ಬೀದರ್: ಕೋವಿಡ್ ಪ್ರಯುಕ್ತ ಬಸವ ಕಾಯಕ, ದಾಸೋಹ (ಬಿ.ಕೆ.ಡಿ) ಫೌಂಡೇಷನ್ 50 ಜನ ಅಂಗವಿಕಲರಿಗೆ ಆಹಾರಧಾನ್ಯ ಕಿಟ್ ಉಚಿತವಾಗಿ ವಿತರಿಸುವ ಮೂಲಕ ನೆರವಾಗಿದೆ.

ಇಲ್ಲಿಯ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗ ಮಂದಿರದಲ್ಲಿ ಫೌಂಡೇಷನ್ ಅಧ್ಯಕ್ಷ ಬಸವರಾಜ ಧನ್ನೂರ ಕಿಟ್ ವಿತರಿಸಿದರು.

ಕಷ್ಟದಲ್ಲಿರುವವರಿಗೆ ಅನೇಕ ಸಂಘ– ಸಂಸ್ಥೆಗಳು, ದಾನಿಗಳು ನೆರವಿನ ಹಸ್ತ ಚಾಚುತ್ತಿದ್ದಾರೆ. ಆಹಾರಧಾನ್ಯ ಕಿಟ್ ವಿತರಣೆ ಮೂಲಕ ಫೌಂಡೇಷನ್ ತನ್ನ ಅಳಿಲು ಸೇವೆ ಸಲ್ಲಿಸಿದೆ ಎಂದು ತಿಳಿಸಿದರು.

ಕೋವಿಡ್ ಮೊದಲ ಅಲೆ ಸಂದರ್ಭದಲ್ಲೂ ಫೌಂಡೇಷನ್‍ನಿಂದ ಬಡವರಿಗೆ ಆಹಾರಧಾನ್ಯ ಕಿಟ್ ವಿತರಣೆ ಮಾಡಲಾಗಿತ್ತು. ಕಿಟ್ ಅಕ್ಕಿ, ಗೋಧಿ, ಬೆಳೆ, ಸಿಹಿ ಎಣ್ಣೆ, ಉಪ್ಪು, ಖಾರ ಸೇರಿದಂತೆ ವಿವಿಧ ದಿನಬಳಕೆ ಸಾಮಗ್ರಿಗಳನ್ನು ಒಳಗೊಂಡಿದೆ ಎಂದು ಹೇಳಿದರು.

ಕೋವಿಡ್ ತಡೆಗೆ ವಿಧಿಸಿದ್ದ ಲಾಕ್‍ಡೌನ್‍ನಿಂದ ಕಾರ್ಯಕ್ರಮಗಳಿಲ್ಲದೆ ಅಂಗವಿಕಲ ಕಲಾವಿದರು ಕಷ್ಟದಲ್ಲಿದ್ದರು. ಇತರ ಅಂಗವಿಕಲರೂ ಮಾಡಲು ಕೆಲಸವಿಲ್ಲದೆ ಹೈರಾಣಾಗಿದ್ದರು. ಬಸವ ಕಾಯಕ, ದಾಸೋಹ ಫೌಂಡೇಷನ್ ಆಹಾರಧಾನ್ಯ ಕಿಟ್ ವಿತರಿಸಿ ಅವರಿಗೆ ಆಸರೆಯಾಗಿದೆ ಎಂದು ಕಲಾವಿದ ದಿಲೀಪ್ ಕಾಡವಾದ ನುಡಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಜೊನ್ನಿಕೇರಿ, ಸ್ಫೂರ್ತಿ ಬಸವರಾಜ ಧನ್ನೂರ, ರೋಟರಿ ಕ್ಲಬ್ ಆಫ್ ಬೀದರ್ ಫೋರ್ಟ್ ಸದಸ್ಯರಾದ ಜಹೀರ್ ಅನ್ವರ್, ಶಿವಕುಮಾರ ಯಲಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜಶೇಖರ ವಟಗೆ, ಸಂಗೀತ ಕಲಾವಿದ ಮಹೇಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.