ಬೀದರ್: ಜಿಲ್ಲೆಯಲ್ಲಿ ರೈತರಿಂದ ಹೆಸರು ಕಾಳು ಖರೀದಿಸಲು ಒಟ್ಟು 30 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಕ್ವಿಂಟಲ್‌ಗೆ ₹8,682 ಇದ್ದು, ಹೆಸರು ಕಾಳು ಖರೀದಿಸಿದ ರೈತರಿಗೆ ಹಣವನ್ನು ಅವರ ಖಾತೆಗೆ ಡಿಬಿಟಿ ಮೂಲಕ ಜಮೆ ಮಾಡಲಾಗುತ್ತದೆ. ರೈತರು ಸದರಿ ಯೋಜನೆಯ ಲಾಭ ಪಡೆಯಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಮನವಿ ಮಾಡಿದೆ.