ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಕಾಲು, ಬಾಯಿ ಲಸಿಕಾ ಅಭಿಯಾನಕ್ಕೆ ಚಾಲನೆ

Published 3 ಏಪ್ರಿಲ್ 2024, 13:57 IST
Last Updated 3 ಏಪ್ರಿಲ್ 2024, 13:57 IST
ಅಕ್ಷರ ಗಾತ್ರ

ಬೀದರ್‌: ರಾಷ್ಟೀಯ ಜಾನುವಾರು ನಿಯಂತ್ರಣ ಕಾರ್ಯಕ್ರಮದಡಿ ಐದನೇ ಸುತ್ತಿನ ಕಾಲು, ಬಾಯಿ, ಜ್ವರ ಲಸಿಕಾ ಅಭಿಯಾನಕ್ಕೆ ನಗರದ ರಾಮಕೃಷ್ಟ ಆಶ್ರಮದ ಗೋಶಾಲೆಯಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.

ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲದ ಕುಲಪತಿ ಡಾ. ಕೆ.ಸಿ. ವೀರಣ್ಣ ಅವರು ಗೋಮಾತೆಗೆ ಪೂಜೆ ಸಲ್ಲಿಸಿ, ಜಾನುವಾರುಗಳಿಗೆ ಲಸಿಕೆ ಹಾಕಿ ಸಸಿಗೆ ನೀರೆರೆದು ಚಾಲನೆ ನೀಡಿದರು.

ಲಸಿಕಾ ಕಾರ್ಯಕ್ರಮವು ಜಿಲ್ಲೆಯಾದ್ಯಂತ ಏ. 30ರವರೆಗೆ ನಡೆಯಲಿದೆ. ಲಸಿಕೆ ಹಾಕುವವರು ರೈತರ ಮನೆ ಬಾಗಿಲಿಗೆ ಬರುವರು. ದನ ಹಾಗೂ ಎಮ್ಮೆಗಳಿಗೆ ಎಫ್.ಎಂ.ಡಿ ಲಸಿಕೆಯನ್ನು ಉಚಿತವಾಗಿ ಜಾನುವಾರುಗಳಿಗೆ ಹಾಕಿಸಿ ರೋಗವನ್ನು ತಡೆಗಟ್ಟಲು ಮತ್ತು ಎಫ್.ಎಂ.ಡಿ.ಸಿ.ಪಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ರಾಮಕೃಷ್ಣ ಆಶ್ರಮದ ‌ಜ್ಯೋತಿರ್ಮಯಾನಂದ ಸ್ವಾಮೀಜಿ, ಪಶು ಪಾಲನಾ ಮತ್ತು ಪಶುವೈದ್ಯ ಸೇವೆ ಇಲಾಖೆಯ ಉಪನಿರ್ದೇಶಕ ಡಾ. ನರಸಪ್ಪ ಎ.ಡಿ., ಪಾಲಿ ಕ್ಲಿನಿಕ್‌ ಉಪನಿರ್ದೇಶಕ ಡಾ. ರವೀಂದ್ರಕುಮಾರ ಭೂರೆ, ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಉದಯಕುಮಾರ, ಪಶು ಪಾಲನಾ ಇಲಾಖೆಯ ಡಾ. ನಾಗರಾಜ, ಡಾ. ನೀಲಕಂಠ ಚನ್ನಶೆಟ್ಟಿ, ಡಾ. ಶ್ರೀಕಾಂತ ಬಿರಾದಾರ, ಡಾ. ಸಂಗಮೇಶ, ಡಾ. ಶಿವಮೂರ್ತಿ, ಡಾ. ಜಗದೀಶ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT