ಶುಕ್ರವಾರ, ಮೇ 14, 2021
30 °C
ರತ್ನಾಬಾಯಿ ವೈಜಿನಾಥ ಕುಂಬಾರ ನಿಧನ

ಸಾವಿನಲ್ಲೂ ಒಂದಾದ ದಂಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ತಾಲ್ಲೂಕಿನ ಲಖಣಗಾಂವ ಗ್ರಾಮದ ಹಿರಿಯ ದಂಪತಿ ರತ್ನಾಬಾಯಿ ವೈಜಿನಾಥ ಕುಂಬಾರ ಅವರು ಅನಾರೋಗ್ಯದಿಂದ ಮಂಗಳವಾರ ನಿಧನರಾದರು.

ವೈಜಿನಾಥ ಕುಂಬಾರ(85) ಮಂಗಳವಾರ ನಸುಕಿನ ಜಾವ 3 ಗಂಟೆಗೆ ಮತ್ತು ಅವರ ಪತ್ನಿ ರತ್ನಾಬಾಯಿ (82) ಬೆಳಿಗ್ಗೆ 4 ಗಂಟೆಗೆ ನಿಧನರಾದರು. ಅವರಿಗೆ ಭಾಲ್ಕಿ ತಾಲ್ಲೂಕು ರೈತ ಸಂಘದ ಉಪಾಧ್ಯಕ್ಷ ಬಾಬುರಾವ್ ಕುಂಬಾರ ಸೇರಿ ಇಬ್ಬರು ಪುತ್ರರು ಇದ್ದಾರೆ.

ಸ್ವಂತ ಗ್ರಾಮ ಲಖಣಗಾಂವದಲ್ಲಿ ಮಧ್ಯಾಹ್ನ ಇಬ್ಬರ ಪಾರ್ಥಿವ ಶರೀರಗಳನ್ನು ಒಂದೇ ವೈಕುಂಠ ರಥದಲ್ಲಿ ಒಯ್ದು ಅಂತ್ಯಕ್ರಿಯೆ ಮಾಡಲಾಯಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.