ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ ನಗರಸಭೆ ಎರಡು ವಾರ್ಡ್‌ ಚುನಾವಣೆ: ಕಾಂಗ್ರೆಸ್‌, ಜೆಡಿಎಸ್‌ಗೆ ಗೆಲುವು

ಬೀದರ್‌ ನಗರಸಭೆ ಎರಡು ವಾರ್ಡ್‌ ಚುನಾವಣೆ
Last Updated 6 ಸೆಪ್ಟೆಂಬರ್ 2021, 12:35 IST
ಅಕ್ಷರ ಗಾತ್ರ

ಬೀದರ್‌: ಇಲ್ಲಿಯ ನಗರಸಭೆಗೆ ನಡೆದ ಚುನಾವಣೆಯಲ್ಲಿ 26ನೇ ವಾರ್ಡ್‌ನಿಂದ ಕಾಂಗ್ರೆಸ್‌ನ ನಸ್ರೀನ್‌ಬೇಗಂ ಮಹಮ್ಮದ್‌ ಶೌಕತ್‌ ಹಾಗೂ 32ನೇ ವಾರ್ಡ್‌ನಿಂದ ರೋಹಿನಾಯಾಸ್ಮಿನ್‌ ಮೊಹ್ಮದ್ ನವಾಜ್ ಖಾನ್ ಗೆಲುವು ಸಾಧಿಸಿದ್ದಾರೆ.

ನಸ್ರೀನ್‌ಬೇಗಂ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಜುಬೇದಾಬಿ ವಾಹೇದ್ ಅವರನ್ನು 98 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.

ನಸ್ರೀನ್‌ಬೇಗಂ ಮಹಮ್ಮದ್‌ ಶೌಕತ್‌ 1,590, ಪಕ್ಷೇತರ ಅಭ್ಯರ್ಥಿ ಜುಬೇದಾಬಿ ವಾಹೇದ್ 1,492, ಬಿಜೆಪಿಯ ಸಂತೋಷಿ ಲಕ್ಷ್ಮಣ 515, ಜೆಡಿಎಸ್‌ನ ಲಕ್ಷ್ಮೀ ರಾಜಕುಮಾರ 85, ಪಕ್ಷೇತರ ಅಭ್ಯರ್ಥಿ ಸಹೀದಾ ಮೋಸಿನಾ 139, ಬಿಎಸ್‌ಪಿಯ ಶಹಜಹಾನ್‌ಬೇಗಂ ಮಹಮ್ಮದ್ ಸಲೀಂ 43 ಹಾಗೂ ಪಕ್ಷೇತರ ಅಭ್ಯರ್ಥಿ ಉಮಾವತಿ ಅರುಣಕುಮಾರ 18 ಮತಗಳನ್ನು ಪಡೆದಿದ್ದಾರೆ. 27 ಮತದಾರರು ನೋಟಾ ಚಲಾಯಿಸಿದ್ದಾರೆ.

32ನೇ ವಾರ್ಡ್‌ನಲ್ಲಿ ಜೆಡಿಎಸ್‌ನ ರೋಹಿನಾಯಾಸ್ಮಿನ್‌ ಮೊಹ್ಮದ್ ನವಾಜ್ ಖಾನ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಜ್ಯೋತಿ ಶಿವರಾಜ್ ಅವರನ್ನು 170 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಜೆಡಿಎಸ್‌ನ ರೋಹಿನಾಯಾಸ್ಮಿನ್‌ ಮೊಹ್ಮದ್ ನವಾಜ್ ಖಾನ್ 1,345, ಕಾಂಗ್ರೆಸ್‌ನ ಜ್ಯೋತಿ ಶಿವರಾಜ್ 1,175,
ಬಿಜೆಪಿಯ ಸುಮಿತ್ರಾ ದುಂಡಪ್ಪ 363, ಬಿಎಸ್‌ಪಿಯ ಸಂಗೀತಾ ಭೆಂಡೆಕರಿಕರ್ 25 ಹಾಗೂ ಪಕ್ಷೇತರ ಅಭ್ಯರ್ಥಿ ಜಯಾ ಅಲ್ಬರ್ಟ್ 52 ಮತಗಳನ್ನು ಪಡೆದಿದ್ದಾರೆ. 12 ಮತದಾರರು ನೋಟಾ ಚಲಾಯಿಸಿದ್ದಾರೆ ಎಂದು ತಹಶೀಲ್ದಾರ್‌ ಮಹಮ್ಮದ್‌ ಶಕೀಲ್‌ ತಿಳಿಸಿದ್ದಾರೆ.

ವಿಜಯೋತ್ಸವ

ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರು ನಗರದ ಭಗತ್‌ಸಿಂಗ್‌ ವೃತ್ತದ ಬಳಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ನಂತರ ತೆರೆದ ವಾಹನದಲ್ಲಿ ವಾರ್ಡ್‌ನಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ಪಕ್ಷದ ಧ್ವಜ ಹಾರಾಡಿಸಿ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT