಯಲ್ಲಿ ಕಳ್ಳತನವಾಗಿದೆ. ಸ್ವತ್ತು ಕಳೆದುಕೊಂಡ ಮಾಲೀಕರು ಕೊಟ್ಟ ದೂರಿಗೂ ಎಫ್ಐಆರ್ನಲ್ಲಿ ದಾಖಲಿಸುತ್ತಿರುವುದರಲ್ಲಿ ವ್ಯತ್ಯಾಸ ಆಗುತ್ತಿದೆ. ಯಾವುದಾದರೂ ಅಪರಾಧ ಪ್ರಕರಣ ನಡೆದರೆ ಅದು ಹೊರಗೆ ಗೊತ್ತಾಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರದ ಬಳಿ ಹಣವಿಲ್ಲ. ಗ್ಯಾರಂಟಿ ಹೆಸರಿನಲ್ಲಿ ದಿವಾಳಿಯಾಗಿದೆ. ಸಚಿವರು ಏನು ಮಾಡುತ್ತಿದ್ದಾರೆ? ಎಸ್ಪಿಯವರನ್ನು ಬದಲಿಸಬೇಕಿತ್ತು. ಕಲಬುರಗಿಯಲ್ಲಿ, ಮಂಗಳೂರಿನಲ್ಲಿ ನಡೆದ ದರೋಡೆ ಪ್ರಕರಣವನ್ನು ಅಲ್ಲಿನ ಪೊಲೀಸರು ಭೇದಿಸಿದ್ದಾರೆ. ಸಚಿವರು ಗಮನಿಸುತ್ತಿಲ್ಲವೇ? ಅವರ ಕುಮ್ಮಕ್ಕು ಇದೆಯಾ ಎಂಬ ಅನುಮಾನ ಬರುತ್ತಿದೆ. ಕೂಡಲೇ ಎಸ್ಪಿಯವರನ್ನು ಬದಲಿಸಿ, ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕದಿದ್ದಲ್ಲಿ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ ರೆಡ್ಡಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಪೀರಪ್ಪ ಔರಾದೆ, ಕಿರಣ ಪಾಟೀಲ, ನಗರ ಮಂಡಲ ಅಧ್ಯಕ್ಷ ಶಶಿಧರ ಹೊಸಳ್ಳಿ, ಪ್ರಶಿಕ್ಷಣ ಪ್ರಕೋಷ್ಠದ ರಾಜ್ಯ ಸಂಚಾಲಕ ರಾಜಶೇಖರ ನಾಗಮೂರ್ತಿ, ಬಸವರಾಜ ಪವಾರ, ವೀರು ದಿಗ್ವಾಲ್ ಹಾಜರಿದ್ದರು.

‘ಕಾಶ್ಮೀರದಲ್ಲಿ ಯಾರ ವೈಫಲ್ಯ ತಿಳಿದು ಕ್ರಮ’

‘ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ದಾಳಿಯ ಭದ್ರತಾ ವೈಫಲ್ಯಕ್ಕೆ ಹೊಣೆ ಯಾರು? ಇದುವರೆಗೆ ಪ್ರಧಾನಿಯಾಗಲಿ, ಗೃಹಸಚಿವರಾಗಲಿ ರಾಜೀನಾಮೆ ಏಕೆ ಕೊಟ್ಟಿಲ್ಲ. ಹಿಂದಿನ ಯುಪಿಎ ಸರ್ಕಾರದಲ್ಲಿ ಈ ರೀತಿ ಘಟನೆ ನಡೆದಾಗ ಅಂದಿನ ಗೃಹಸಚಿವ ಶಿವರಾಜ ಪಾಟೀಲ ಅವರಿಂದ ರಾಜೀನಾಮೆ ಪಡೆಯುವವರೆಗೆ ಬಿಜೆಪಿಯವರು ಹೋರಾಟ ನಡೆಸಿದ್ದೀರಿ. ಈಗೇಕೆ ಯಾರ ವಿರುದ್ಧವೂ ಕ್ರಮವಾಗುತ್ತಿಲ್ಲ’ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಭಗವಂತ ಖೂಬಾ, ‘ಯಾವ ಕಾರಣಕ್ಕಾಗಿ ಘಟನೆ ನಡೆದಿದೆ ಎನ್ನುವುದರ ಬಗ್ಗೆ ಈಗಾಗಲೇ ಚರ್ಚೆಯಾಗಿದೆ. ಇದರಲ್ಲಿ ಯಾರ ವೈಫಲ್ಯ ಆಗಿದೆ ಎನ್ನುವುದನ್ನು ತಿಳಿದು, ಮುಂದಿನ ದಿನಗಳಲ್ಲಿ ಕ್ರಮ ಜರುಗಿಸುತ್ತಾರೆ’ ಎಂದರು.

ಪ್ರಧಾನಿ ಮೋದಿಯವರಿಗೆ ಅವರ ಜವಾಬ್ದಾರಿ ಗೊತ್ತು. ಪಹಲ್ಗಾಮ್ನಲ್ಲಿ ನಡೆದ ಘಟನೆಯ ಮರುದಿನ ಅವರು ಬಿಹಾರದಲ್ಲಿ ಚುನಾವಣಾ ರ್ಯಾಲಿ ನಡೆಸಿಲ್ಲ. ಪೂರ್ವನಿಗದಿತ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸರ್ವಪಕ್ಷಗಳ ಸಭೆಗೆ ಗೃಹಸಚಿವರನ್ನು ಕಳಿಸಿದ್ದರು. ಬಿಜೆಪಿ ಸರ್ಕಾರದಿಂದಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಪಂಚಾಯಿತಿ ಹಾಗೂ ವಿಧಾನಸಭೆ ಚುನಾವಣೆಗಳು ಸುಗಮವಾಗಿ ನಡೆದಿವೆ. ಅಲ್ಲಿ ಶಾಂತಿ ನೆಲೆಸಿದೆ. ಈ ಕಾರಣಕ್ಕಾಗಿಯೇ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಅಲ್ಲಿಗೆ ಹೋಗಲು ಆರಂಭಿಸಿದ್ದಾರೆ ಎಂದು ಸರ್ಕಾರವನ್ನು ಸಮರ್ಥಿಸಿಕೊಂಡರು.

‘ಭಾಲ್ಕಿಗೆ ಸೀಮಿತವಾಗಿದ್ದ ದರೋಡೆ, ಸುಲಿಗೆ ಎಲ್ಲೆಡೆ’

‘ಜಿಲ್ಲಾ ಉಸ್ತುವಾರಿ ಸಚಿವರು ಈ ಹಿಂದೆ ಶಾಸಕರಿದ್ದಾಗ ದರೋಡೆ, ಸುಲಿಗೆ ಪ್ರಕರಣಗಳು ಭಾಲ್ಕಿಗೆ ಸೀಮಿತವಾಗಿದ್ದವು. ಅವರು ಉಸ್ತುವಾರಿ ಸಚಿವರಾದ ನಂತರ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಇದು ಸಾಮಾನ್ಯವಾಗಿದೆ’ ಎಂದು ಭಗವಂತ ಖೂಬಾ ಅವರು ಸಚಿವ ಈಶ್ವರ ಬಿ. ಖಂಡ್ರೆಯವರ ಹೆಸರು ಪ್ರಸ್ತಾಪಿಸದೆ ಆರೋಪಿಸಿದರು.

ಎಸ್ಪಿಯವರು ಸಕ್ರಿಯರಾಗಿಲ್ಲ. ಅವರನ್ನು ವರ್ಗಾವಣೆಗೊಳಿಸಬೇಕು. ಈ ಬಗ್ಗೆ ಹಿಂದೆಯೂ ಅನೇಕ ಸಲ ಹೇಳಿದ್ದೇವೆ. ಆದರೆ, ವಿರೋಧ ಪಕ್ಷದ ಮುಖಂಡರ ಭಾವನೆಗಳನ್ನು ಸಚಿವರು ಅರಿತಿಲ್ಲ. ಮೇಲಿಂದ ಮೇಲೆ ದರೋಡೆಗಳು ನಡೆಯುತ್ತಿರುವುದಕ್ಕೆ ಸಚಿವರ ಮೇಲೆಯೇ ಅನುಮಾನ ಬರುತ್ತದೆ. ಇವರ ನಿರ್ದೇಶನದ ಮೇರೆಗೆ ನಡೆಯುತ್ತಿವೆ ಎಂದು ಸಂದೇಹ ಬರುತ್ತದೆ ಎಂದರು.

ಉಸ್ತುವಾರಿ ಸಚಿವರೇ.. ಬೀದರ್ ಜಿಲ್ಲೆಯ ಜನರನ್ನು ದರೋಡೆಕೋರರು, ಕಳ್ಳರು, ಭ್ರಷ್ಟಾಚಾರಿಗಳಿಂದ ರಕ್ಷಿಸಿ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.