ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಶತಕ ಸಮೀಪಿಸುತ್ತಿದೆ ಮೃತರ ಸಂಖ್ಯೆ

ಮತ್ತೆ 84 ಮಂದಿಗೆ ಕೋವಿಡ್ ವೈರಾಣು
Last Updated 7 ಆಗಸ್ಟ್ 2020, 14:54 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಶುಕ್ರವಾರ 84 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಒಬ್ಬರು ಮೃತಪಟ್ಟಿದ್ದು, ಕೋವಿಡ್‌ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 95ಕ್ಕೆ ಏರಿದೆ.

ಕೋವಿಡ್‌ ಸೋಂಕಿನಿಂದಲೇ 91 ಜನ ಹಾಗೂ ಕೋವಿಡ್‌ ಜತೆಗೆ ಬಹು ಅಂಗಾಂಗ ವೈಫಲ್ಯದಿಂದ ನಾಲ್ವರು ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 2,796ಕ್ಕೆ ತಲುಪಿದೆ. 869 ಕೋವಿಡ್‌ ಪ್ರಕರಣಗಳು ಸಕ್ರೀಯವಾಗಿವೆ. ಕೋವಿಡ್‌ ಕೇರ್‌ ಸೆಂಟರ್‌ ಹಾಗೂ ಕೋವಿಡ್ ಆಸ್ಪತ್ರೆಯಿಂದ 29 ಮಂದಿ ಬಿಡುಗಡೆ ಹೊಂದಿದ್ದಾರೆ. ಈವರೆಗೆ 1,832 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗಳಿಗೆ ತೆರಳಿದ್ದಾರೆ.

ಬೀದರ್ ತಾಲ್ಲೂಕಿನಲ್ಲಿ ಅತಿ ಹೆಚ್ಚು 24 ಜನರಿಗೆ ಶುಕ್ರವಾರ ಕೋವಿಡ್‌ ಸೋಂಕು ದೃಢಪಟ್ಟಿದೆ.
ಹುಮನಾಬಾದ್ ತಾಲ್ಲೂಕಿನಲ್ಲಿ 18, ಬಸವಕಲ್ಯಾಣ ಹಾಗೂ ಔರಾದ್ ತಾಲ್ಲೂಕಿನಲ್ಲಿ ತಲಾ 15, ಭಾಲ್ಕಿ ತಾಲ್ಲೂಕಿನಲ್ಲಿ 12 ಜನರಿಗೆ ಸೋಂಕು ತಗುಲಿದೆ. ಈವರೆಗೆ 52,495 ಜನರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ. 48,998 ಜನರ ವರದಿ ನೆಗೆಟಿವ್‌ ಬಂದಿದೆ. ಇನ್ನೂ 701 ಮಂದಿಯ ವರದಿ ಬರಬೇಕಿದೆ.

ಬೀದರ್‌ ಎಸ್‌.ಪಿ ಕಚೇರಿಯ 24 ವರ್ಷದ ಮಹಿಳಾ ಸಿಬ್ಬಂದಿ, ಬ್ರಿಮ್ಸ್‌ನ 22 ವರ್ಷದ ಪುರುಷ, ಜಿಲ್ಲಾ ತರಬೇತಿ ಕೇಂದ್ರದ 54, 59 ವರ್ಷದ ಪುರುಷ, ಬೀದರ್‌ನ ಪನ್ಸಾಲ್‌ ತಾಲಿಂನ 44 ವರ್ಷದ ಪುರುಷ,
ಚೌಬಾರಾದ 35 ವರ್ಷದ ಮಹಿಳೆ, ಗುಂಪಾದ 59 ವರ್ಷದ ಮಹಿಳೆ, ನ್ಯೂಆದರ್ಶ ಕಾಲೊನಿಯ 47 ವರ್ಷದ ಮಹಿಳೆ, ಅಲ್ಲಮಪ್ರಭುನಗರದ 28, 21, 23 ವರ್ಷದ ಮಹಿಳೆ, 8, 15 ವರ್ಷದ ಬಾಲಕ, ಅನಂದನಗರದ 45, 17 ವರ್ಷದ ಮಹಿಳೆ, ನಂದಿಕಾಲೊನಿಯ63 ವರ್ಷದ ಮಹಿಳೆ, 37 ವರ್ಷದ ಪುರುಷ, 11 ವರ್ಷದ ಬಾಲಕಿ, ಶಿವನಗರ ಉತ್ತರದ 64, 38, ವರ್ಷದ ಪುರುಷ ಹಾಗೂ ಬೀದರ್‌ ತಾಲ್ಲೂಕಿನ ಮರಕಲ್‌ ಗ್ರಾಮದ 26 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

ಹುಮನಾಬಾದ್‌ ತಾಲ್ಲೂಕಿನ ಮಂಗಲಗಿಯ 6, 9 ವರ್ಷದ ಬಾಲಕಿ 18 ವರ್ಷದ ಯುವತಿ, ಹುಡಗಿ ಗ್ರಾಮದ
79 ವರ್ಷದ ಮಹಿಳೆ, ಹುಡಗಿ ಬುದ್ಧ ಮಂದಿರದ 11 ವರ್ಷದ ಬಾಲಕ, ರಾಮಲಿಂಗೇಶ್ವರ ಮಂದಿರದ 35 ವರ್ಷದ ಪುರುಷ, 14 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದೆ.

ಚಿಟಗುಪ್ಪ ತಾಲ್ಲೂಕಿನಲ್ಲಿ 9 ಜನರಿಗೆ ಕೋವಿಡ್ ಸೋಂಕು ತಗುಲಿದೆ. 34, 56, 32, 38 ಹಾಗೂ 45 ವರ್ಷದ ಪುರುಷ, 18, 25, 43 ಹಾಗೂ 46 ವರ್ಷದ ಮಹಿಳೆಗೆ ಸೋಂಕು ದೃಡಪಟ್ಡಿದೆ. ಔರಾದ್‌ನ 50 ವರ್ಷದ ಮಹಿಳೆ, ಔರಾದ್‌ ತಾಲ್ಲೂಕಿನ ಸಂತಪುರದ 43, 32 ವರ್ಷದ ಮಹಿಳೆ, ಸಮುದಾಯ ಆರೋಗ್ಯ ಕೇಂದ್ರ 33 ವರ್ಷದ ಪುರುಷನಿಗೆ ಕೋವಿಡ್‌ ಸೋಂಕು ತಗುಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT