ಭಾನುವಾರ, ಸೆಪ್ಟೆಂಬರ್ 20, 2020
22 °C
ಜಿಲ್ಲೆಯಲ್ಲಿ 47 ಮಂದಿಗೆ ಕೋವಿಡ್ ವೈರಾಣು

ಬೀದರ್ | ಕೋವಿಡ್‌ ಸೋಂಕು: ಮತ್ತೆ ಇಬ್ಬರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಯಲ್ಲಿ ಶನಿವಾರ 47 ಮಂದಿಗೆ ಕೋವಿಡ್ ಸೋಂಕು ತಗುಲಿದೆ. ಇಬ್ಬರು ಮೃತಪಟ್ಟಿದ್ದು, ಕೋವಿಡ್‌ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 97ಕ್ಕೆ ಏರಿದೆ.

ಜಿಲ್ಲೆಯ 90 ವರ್ಷದ ಪುರುಷ ತೀವ್ರ ಉಸಿರಾಟ ಸಮಸ್ಯೆಯಿಂದಾಗಿ ಆಗಸ್ಟ್ 5ರಂದು ಆಸ್ಪತ್ರೆಗೆ ದಾಖಲಾಗಿದ್ದರು. 6 ರಂದು ಕೊನೆಯುಸಿರೆಳೆದಿದ್ದರು. 75 ವರ್ಷದ ಮಹಿಳೆ ಉಸಿರಾಟ ತೊಂದರೆ ಹಾಗೂ ಜ್ವರದಿಂದಾಗಿ ಆಗಸ್ಟ್ 2 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಆಗಸ್ಟ್ 6ರಂದು ಮೃತಪಟ್ಟಿದ್ದರು. ಇವರ ಗಂಟಲು ದ್ರವ ಮಾದರಿ ಪಡೆಯಲಾಗಿತ್ತು. ವರದಿ ಶನಿವಾರ ಪಾಸಿಟಿವ್‌ ಬಂದಿದೆ.

ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 2,843ಕ್ಕೆ ತಲುಪಿದೆ. 896 ಕೋವಿಡ್‌ ಪ್ರಕರಣಗಳು ಸಕ್ರೀಯವಾಗಿವೆ. ಕೋವಿಡ್‌ ಕೇರ್‌ ಸೆಂಟರ್‌ ಹಾಗೂ ಕೋವಿಡ್ ಆಸ್ಪತ್ರೆಯಿಂದ 18 ಜನರು ಬಿಡುಗಡೆ ಹೊಂದಿದ್ದಾರೆ. ಈವರೆಗೆ 1,854 ಜನರು ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ.

ಬೀದರ್ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 25 ಜನರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ಭಾಲ್ಕಿ ತಾಲ್ಲೂಕಿನಲ್ಲಿ 11 ಜನರಿಗೆ, ಹುಮನಾಬಾದ್ ತಾಲ್ಲೂಕಿನಲ್ಲಿ 4, ಬಸವಕಲ್ಯಾಣ 2 ಹಾಗೂ ಔರಾದ್ ತಾಲ್ಲೂಕಿನಲ್ಲಿ ಐವರಿಗೆ ಸೋಂಕು ತಗುಲಿದೆ. ಈವರೆಗೆ 53,294 ಜನರ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಲಾಗಿದೆ. 49,576 ಜನರ ವರದಿ ನೆಗೆಟಿವ್‌ ಬಂದಿದೆ. ಇನ್ನೂ 875 ಮಂದಿಯ ವರದಿ ಬರಬೇಕಿದೆ.

ಲೋಕಾಯುಕ್ತ ಕಚೇರಿಯ 26 ವರ್ಷದ ಮಹಿಳೆ, ಬೀದರ್‌ ನಗರದ ಕೃಷಿ ಕಾಲೊನಿಯ 54 ವರ್ಷ ಪುರುಷ, ಜಿಲ್ಲಾಧಿಕಾರಿ ಕಚೇರಿ ರಸ್ತೆಯ ಎಸ್‌ಬಿಐ ಕಚೇರಿಯ ಸಿಬ್ಬಂದಿ 27 ವರ್ಷದ ಪುರುಷ, ರಾಂಪುರೆ ಕಾಲೊನಿಯ 34 ವರ್ಷದ ಪುರುಷ, ಗೋಸಾವಿಗಲ್ಲಿಯ 32 ವರ್ಷದ ಮಹಿಳೆ, ಕುಂಬಾರವಾಡಾದ 47 ವರ್ಷದ ಪುರುಷ, ಬೀದರ್‌ ತಾಲ್ಲೂಕಿನ ಮಮದಾಪುರದ 34 ವರ್ಷದ ಪುರುಷನಿಗೆ ಸೋಂಕು ತಗುಲಿದೆ.

ಭಾಲ್ಕಿಯ 25 ವರ್ಷದ ಮಹಿಳೆ, ಗೋಪಾಲ ಗಲ್ಲಿಯ 58 ವರ್ಷದ ಇಬ್ಬರು ಪುರುಷರು, ಭಾಲ್ಕಿ ತಾಲ್ಲೂಕಿನ ನಿಟ್ಟೂರಿನ 55 ವರ್ಷದ ಮಹಿಳೆ, ಔರಾದ್‌ನ 47 ವರ್ಷದ ಮಹಿಳೆ, ಔರಾದ್‌ ತಾಲ್ಲೂಕಿನ ಹೆಡಗಾಪುರದ 20 ವರ್ಷದ ಯುವಕ, ಹೊಕ್ರಾಣಾದ 20, 48 ವರ್ಷದ ಪುರುಷ, ಚಟ್ನಾಳದ 35 ವರ್ಷದ ಮಹಿಳೆ, ಚಾಂದೂರಿಯ 24 ವರ್ಷದ ಪುರುಷ ಹಾಗೂ 38 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಕಮಲನಗರ ತಾಲ್ಲೂಕಿನ ಠಾಣಾಕುಶನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ 55 ವರ್ಷದ ಮಹಿಳಾ ಸಿಬ್ಬಂದಿ, ಹುಮನಾಬಾದ್‌ನ ಎಸ್‌ಪಿಆರ್‌. ಶಾಲೆಯ 70 ವರ್ಷದ ಪುರುಷ, 38 ವರ್ಷದ ಮಹಿಳೆ ಹಾಗೂ ಹುಮನಾಬಾದ್‌ ತಾಲ್ಲೂಕಿನ ದುಬಲಗುಂಡಿಯ 20 ವರ್ಷದ ಯುವತಿಗೆ ಸೋಂಕು ತಗುಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು