ಭಾನುವಾರ, ಮೇ 16, 2021
29 °C
ಕೋವಿಡ್‌ ತಡೆಗೆ ಕಮಲನಗರ ತಾಲ್ಲೂಕಿನ ಮೂರು ಕಡೆ ಚೆಕ್‍ಪೋಸ್ಟ್‌ ಸ್ಥಾಪನೆ

ಕರ್ಫ್ಯೂ ಸಡಿಲಿಕೆ ರೈತರಿಗೆ ಮಾತ್ರ ಅನ್ವಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲನಗರ: ‘ಪಟ್ಟಣಕ್ಕೆ ಹೊರ ಜಿಲ್ಲೆಗಳಿಂದ ಮತ್ತು ಹೊರ ರಾಜ್ಯಗಳಿಂದ ಬರುವವರ ಮೇಲೆ ತೀವ್ರ ನಿಗಾವಹಿಸಲು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ’ ಎಂದು ಭಾಲ್ಕಿ ಡಿವೈಎಸ್ಪಿ ಡಾ.ದೇವರಾಜ ಹೇಳಿದರು.

ತಾಲ್ಲೂಕಿನ ಮಹಾರಾಷ್ಟ್ರ ಗಡಿ ಸಮೀಪ ಸ್ಥಾಪಿಸಿರುವ ಚೆಕ್‍ಪೋಸ್ಟ್‌ಗೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿ, ಅವರು ಮಾತನಾಡಿದರು.

‘ಕೋವಿಡ್ ಎರಡನೇ ಅಲೆ ವೈರಸ್ ಸೋಂಕು ವೇಗವಾಗಿ ಹರಡುತ್ತಿದೆ. ಕಮಲನಗರ ಪಟ್ಟಣ ಪ್ರವೇಶಿಸುವ ವಾಹನ, ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಆರೋಗ್ಯ ಪರಿಸ್ಥಿತಿ ಆಧರಿಸಿ ಹೋಂ ಕ್ವಾರಂಟೈನ್ ಅಥವಾ ಸಾಂಸ್ಥಿಕ ಕ್ವಾರಂಟೈನ್ ಕಳುಹಿಸುವುದು ಅನಿವಾರ್ಯವಾಗಿದೆ’ ಎಂದು ತಿಳಿಸಿದರು.

ಮುಂಬೈ, ಪುಣೆ, ಲಾತೂರು, ಉದಗೀರ, ದೇವಣಿ ದೇಗಲೂರು ಕಡೆಯಿಂದ ಬೀದರ್‌ಗೆ ಬರುವ ವಾಹನ ಸವಾರರು ಕಮಲನಗರ, ಮುರ್ಕಿ ಮತ್ತು ಚಿಕ್ಲಿ (ಯು), ಎಕಂಬಾ, ಲಖ್ಖಣಗಾಂವ್, ನಾರಾಯಣಪುರ ಚೆಕ್‌ಪೋಸ್ಟ್‌ಗಳ ಮೂಲಕ ಬರಬೇಕು.

ಕಮಲನಗರ ಚೆಕ್‌ಪೋಸ್ಟ್ ಮೂಲಕ ಭಾನುವಾರ ಸಂಜೆವರೆಗೂ 60ಕ್ಕೂ ಅಧಿಕ ಜನ ಹೊರರಾಜ್ಯದಿಂದ ಮರಳಿದ್ದು ಹೋಂ ಕ್ವಾರಂಟೈನ್ ಇರುವಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಸೂಚಿಸಿದ್ದಾರೆ.

ಸಿಪಿಐ ಪಾಲಕ್ಷಯ್ಯ ಹಿರೇಮಠ, ಪಿಎಸ್‍ಐ ನಂದಿನಿ ಎಸ್., ಅಜಯಸಿಂಗ್‌ ಠಾಕೋರ್, ಸ್ವಾಮಿ, ಆರೋಗ್ಯ ಕೇಂದ್ರ ಸಿಬ್ಬಂದಿ ಲಹು, ಚಿಕ್ಲಿ ಚೆಕ್‌ಪೋಸ್ಟ್‌ನಲ್ಲಿ ಹೋಕರ್ಣಾ ಪಿಎಸ್‍ಐ ರಮೇಶ ಟೋಕರೆ, ಎಎಸ್‍ಐ ಮಲ್ಲಿಕಾರ್ಜುನ ಬಿರಾದಾರ, ಎಎಸ್‍ಐ ಗುರುನಾಥ, ಕಾನ್‌ಸ್ಟೆಬಲ್‌ ಪರಶುರಾಮ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು