ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಯಲ್ಲಿ ಡೊಣ್ಣೆ ಮೆಣಸಿನಕಾಯಿ ಅಧಿಪತ್ಯ

ತುರಾಯಿ ಬಾಗಿಸಿದ ಹಿರೇಕಾಯಿ, ಬದನೆಕಾಯಿ
Last Updated 12 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಬೀದರ್‌: ಬಿಸಿಲು ಹೆಚ್ಚುತ್ತಿರುವ ಕಾರಣ ರೈತರು ಹಾಗೂ ಗ್ರಾಹಕರು ತರಕಾರಿ ಬೆಲೆ ಗಗನಕ್ಕೆ ಏರಬಹುದು ಎನ್ನುವ ನಿರೀಕ್ಷೆಯಲ್ಲಿ ಇದ್ದರು. ಆದರೆ ಪೂರ್ವ ಮಹಾರಾಷ್ಟ್ರ ಹಾಗೂ ತೆಲಂಗಾಣದಲ್ಲಿ ಬೀಸುತ್ತಿರುವ ಬಿಸಿ ಹವೆ ಹಾಗೂ ಅತಿಯಾದ ಬಿಸಿಲಿನಿಂದಾಗಿ ತರಕಾರಿ ಬಹುಬೇಗ ಬಾಡುತ್ತಿದೆ. ಇದೇ ಕಾರಣಕ್ಕೆ ಇಲ್ಲಿಯ ಮಾರುಕಟ್ಟೆಯಲ್ಲಿ ಬಹುತೇಕ ಕಾಯಿಪಲ್ಲೆ ಬೆಲೆಗಳು ಕುಸಿದಿವೆ.

ಡೊಣ್ಣೆ ಮೆಣಸಿಣಕಾಯಿ ಹಾಗೂ ಹೂಕೋಸಿನ ಬೆಲೆ ಮಾತ್ರ ಸ್ಥಿರವಾಗಿದೆ. ಡೊಣ್ಣೆ ಮೆಣಸಿನಕಾಯಿ ಬೆಲೆ ಕ್ವಿಂಟಲ್‌ಗೆ ₹ 6 ಸಾವಿರಕ್ಕಿಂತ ಕಡಿಮೆಯಾಗಿಲ್ಲ. ಹೈದರಾಬಾದ್, ಮಹಾರಾಷ್ಟ್ರದ ಜಾಲನಾ ಹಾಗೂ ಸೋಲಾಪುರದಿಂದ ಬೀದರ್‌ ಜಿಲ್ಲೆಗೆ ತರುವಷ್ಟರಲ್ಲಿ ಬಾಡುತ್ತಿರುವುದರಿಂದ ವ್ಯಾಪಾರಿಗಳು ಸೊಪ್ಪು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.

ಡೊಣ್ಣೆ ಮೆಣಸಿನಕಾಯಿ ಜತೆಗೆ ಬೀನ್ಸ್‌್ ಬೆಲೆ ಸಹ ಪ್ರತಿ ಕ್ವಿಂಟಲ್‌ಗೆ ಅತಿ ಹೆಚ್ಚು ಅಂದರೆ ₹ 6 ಸಾವಿರಕ್ಕೆ ತಲುಪಿದೆ. ಹಸಿ ಮೆಣಸಿನಕಾಯಿ ಹಾಗೂ ಬೆಳ್ಳೂಳ್ಳಿ ಬೆಲೆ ₹ 5 ಸಾವಿರ ಇದೆ. ನಿತ್ಯದ ಬಳಕೆಗೆ ಬೇಕಿರುವ ಕಾರಣ ಬೆಲೆ ಹೆಚ್ಚಾಗಿದ್ದರೂ ಗ್ರಾಹಕರು ಮೆಣಸಿನಕಾಯಿಯನ್ನು ಅನಿವಾರ್ಯವಾಗಿ ಖರೀದಿಸುತ್ತಿದ್ದಾರೆ.

ಬೀನ್ಸ್‌, ಕೊತಂಬರಿ₹ 4 ಸಾವಿರ, ಬದನೆಕಾಯಿ ₹ 3,500, ಬಿಟ್‌ರೂಟ್‌ ₹ 3 ಸಾವಿರ, ಹಿರೇಕಾಯಿ, ಗಜ್ಜರಿ, ಮೆಂತೆಸೊಪ್ಪು ₹ 2 ಸಾವಿರ, ಎಲೆಕೋಸು ₹ 1,500, ಟೊಮೆಟೊ ₹ 1,200, ಈರುಳ್ಳಿ ₹ 500, ಆಲೂಗಡ್ಡೆ ₹ 300, ಚೌಳೆಕಾಯಿ ₹ 1,500 ಹಾಗೂ ಹೂಕೋಸು ಬೆಲೆ ₹ 1 ಸಾವಿರ ಕುಸಿದಿದೆ.

ಬೀದರ್‌ ಮಾರುಕಟ್ಟೆಗೆ ಮೆಂತೆ, ಸಬ್ಬಸಗಿ ಹಾಗೂ ಪುಂಡಿಪಲ್ಲೆ ಸೊಪ್ಪು ಅಲ್ಪ ಪ್ರಮಾಣದಲ್ಲಿ ಬಂದರೂ ಕೆಲ ಗಂಟೆಗಳಲ್ಲೇ ಮಾರಾಟವಾಗುತ್ತಿದೆ. ಮನೆಯಲ್ಲಿ ರೆಫ್ರಿಜಿರೇಟರ್‌ನಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುವವರು ಮಾತ್ರ ವಾರದ ವರೆಗೆ ಬಾಳಿಕೆ ಬರುವ ತರಕಾರಿ ಖರೀದಿಸುತ್ತಿದ್ದಾರೆ.

ಮಹಾರಾಷ್ಟ್ರದ ಸೋಲಾಪುರ ಹಾಗೂ ಜಾಲನಾದಿಂದ ಈರುಳ್ಳಿ, ಬೆಳ್ಳೂಳ್ಳಿ, ಆಲೂಗಡ್ಡೆ, ಮೆಂತೆಸೊಪ್ಪು ಹಾಗೂ ಬೆಳಗಾವಿಯಿಂದ ಮೆಣಸಿನಕಾಯಿ ಆವಕವಾಗಿದೆ. ಉಳಿದ ತರಕಾರಿ ತೆಲಂಗಾಣದ ಗ್ರಾಮಗಳಿಂದ ಬಂದಿದೆ.

‘ಗಡಿ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿದೆ. ಬೀದರ್‌ ಜಿಲ್ಲೆಯಲ್ಲಿ ಬರ ಇರುವ ಕಾರಣ ದೂರು(ರದ) ಊರುಗಳಿಂದ ಬೀದರ್‌ಗೆ ತರಕಾರಿ ಬರುತ್ತಿದೆ’ ಎಂದು ತರಕಾರಿ ಸಗಟು ವ್ಯಾಪಾರಿ ಮಕ್ಬೂಲ್‌ಸಾಬ ಹೇಳುತ್ತಾರೆ.


ಬೀದರ್‌ ತರಕಾರಿ ಸಗಟು ಮಾರುಕಟ್ಟೆ

ತರಕಾರಿ(ಪ್ರತಿ ಕ್ವಿಂಟಲ್) ಕಳೆದ ವಾರ- ಈ ವಾರ
ಈರುಳ್ಳಿ 1000-1500, 600-1000
ಮೆಣಸಿನಕಾಯಿ 5000-6000, 3500-5000
ಆಲೂಗಡ್ಡೆ 1200-1800, 1000-1500
ಎಲೆಕೋಸು 2000-3000, 800-1500
ಬೆಳ್ಳೂಳ್ಳಿ 4000-5000, 3500-5000
ಗಜ್ಜರಿ 4000-5000, 2000-3000
ಬೀನ್ಸ್‌ 8000-10000, 4000-6000
ಬದನೆಕಾಯಿ 4000-5000, 1000-1600
ಮೆಂತೆ ಸೊಪ್ಪು 5000-6000, 3000-4000
ಹೂಕೋಸು 2500-3000, 2500-3000
ಬಿಟ್‌ರೂಟ್‌ 4000-5000, 0000-2000
ತೊಂಡೆಕಾಯಿ 3000-4000, 2000-3000
ಕರಿಬೇವು 5000-6000, 300-400
ಕೊತಂಬರಿ 8000-9000, 3000-5000
ಟೊಮೆಟೊ 2000-3000, 1500-1800
ಪಾಲಕ್‌ 3000-4000, 2500-3000
ಬೆಂಡೆಕಾಯಿ 3000-4000, 1000-1200
ಹಿರೇಕಾಯಿ 5000-6000, 3000-4000
ಡೊಣ್ಣ(ಣ್ಣೆ) ಮೆಣಸಿನಕಾಯಿ 5000-6000, 4000-6000
ಚೌಳೆಕಾಯಿ 3000-3500, 1700-2000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT