ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಟಗುಪ್ಪ: ಸವಿನೆನಪಿನ ಸಮಾರಂಭ

ಬಾಲ್ಯದ ಸಿಹಿ ಕ್ಷಣಗಳ ಮೆಲುಕು, 40 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ
Last Updated 6 ಜನವರಿ 2020, 11:08 IST
ಅಕ್ಷರ ಗಾತ್ರ

ಚಿಟಗುಪ್ಪ: ತಾಲ್ಲೂಕಿನ ನಿರ್ಣಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ 1980-81ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ 40 ವರ್ಷಗಳ ಸವಿನೆನಪಿನ ಸಮಾರಂಭ ನಡೆಯಿತು.

ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳು ತಮ್ಮ ಬಾಲ್ಯದ ನೆನಪು ಹಾಗೂ ಶಾಲಾ ದಿನಗಳಲ್ಲಿ ನಡೆದ ಘಟನೆಗಳನ್ನು ಮೆಲುಕು ಹಾಕಿದರು. 40 ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದರು.

ನಿವೃತ್ತ ಜಿಲ್ಲಾ ಪಂಚಾಯಿತಿ ಉಪಮುಖ್ಯಾಧಿಕಾರಿ ಬಿ.ಕೆ.ಹಿರೇಮಠ ಮಾತನಾಡಿ, ‘ಅಭ್ಯಾಸದಲ್ಲಿ ದಕ್ಷತೆ, ಜೀವನದಲ್ಲಿ ಪ್ರಾಮಾಣಿಕತೆ, ಕಾರ್ಯದಲ್ಲಿ ಶ್ರದ್ಧೆ ಇದ್ದಲ್ಲಿ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ’ ಎಂದರು.

ಹಳೆಯ ವಿದ್ಯಾರ್ಥಿ ಬಳಗದ ಸದಸ್ಯರಾದ ತಿಪ್ಪಣ್ಣ ರಾಮಪುರ್, ವೆಂಕಟೇಶ್ ಜೋಶಿ, ವಕೀಲ ಗೌರೀಶ್ ಕಾಶಂಪುರ್, ನಿವೃತ್ತ ಎಎಸ್‌ಐ ಸಮದ್, ಸಾಹಿತಿ ವಿ.ಎನ್.ಮಠಪತಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಂಗಪ್ಪ ಕಾಶಂಪುರ್‍ ಮಾತನಾಡಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಮಲ್ಲಪ್ಪ ಗೊಲ್ಲರ್, ಈಶ್ವರ ಚಿಂಚೋಳಿ, ಚನ್ನಬಸಪ್ಪ ಸೊಪ್ಪಣ್ಣ, ವಿನಾಯಕ ಜೋಶಿ, ಚನ್ನಬಸಪ್ಪ ಪಾಟೀಲ, ಲಿಂಗರಾಜ್ ಎಖ್ಖೇಳಿ, ವೀರಶೆಟ್ಟಿ ಭದ್ರಪನೋರ್‍, ಚಿದಾನಂದ ಗುಳ್ಳಾ, ಡಾ.ಬಾಬುರಾವ್ ಮರ್ಕಲ್ ಅವರಿನ್ನು ಸನ್ಮಾನಿಸಲಾಯಿತು.

ಮಾಣಿಕರೆಡ್ಡಿ ಮೊಗಲರೆಡ್ಡಿ, ಭರಶೆಟ್ಟಿ ಹಳ್ಳಿಖೇಡ, ದಾಮೋದರ್ ಜೋಶಿ, ಎಸ್.ಎಂ.ಬುಖಾರಿ, ಮಲ್ಲಿಕಾರ್ಜುನ ಸೊಪ್ಪಣ್ಣ, ಮುರಲಿ ಗೊಡಗಲ್, ಸುಭಾಷ ಮುತ್ತಂಗಿ, ಶಂಕರಯ್ಯ ಸ್ವಾಮಿ, ಇರ್ಷಾದ್‌ ಅಲಿ, ಕಾಶಿನಾಥ ಬನ್ನಳ್ಳಿ, ರಾಜಕುಮಾರ ಪ್ಯಾರಂಜಿ, ನಾಗಶೆಟ್ಟಿ ಪಸಾರ್, ಕಲ್ಲಪ್ಪ ಪಿಡಗೊಂಡ್, ಧೂಳಪ್ಪ ಪಿಡಗೊಂಡ್, ಮಾರುತಿ ಬನ್ನಳ್ಳಿ, ಸಂಗಪ್ಪ ದುಬಲಗುಂಡಿ, ಅಶೋಕ ಬಬಚೆಡಿ, ಅಶೋಕ ಬಿರನಳ್ಳಿ, ದಶರಥ ಹೊಸಳ್ಳಿ, ಸೋಮಶೇಖರ ಮುತ್ತಂಗಿ, ಮಾಲತಿ ಕಮಲಾಪುರ್, ಲಲಿತಾ ಗಂಗವಾರ್ ಇದ್ದರು.

ಅಗಲಿದ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಸಂತಾಪ ಸೂಚಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT