ಬಸವಕಲ್ಯಾಣ: ಈ ಕ್ಷೇತ್ರದ ಉಪ ಚುನಾವಣೆಯಲ್ಲಿ ಎನ್.ಸಿ.ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ಮಾರುತಿರಾವ್ ಮುಳೆ ಅವರು ₹3,74,11,263 ಮೌಲ್ಯದ ಚರಾಸ್ತಿ ಹಾಗೂ ₹16,91,530 ಮೌಲ್ಯದ ಸ್ಥಿರಾಸ್ತಿ ಹೊಂದಿದ್ದು ಒಟ್ಟು ₹3.91 ಕೋಟಿ ಮೌಲ್ಯದ ಆಸ್ತಿ ಇವರ ಬಳಿ ಇದೆ.

₹2,97,534 ನಗದು, ₹2 ಲಕ್ಷ ಮೌಲ್ಯದ ಐದು ತೊಲ ಬಂಗಾರ ಇವರ ಬಳಿಯಿದೆ. ಹಂದಿಕೇರಾ, ಔರಾದ್, ಘಾಟಬೋರಾಳದಲ್ಲಿ ₹16,91530 ಮೌಲ್ಯದ 19 ಎಕರೆ ಜಮೀನಿದೆ. ಅವಲಂಬಿತರ ಬಳಿ ₹2,80,257 ನಗದು ಹಾಗೂ 4 ಎಕರೆ ಜಮೀನು ಇದೆ.

ಐದು ಲಾರಿಗಳ ಒಡೆಯ ಅಲ್ತಾಫ್

ಪಕ್ಷೇತರರಾಗಿ ಕಣದಲ್ಲಿರುವ ಅಲ್ತಾಫ್ ಫತ್ರುಸಾಬ್ ₹1.40 ಕೋಟಿ ಬೆಲೆಯ ಐದು ಲಾರಿಗಳನ್ನು ಹೊಂದಿದ್ದಾರೆ. ಇವರ ಬಳಿ ನಗದು ಒಳಗೊಂಡು ₹1.43 ಕೋಟಿ ಮೌಲ್ಯದ ಆಸ್ತಿ ಇದೆ. ಪತ್ನಿ ಬಳಿ ₹50 ಸಾವಿರ ನಗದು ಒಳಗೊಂಡು ₹2,50 ಲಕ್ಷ ಮೌಲ್ಯದ ಆಸ್ತಿ ಇದೆ.

ಶಿವಸೇನಾ ಅಭ್ಯರ್ಥಿ ಬಳಿ ₹25 ಲಕ್ಷದ ಆಸ್ತಿ

ಶಿವಸೇನಾ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಅಂಕುಶ ಮಹಾದೇವ ಬಳಿ ಎರ್ಟಿಗಾ ಕಾರು, ನಗದು ₹5 ಲಕ್ಷ, ₹2 ಲಕ್ಷ ಮೌಲ್ಯದ 50 ಗ್ರಾಂ ಬಂಗಾರ ಒಳಗೊಂಡು ₹25 ಲಕ್ಷ ಮೌಲ್ಯದ ಆಸ್ತಿ ಇದೆ. ಇವರ ಪತ್ನಿ ಬಳಿ 50 ಗ್ರಾಂ ಬಂಗಾರದ ಆಭರಣಗಳು ಒಳಗೊಂಡು ₹4 ಲಕ್ಷದ ಆಸ್ತಿಯಿದೆ ಎಂದು ಘೋಷಿಸಿಕೊಂಡಿದ್ದಾರೆ.

ಇನ್ನು ಅಖಿಲ ಭಾರತ ಮುಸ್ಲಿಂ ಲೀಗ್ (ಜಾತ್ಯತೀತ) ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಫರ್ಜಾನಾ ಬೇಗಂ ಬಳಿ ಐದು ತೊಲ ಚಿನ್ನಾಭರಣ ಒಳಗೊಂಡು ಒಟ್ಟು ₹2.83 ಲಕ್ಷ ಮೌಲ್ಯದ ಆಸ್ತಿಯಿದೆ.

ಪಕ್ಷೇತರರಾಗಿ ಸ್ಪರ್ಧಿಸಿರುವ ಈರಣ್ಣ ಹಡಪದ ಅವರ ಹತ್ತಿರ ₹5 ಲಕ್ಷ ನಗದು ಇದೆ. ಇನ್ನೊಬ್ಬ ಪಕ್ಷೇತರರಾದ ರವಿಕಿರಣ ಎಂ.ಎನ್ ಬಳಿ ಕೇವಲ ₹5 ಸಾವಿರ ನಗದು ಇಟ್ಟುಕೊಂಡಿದ್ದಾರೆ.

ಕರ್ನಾಟಕ ರಾಷ್ಟ್ರ ಸಮಿತಿಯಿಂದ ಸ್ಪರ್ಧಿಸಿರುವ ಮಂಜುನಾಥ ಶೃಂಗೇರಿ ಬಳಿ ₹2.60 ಲಕ್ಷ ಹಾಗೂ ಅವರ ಪತ್ನಿ ಬಳಿ ₹1.61 ಲಕ್ಷ ಮೌಲ್ಯದ ಆಸ್ತಿ ಇದೆ ಎಂದು ಚುನಾವಣಾ ಅಧಿಕಾರಿಗೆ ಸಲ್ಲಿದ ನಾಮಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.