ಕಮಲನಗರ: ತಾಲ್ಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ ರೈತರ ಬೆಳೆಗಳು ಹಾಳಾಗಿವೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್, ಜಿಲ್ಲಾಧಿಕಾರಿ ರಾಮಚಂದ್ರನ್ ಅವರು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ರೈತರಿಂದ ಮಾಹಿತಿ ಪಡೆದರು.

ಸಚಿವ ಚವಾಣ್ ಮುಂದೆ ರೈತರ ಅಳಲು: ಹೊಲಗಳಿಗೆ ತೆರಳಿದ ಸಚಿವರ ಮುಂದೆ ಸಂಗಮ, ಸಾವಳಿ, ಬಳತ, ಹೊಳಸಮುದ್ರ ವಿವಿಧ ಗ್ರಾಮ ರೈತರು ತಮ್ಮ ಅಳಲು
ತೋಡಿಕೊಂಡರು.

ಭಾರಿ ಮಳೆಯಿಂದಾಗಿ ಹೊಲಗಳಲ್ಲಿ ನೀರು ನಿಂತಿರುವುದರಿಂದ ಬೆಳೆ ಹಾನಿ ಪರಿಹಾರ ಮೊತ್ತ ಹೆಚ್ಚಿಸಬೇಕು ಎಂದು ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು. ರಾಶಿ ಮಾಡಿ ಲಾಭದ ನಿರೀಕ್ಷೆಯಲ್ಲಿ ಇದ್ದೆವು. ಮಹಾರಾಷ್ಟ್ರದಲ್ಲಿ ಅಧಿಕ ಮಳೆ ಮತ್ತು ಅಲ್ಲಿನ ಜಲಾಶಯಗಳಿಂದಹೆಚ್ಚುವರಿ ನೀರು ಬಿಡುಗಡೆ ಮಾಡಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಅಳಲು ತೋಡಿಕೊಂಡರು.

ಪರಿಹಾರದ ಭರವಸೆ: ಸಚಿವ ಪ್ರಭು ಚವಾಣ್ ಮಾತನಾಡಿ, ’ಜಿಲ್ಲೆಯಲ್ಲಿ ಕಳೆದ ಕೆಲದಿನಗಳಿಂದ ಸುರಿದ ಮಳೆಯಿಂದಾಗಿ ಬೆಳೆಗಳು ಹಾಳಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ’ ಎಂದು ಅವರು ಹೇಳಿದರು.

ಅವರ ಬೆಂಬಲಕ್ಕೆ ಸರ್ಕಾರ ಸದಾ ಇರಲಿದೆ. ಅವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳ ಲಾಗುವುದು. ಈಗಾಗಲೇ ಕಂದಾಯ ಇಲಾಖೆ, ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ಸರ್ವೆ ನಡೆಸಿ ವರದಿ ಸಲ್ಲಿಸಿವೆ.

ಪರಿಹಾರ ನೀಡುವಂತೆ ಒತ್ತಾಯಿಸಲು ಮುಖ್ಯಮಂತ್ರಿ ಬಳಿ ನಿಯೋಗ ತೆಗೆದುಕೊಂಡು ಹೋಗಲಾ ಗುವುದು. ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ ಎಂದರು. ಜಿಲ್ಲಾಧಿಕಾರಿ ರಾಮಚಂದ್ರನ್. ಆರ್, ಬೀದರ್ ಜಂಟಿ ಕೃಷಿ ನಿರ್ದೇಶಕಿ ಜಿ.ಎಚ್. ತಾರಾಮಣಿ, ಔರಾದ್ ಕೃಷಿ ನಿರ್ದೆಶಕರು
ಅನ್ಸಾರಿ, ಬೀದರ ಧೂಳಪ್ಪ, ಚಂದ್ರಶೇಖರ ನಾಯಕ, ತೆಂಗೆ ಗೌಡರು, ಮಾಜಿ
ಶಾಸಕ ಪ್ರಕಾಶ ಖಂಡ್ರೆ, ಎಪಿಎಂಸಿ ಅಧ್ಯಕ್ಷ ರಂಗರಾವ ಜಾಧವ, ಮಾಜಿ ಅಧ್ಯಕ್ಷ ರಮೇಶ ಉಪಾಸೆ, ಮುಖಂಡ ಡಿಕೆ ಸಿದ್ರಾಮ, ಸಚಿವರ ಆಪ್ತ ಸಹಾಯಕ ಅನೀಲಕುಮಾರ, ಕಮಲನಗರ ತಹಶೀಲ್ದಾರ್ ರಮೇಶ ಪೆದ್ದೇ, ರೂಪಾದೇವಿ, ಇಂದಿರಾ ಅಕ್ಕಲಕೋಟ್, ಕೃಷ್ಣ ಅಮೀಲಪುರೆ, ಮುಖಂಡ ರಾಹುಲ ಪಾಟೀಲ, ವಿಷ್ಣುಕಾಂತ, ಕೃಷ್ಣ, ಜೆಇ ದೇವಾನಂದ ದೇಶಮುಖ ಸೇರಿದಂತೆ ಹಲವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.