ಬೀದರ್: ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದಲ್ಲಿ ವಾಸವಾಗಿರುವ ಹಿಂದೂ ಹಾಗೂ ಮುಸ್ಲಿಮರಿಗೆ ಯಾವುದೇ ರೀತಿಯ ಹಾನಿಯಿಲ್ಲ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಸಾರ್ವಜನಿಕರಲ್ಲಿ ತಪ್ಪು ತಿಳಿವಳಿಕೆಯನ್ನು ಮೂಡಿಸುತ್ತಿವೆ’ ಎಂದು ಸಂಸದ ಭಗವಂತ ಖೂಬಾ ಆರೋಪಿಸಿದರು.

ನಗರದಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ನಡೆದ ಪೌರತ್ವ ತಿದ್ದುಪಡಿ ಕಾಯ್ದೆಯ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು.

‘ನೆರೆಯ ಪಾಕಿಸ್ತಾನ, ಅಫ್ಘಾನಿಸ್ಥಾನ, ಬಾಂಗ್ಲಾದೇಶ ಮೂಲದ ಅಲ್ಪಸಂಖ್ಯಾತರು ನಮ್ಮ ದೇಶದಲ್ಲಿ ವಾಸವಿದ್ದರೆ ಅವರಿಗೆ ನಾಗರಿಕತೆ ನೀಡುವ ಕಾಯ್ದೆ ಇದಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಈ ನಿರ್ಧಾರವನ್ನು ಬೆಂಬಲಿಸಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಾಬು ವಾಲಿ ಮಾತನಾಡಿ,‘ಈ ಜಾಗೃತಿ ಅಭಿಯಾನವು ಜನವರಿ 15ರ ವರೆಗೆ ನಡೆಯಲಿದೆ’ ಎಂದು ಹೇಳಿದರು.

‘ನಗರದ ಭಗತಸಿಂಗ್, ಮಡಿವಾಳೇಶ್ವರ, ಸಿದ್ಧಾರೂಢ, ಹನುಮಾನ, ಬಸವೇಶ್ವರ, ಸ್ವಾಮಿ ವಿವೇಕಾನಂದ ಶಕ್ತಿ ಕೇಂದ್ರಗಳ ಕಾರ್ಯಕರ್ತರು ಮನೆ ಮನೆಗೆ ತೆರಳಿ ತಿಳಿವಳಿಕೆ ನೀಡುತ್ತಿದ್ದಾರೆ ಎಂದು ತಿಳಿಸಿದರು.

ನಗರದ ಸಾಯಿ ಕಾಲೊನಿಯಿಂದ ಆರಂಭವಾದ ಜಾಥಾ ಬ್ರಹ್ಮಪುರ ಕಾಲೊನಿ, ಬೊಮ್ಮಗೊಂಡೇಶ್ವರ ವೃತ್ತದಿಂದ ಹಾರೂರಗೇರಿ ವರೆಗೆ ನಡೆಯಿತು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಹಣಮಂತ ಬುಳ್ಳಾ, ಮುಖಂಡರಾದ ಬಾಬುರಾವ್ ಮದಕಟ್ಟಿ, ಗುರುನಾಥ ಕೊಳ್ಳೂರ, ಚಂದ್ರಶೇಖರ ಪಾಟೀಲ ಗಾದಗಿ, ಬಾಬುರಾವ್ ಕಾರಬಾರಿ, ಸಂಗಮೇಶ ನಾಸಿಗಾರ್, ಪ್ರಕಾಶ ಚಂದಾ, ಸೋಮಶೇಖರ ಪಾಟೀಲ, ಬಸವರಾಜ ಜೊಜನಾ, ಸಚಿನ ನವಲಕಲೆ, ನಗರಸಭೆ ಮಾಜಿ ಸದಸ್ಯ ಶಶಿ ಹೊಸಳ್ಳಿ, ಅರುಣ ಹೋತಪೇಟ, ನಾಗಶೆಟ್ಟಿ ವಾಗದಾಳೆ, ಬಸವರಾಜ ಮಲ್ಕಪ್ಪ, ಅಂಬರೀಷ ಬಟ್ನಾಪುರೆ, ಕೈಲಾಸ ಕಾಜಿ, ಸುದರ್ಶನ ಗಡರೆ, ಹಣಮಂತ ಕೊಂಡಿ, ಕೃಷ್ಣ, ಆಕಾಶ ಕಾಜಿ, ಯೋಗೇಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.