ಸೋಮವಾರ, ಮೇ 23, 2022
30 °C

ಬೀದರ್‌ನ ಬಿಎಸ್‌ಎಫ್ ಯೋಧ ಬಸವರಾಜ ಗಣಪತಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ಔರಾದ್: ಭಾರತ-ಪಾಕಿಸ್ತಾನ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಔರಾದ್ ತಾಲ್ಲೂಕಿನ ಆಲೂರ (ಬಿ) ಗ್ರಾಮದ ಯೋಧ ಬಸವರಾಜ ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
 
ಜುಲೈ 6ರಂದು ಸಂಜೆ 5.40ಕ್ಕೆ ತಮ್ಮ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  
ತಕ್ಷಣ ಅವರನ್ನು ಪಂಜಾಬ್‌ನ ಫಜಿಲ್ಕಾ ಸೇನಾ ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟರಲ್ಲಿ ಕೊನೆಯುಸಿರೆಳೆದಿದ್ದರು ಎಂದು ಬಿಎಸ್‌ಎಫ್ ಡೆಪ್ಯುಟಿ ಕಮಾಂಡೆಂಟ್‌ ಸುರಿಂದರ್‌ಕುಮಾರ ಅವರು ಬೀದರ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಸಂದೇಶ ಕಳಿಸಿದ್ದಾರೆ.

ಯೋಧನ ಶವ ವಿಮಾನದ ಮೂಲಕ ಬೆಳಿಗ್ಗೆ ದೆಹಲಿಯಿಂದ ಹೈದರಾಬಾದ್‌ಗೆ ಬರಲಿದೆ. ಅಲ್ಲಿಂದ ಸೇನಾ ವಾಹನದಲ್ಲಿ 
ಆಲೂರ್ (ಬಿ) ಗ್ರಾಮಕ್ಕೆ ಬರಲಿದೆ ಎಂದು ಸಂತಪುರ ಪಿಎಸ್‍ಐ ಸಿದ್ದಲಿಂಗ ತಿಳಿಸಿದ್ದಾರೆ.

ಇದನ್ನೂ ಓದಿ: ಗಡಿಯಲ್ಲಿ ಉಗ್ರರ ಡ್ರೋನ್‌ ಕಾಟ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು