ಶನಿವಾರ, ಮೇ 28, 2022
30 °C

ಬಸ್‌ ಚಾಲಕನ ಮೇಲೆ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಔರಾದ್: ಸಾರಿಗೆ ಸಂಸ್ಥೆಯ ಇಲ್ಲಿನ ಘಟಕದ ಚಾಲಕ ಬಾಪುರಾವ್ ಅವರ ಮೇಲೆ ಪ್ರಯಾಣಿಕನೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಮುರ್ಕಿ ತಾಂಡಾದ ಸಂದೀಪ್ ರಾಠೋಡ್ ಹಲ್ಲೆ ನಡೆಸಿದ ಪ್ರಯಾಣಿಕ. ಉದಗೀರನಿಂದ ಔರಾದ್ ಕಡೆ ಬರುತ್ತಿರುವ ಬಸ್‌ಗೆ ಪ್ರಯಾಣಿಕ ಸಂದೀಪ್ ಮುರ್ಕಿ ಗ್ರಾಮದಲ್ಲಿ ಹತ್ತಿದ್ದಾನೆ. ಇನ್ನು ‌ಮಾಳೆಗಾಂವ್ ಮುಂದೆ ಇರುವಾಗ ಬಸ್ ನಿಲ್ಲಿಸಲು ಹೇಳಿದ್ದಾನೆ. ನಡುವೆ ಬಸ್ ನಿಲ್ಲಸಲಾಗದು. ಮಾಳೆಗಾಂವ್ ನಿಲ್ದಾಣದ ಹತ್ತಿರ ಇಳಿದುಕೊಳ್ಳಿ ಎಂದು ಚಾಲಕ ಬಾಪುರಾವ ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದು ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ. 

ಗಾಯಾಳುವನ್ನು ಚಿಕಿತ್ಸೆಗಾಗಿ ಉದಗೀರ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಕುರಿತು ಹೊಕ್ರಾಣಾ ಠಾಣೆಗೆ ದೂರು ನೀಡಲಾಗಿದೆ ಎಂದು ಘಟಕ ವ್ಯವಸ್ಥಾಪಕ ಎಂ.ಡಿ. ನಯೀಮ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು