ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗ ಸಮಾನತೆಯಿಂದ ಸಮೃದ್ಧ ರಾಷ್ಟ್ರ ನಿರ್ಮಾಣ

ಜೀಜಾಮಾತಾ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ
Last Updated 3 ಜನವರಿ 2023, 12:33 IST
ಅಕ್ಷರ ಗಾತ್ರ

ಬೀದರ್: ಲಿಂಗ ಸಮಾನತೆಯಿಂದ ಮಾತ್ರ ಸಮೃದ್ಧ ರಾಷ್ಟ್ರ ನಿರ್ಮಾಣ ಸಾಧ್ಯವಿದೆ ಎಂದು ಸಾಹಿತಿ ಪಾರ್ವತಿ ವಿ. ಸೋನಾರೆ ಹೇಳಿದರು.


ಇಲ್ಲಿಯ ವಿದ್ಯಾನಗರ ಕಾಲೊನಿಯ ಜೀಜಾಮಾತಾ ಕನ್ಯಾ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ ಹಾಗೂ ನಿವೃತ್ತ ಶಿಕ್ಷಕಿ ಹೇಮಾಂಗಿನಿ ಕುಲಕರ್ಣಿ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಿದ್ದರು. ಈ ಮೂಲಕ ಸಮಾನತೆಯ ಸಮಾಜ ಕಟ್ಟಲು ಪ್ರಯತ್ನಿಸಿದ್ದರು ಎಂದು ತಿಳಿಸಿದರು.


ಸಾವಿತ್ರಿಬಾಯಿ ಫುಲೆ ದಂಪತಿ ಸಮಾಜ ಸೇವೆಗೆ ತಮ್ಮ ಬದುಕು ಮುಡುಪಾಗಿಟ್ಟಿದ್ದರು. ಅನಿಷ್ಠ ಪ್ರದ್ಧತಿಗಳ ವಿರುದ್ಧ ಜನಜಾಗೃತಿ ಮೂಡಿಸಿದ್ದರು ಎಂದು ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಪರಮೇಶ್ವರ ಬಿರಾದಾರ ಹೇಳಿದರು.


ವಿದ್ಯಾರ್ಥಿಗಳು ಮೊಬೈಲ್‍ನಿಂದ ಆದಷ್ಟು ದೂರ ಇರಬೇಕು. ಸಾಧನೆಗಾಗಿ ಓದಿನ ಕಡೆಗೆ ಹೆಚ್ಚು ಗಮನ ಕೇಂದ್ರೀಕರಿಸಬೇಕು ಎಂದು ಸಲಹೆ ಮಾಡಿದರು.


ಮೀರಾ ಸತೀಶ ಮುಳೆ ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯಶಿಕ್ಷಕರಾದ ರಮೇಶ ಬಿರಾದಾರ, ವಾಸುದೇವ ರಾಠೋಡ್, ಶಿಕ್ಷಕರಾದ ಸಂಜಯ ಪಾಟೀಲ, ರಾಜಕುಮಾರ ಬಿ. ಗಾದಗೆ, ಪ್ರಭಣ್ಣ, ಆನಂದ ಜಾಧವ್, ಅರ್ಜುನ ಧುಳೆ, ಅನಿಲಕುಮಾರ ಟೆಕೋಳೆ, ಸರೋಜಾ ಪಾಠಕ್, ಶೋಭಾ, ಲತಾ ಬಿ, ಅಶ್ವಿನಿ, ಆರತಿ ಬಿ. ಬಲ್ಲೂರ, ನಾಗರತ್ನ ಟಿ, ಕೆ. ಸ್ವಾಮಿ, ಉಷಾ ಪಿ, ಆರತಿ ಬಲ್ಲೂರ, ಗಾಯತ್ರಿ, ಅಶ್ವಿನಿ ವಿ. ಅಳ್ಳಿ ಇದ್ದರು.


ಶಿಕ್ಷಕ ಭೀಮಶಾ ಬಸಲಾಪುರ ಸ್ವಾಗತಿಸಿದರು. ತಾನಾಜಿ ಆರ್.ಎನ್ ನಿರೂಪಿಸಿದರು. ಮೋಹನ್ ಜೋಶಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT