ಗುರುವಾರ , ಜೂನ್ 17, 2021
22 °C
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಮಾಹಿತಿ

ಕೋವ್ಯಾಕ್ಸಿನ್ ತರಿಸಲು ಯತ್ನ: ಸಚಿವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ‘ಕೊರೊನಾ ಸೋಂಕಿತರಿಗೆ ಆಮ್ಲಜನಕದ ಕೊರತೆ ಇಲ್ಲ. ಹಾಸಿಗೆಗಳ ವ್ಯವಸ್ಥೆಯೂ ಸಮರ್ಪ ಕವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಹೇಳಿದರು.

ನಗರದ ತಾಲ್ಲೂಕು ಆಸ್ಪತ್ರೆಯಲ್ಲಿ ಶನಿವಾರ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಸೋಂಕಿತರಿಗೆ ರೆಮಿಡೆಸಿವಿರ್ ಹಾಗೂ ಇತರೆ ಔಷಧಗಳು ಕೂಡ ಲಭ್ಯಯಿದೆ. ಅವರನ್ನು ಉತ್ತಮ ರೀತಿಯಲ್ಲಿ ಆರೈಕೆ ಮಾಡುವುದಕ್ಕೆ ವೈದ್ಯರಿಗೆ ಸೂಚಿಸಲಾಗಿದೆ. ಕೋವ್ಯಾಕ್ಸಿನ್ ಕೊರತೆ ಆಗಿರುವುದು ನಿಜ. ಅದನ್ನು ತರಿಸುವುದಕ್ಕೆ ಪ್ರಯತ್ನಿಸಲಾಗುತ್ತಿದೆ’ ಎಂದರು.

ಶಾಸಕ ಶರಣು ಸಲಗರ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿ.ಜಿ.ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜಹೀರಾ ನಸೀಮ್, ತಹಶೀಲ್ದಾರ್ ಸಾವಿತ್ರಿ ಸಲಗರ, ಮುಖ್ಯ ವೈದ್ಯಾಧಿಕಾರಿ ಡಾ.ಅಪರ್ಣಾ ಮಹಾನಂದ, ಸಿಪಿಐ ಜೆ.ಎಸ್.ನ್ಯಾಮಗೌಡ, ಸಬ್ ಇನ್‌ಸ್ಪೆಕ್ಟರ್ ಗುರು ಪಾಟೀಲ ಉಪಸ್ಥಿತರಿದ್ದರು.

ಬಂದೋಬಸ್ತ್ ಮಾಡಿ: ಇದಕ್ಕೂ ಮೊದಲು ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರೊಂದಿಗೆ ಸಭೆ ನಡೆಸಿದ ಸಚಿವ ಪ್ರಭು ಚವಾಣ್ ಅವರು ‘ತಾಲ್ಲೂಕಿನ ಗಡಿಯಲ್ಲಿನ ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಬೇಕು. ಪ್ರವಾಸಿಗಳ ತಪಾಸಣೆ ನಡೆಸಬೇಕು’ ಎಂದು ಸಲಹೆ ನೀಡಿದರು.

ಲಸಿಕೆ ಜಾಗೃತಿ ಮಾಡಿ ಏನು ಲಾಭ?

ಹುಲಸೂರ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶನಿವಾರ ಸಚಿವ ಪ್ರಭು ಚವಾಣ್‌ ಭೇಟಿ ನೀಡಿ ಆಸ್ಪತ್ರೆಯಲ್ಲಿನ ಸೌಕರ್ಯ ಪರಿಶೀಲಿಸಿ, ಸಮಸ್ಯೆಗಳನ್ನು ಆಲಿಸಿದರು.

‘ಆಸ್ಪತ್ರೆಯ ಮುಂಭಾಗ ಲಸಿಕೆ ನೋ ಸ್ಟಾಕ್‌ ಎಂಬ ಫಲಕ ಹಾಕಿದ್ದಾರೆ. ಲಸಿಕೆ ಕುರಿತು ಜನಜಾಗೃತಿ ಮಾಡಿ ಏನು ಲಾಭ’ ಎಂಬ ಸಾರ್ವಜನಿಕರ ಪ್ರಶ್ನೆಗೆ, ‘ರಾಜ್ಯದಾದ್ಯಂತ ಲಸಿಕೆ ಸಮಸ್ಯೆ ಇದೆ. ಶೀಘ್ರ ಬಗೆಹರಿಸುತ್ತೇವೆ’ ಎಂಬುದಾಗಿ ಸಚಿವರು ಪ್ರತಿಕ್ರಿಯಿಸಿದರು.

‘ಬೇರೆ ಕಡೆ ನಿಯೋಜಿತ ಸಿಬ್ಬಂದಿ ಯನ್ನು ಮೂಲ ಸ್ಥಳಕ್ಕೆ ಬಂದು ಸೇವೆ ಮಾಡುವಂತೆ ಕ್ರಮ ಕೈಗೊಳ್ಳಿ’ ಎಂದು ಡಿಎಚ್‌ಒ ಗೆ ಸೂಚಿಸಿದರು. ಆಂಬುಲೆನ್ಸ್‌ ಹಾಗೂ ಕೋವಿಡ್‌ ಕೇಂದ್ರದ ಸಮಸ್ಯೆಯನ್ನು ಒಂದು ವಾರದಲ್ಲಿ ಬಗೆಹರಿಸುವುದಾಗಿ ತಿಳಿಸಿದರು.

ಶಾಸಕ ಶರಣು ಸಲಗರ, ತಹಶೀಲ್ದಾರ್‌ ಶಿವಾನಂದ ಮೇತ್ರೆ, ಆಸ್ಪತ್ರೆಯ ವೈದ್ಯಾಧಿಕಾರಿ ಅರಿಫೋದ್ದೀನ್‌, ಶಶಿಕಾಂತ ಕನ್ನಡೆ, ಅಮರ, ಕಂದಾಯ ನಿರೀಕ್ಷಕ ಮೌನೇಶ್ವರ ಸ್ವಾಮಿ, ಜಿ.ಪಂ ಮಾಜಿ ಅಧ್ಯಕ್ಷ ಅನೀಲ ಬೂಸಾರೆ, ಲತಾ ಹಾರಕುಡೆ, ಸುಧೀರ ಕಾಡಾದಿ, ಅಶೋಕ ವಕಾರೆ, ಸೂರ್ಯಕಾಂತ ಚಿಲ್ಲಾಬಟ್ಟೆ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.