ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಕಟ್ಟಡ, ಕ್ವಾರಿ ಕಾರ್ಮಿಕರ ಪ್ರತಿಭಟನೆ

Last Updated 9 ಮಾರ್ಚ್ 2021, 17:16 IST
ಅಕ್ಷರ ಗಾತ್ರ

ಬೀದರ್‌: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ನೋಂದಣಿ, ನವೀಕರಣ ಮತ್ತು ಧನ ಸಹಾಯದ ಸೌಲಭ್ಯಗಳ ಪಡೆಯಲು ಸೇವಾ ಸಿಂಧು ತಂತ್ರಾಂಶದಲ್ಲಿ ಐ.ಡಿ ತೆರೆದು ಅರ್ಜಿಗಳನ್ನು ಸಲ್ಲಿಸಲು ಕಾಮನ್ ಸರ್ವೀಸ್ ಸೆಂಟರ್‌ಗಳಿಗೆ ಅವಕಾಶ ನೀಡಿರುವುದನ್ನು ತಡೆಯಬೇಕು ಎಂದು ಒತ್ತಾಯಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಕೆಲವರು ಸುಳ್ಳು ಮಾಹಿತಿ ನೀಡಿ ಕಾರ್ಮಿಕರ ಸೌಲಭ್ಯಗಳನ್ನು ಕಬಳಿಸಲು ಯತ್ನಿಸುತ್ತಿದ್ದಾರೆ. ಇದರಿಂದ ನೈಜ ಕಟ್ಟಡ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಅಷ್ಟೇ ಅಲ್ಲ ಕಾರ್ಮಿಕ ಕಲ್ಯಾಣ ಮಂಡಳಿಯ ಹಣ ನಕಲಿ ಕಾರ್ಮಿಕರ ಪಾಲಾಗುತ್ತಿದೆ ಎಂದು ದೂರಿದರು.

ಕಾಮನ್ ಸರ್ವಿಸ್ ಸೆಂಟರ್‌ನಲ್ಲಿ ಕಾರ್ಮಿಕರ ಗುರುತಿನ ಚೀಟಿ ನವೀಕರಿಸುವಾಗ ಮೂಲ ದಾಖಲೆಯಲ್ಲಿ ವ್ಯತ್ಯಾಸ ಇರುವುದು ಕಂಡು ಬರುತ್ತಿದೆ ಎಂದು ಹೇಳಿದರು.

ಸೇವಾ ಸಿಂಧು ವೆಬ್ ಪೋರ್ಟ್‌ಲ್‌ನಲ್ಲಿ ಕಾರ್ಮಿಕರ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಿರುವ ಉದ್ದೇಶ ಒಳ್ಳೆಯದು. ಆದರೆ, ಕಾಮನ್ ಸರ್ವೀಸ್ ಸೆಂಟರ್‌ನಲ್ಲಿ ಅರ್ಜಿ ನೋಂದಣಿ ಮಾಡಲು ಅವಕಾಶ ಕೊಡಬಾರದು. ಕಾರ್ಮಿಕ ಇಲಾಖೆಯ ಕಚೇರಿಯಲ್ಲೇ ನೋಂದಣಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ನಂತರ ಕಾರ್ಮಿಕ ಮುಖಂಡರು ಕಾರ್ಮಿಕ ಸಚಿವರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಬಾಬುರಾವ್ ಹೊನ್ನಾ, ಪ್ರಭು ಹೊಚಕನಳ್ಳಿ, ಮಹಮ್ಮದ್ ಶಫಾಯತ್ ಅಲಿ, ನಜೀರ್‌ಅಹ್ಮದ್,ಗುರುಪಾದಯ್ಯ ಸ್ವಾಮಿ, ಅಬ್ದುಲ್ ಖಾದರ್, ಬಾಬುರಾವ್ ವಾಡೇಕರ್, ಇಮಾನುವೆಲ್ ಗಾದಗಿ, ಪಪ್ಪುರಾಜ ಮೇತ್ರೆ. ಪ್ರಭು ತಗಣಿಕರ್, ಯೂಸುಫ್, ಭೀಮಾಶಂಕರ ತಡಪಳ್ಳಿ, ಸುನೀಲ ವರ್ಮಾ, ಖದೀರ್ ಸಾಬ ಟಿ. ಮಿರ್ಜಾಪೂರತುಕ್ಕಮ್ಮಾ ಕಮಠಾಣಾ, ಚಂದ್ರಕಲಾ ಕಮಠಾಣಾ, ಸೂರ್ಯಕಾಂತ ಸಾಧುರೆ, ಪ್ರಭುರಾವ್ ಬಾಚೆಪಳ್ಳಿ, ಸಂತೋಷ ಕೆ ಸಿಂಧೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT