ಬೀದರ್: ನಗರದ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ ದಸರಾ ಸಿ.ಎಂ. ಕಪ್ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ಭಾಲ್ಕಿ ತಾಲ್ಲೂಕಿನ ಕ್ರೀಡಾಪಟುಗಳು ಉತ್ತಮ ಸಾಧನೆ ತೋರಿ, ಹೆಚ್ಚಿನ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಫುಟ್‌ಬಾಲ್, ಹಾಕಿ, ವಾಲಿಬಾಲ್, ಕೊಕ್ಕೊ, ಕಬಡ್ಡಿ, ಥ್ರೋಬಾಲ್, ಯೋಗ, ಕುಸ್ತಿ, ಅಥ್ಲೆಟಿಕ್ಸ್, ಬಾಡ್ಮಿಂಟನ್ ಸೇರಿದಂತೆ ವಿವಿಧ ವಿಭಾಗಗಳ ಸ್ಪರ್ಧೆಗಳಲ್ಲಿ ಪುರುಷ ಮತ್ತು ಮಹಿಳಾ ಸ್ಪರ್ಧಿಗಳು ಹುಮ್ಮಸ್ಸಿನಿಂದ ಭಾಗವಹಿಸಿ ಗೆಲುವಿಗಾಗಿ ಸೆಣಸಾಡಿದರು.
ಇದಕ್ಕೂ ಮುನ್ನ ನಗರಸಭೆ ಅಧ್ಯಕ್ಷ ಮುಹಮ್ಮದ್ ಗೌಸ್ ಕ್ರೀಡಾಕೂಟ ಉದ್ಘಾಟಿಸಿ, ಎಲ್ಲರೂ ಉತ್ಸಾಹದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು. ಸೋಲು–ಗೆಲುವಿಗಿಂತ ಕ್ರೀಡಾ ಮನೋಭಾವ ಮುಖ್ಯ ಎಂಬ ಭಾವನೆ ಇರಬೇಕೆಂದು ಹೇಳಿದರು.
ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಪದ್ಮಾವತಿ, ದೈಹಿಕ ಶಿಕ್ಷಕರಾದ ಬಿ. ಬಂಡೆಪ್ಪ, ಶಿವರಾಜ ಕಣಜಿ, ಶ್ರೀನಿವಾಸ ರೆಡ್ಡಿ, ಜಿಲ್ಲೆಯ ಎಲ್ಲ ತಾಲ್ಲೂಕುಗಳ ಪುರುಷ ಹಾಗೂ ಮಹಿಳಾ ಸ್ಪರ್ಧಿಗಳು ಪಾಲ್ಗೊಂಡಿದ್ದರು.
ಪುರುಷರ ವಿಭಾಗದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿ ಪ್ರಥಮ ಬಹುಮಾನ ಗಳಿಸಿದವರ ವಿವರ ಇಂತಿದೆ:
100 ಮೀ. ಹಾಗೂ 200 ಮೀ. ಓಟ– ಭಾಲ್ಕಿಯ ರೋಹಿತ್. 400 ಮೀ. ಹಾಗೂ 800 ಮೀ.ಓಟ–ಬೀದರ್‌ನ ಎಂ.ಡಿ. ಇಸ್ಮಾಯಿಲ್ ತಾಜುದ್ದೀನ್. 1,500 ಮೀ. ಹಾಗೂ 5,000 ಮೀ ಓಟ–ಔರಾದ್‌ನ ಭೈರವನಾಥ್ ಕಂಟೆಪ್ಪ. 10,000 ಮೀ. ಓಟ–ಬಸವಕಲ್ಯಾಣದ ಓಂಕಾರ ಸಿದ್ರಾಮ.
ಉದ್ದ ಜಿಗಿತ–ವಿಷ್ಣುಕಾಂತ ವೀರಣ್ಣ. ಎತ್ತರ ಜಿಗಿತ–ವಿಷ್ಣುಕಾಂತ ವೀರಣ್ಣ. ಗುಂಡು ಎಸೆತ–ಔರಾದ್‌ನ ಅರವಿಂದ ಗುಂಡಪ್ಪ. ಟ್ರಿಪಲ್ ಜಂಪ್–ಭಾಲ್ಕಿಯ ಆಕಾಶ್ ಪ್ರಕಾಶ್. ಭಲ್ಲೆ ಎಸೆತ–ಸೋಹೆಲ್ ಮೆಹಬೂಬ್. ಡಿಸ್ಕಸ್ ಥ್ರೋ–ಬಸಯ್ಯ ಮನ್ಮಥಯ್ಯ. 4X100 ಮಿ. ರಿಲೇ–ಹುಮನಾಬಾದಿನ ವಿಶಾಲ, ಲಕ್ಷ್ಮಣ ತಂಡ. 4X400 ಮೀ. ರಿಲೇ–ಬಸವಕಲ್ಯಾಣದ ಸುರೇಶ ಹಾಗೂ ತಂಡ. ವಾಲಿಬಾಲ್–ಹುಮನಾಬಾದ್‌ನ ಸಾಬೇರ್ ನಿಸಾರ್ ಅಹಮ್ಮದ್ ಹಾಗೂ ತಂಡ. ಫುಟ್‌ಬಾಲ್– ಬೀದರ್‌ನ ಮಾಜೀದ್ ಹಾಗೂ ತಂಡ. ಥ್ರೋಬಾಲ್–ಹುಮನಾಬಾದ್‌ನ ಧನರಾಜ ಹಾಗೂ ತಂಡ. ಕಬಡ್ಡಿ–ಬೀದರ್ ತಂಡ. ಖೋ ಖೋ –ಬಸವಕಲ್ಯಾಣ ತಂಡ.
ಮಹಿಳೆಯರ ವಿಭಾಗದ ವಿಜೇತರ ವಿವರ:
100 ಮೀ. ಓಟ ಹಾಗೂ 200 ಮೀ. ಓಟ–ಭಾಲ್ಕಿಯ ಭುವನೇಶ್ವರಿ. 400 ಮೀ. ಓಟ–ಸರಸ್ವತಿ ದಿಗಂಬರ. 800 ಮೀ. ಓಟ–ಔರಾದ್‌ನ ಪಾರ್ವತಿ ತಾನಾಜಿ. 1,500 ಮೀ. ಓಟ–ಬಸವಕಲ್ಯಾಣದ ನರಸಮ್ಮ ನಾಗನಾಥ. ಉದ್ದ ಜಿಗಿತ–ಬಸವಕಲ್ಯಾಣದ ಲಕ್ಷ್ಮಿ ಭೀಮಣ್ಣ. ಎತ್ತರ ಜಿಗಿತ–ಭಾಲ್ಕಿಯ ಸೋನಿಕಾ ವೀರಶೆಟ್ಟಿ. ಗುಂಡು ಎಸೆತ–ಅಂಜಲಿ ರಾಜಕುಮಾರ. ಟ್ರಿಪಲ್ ಜಂಪ್–ಭಾಲ್ಕಿಯ ಪೂಜಾ ವಿಲಾಸ. ಡಿಸ್ಕಸ್ ಥ್ರೋ–ಅಂಜಲಿ ದೀಪಕ್. 4X100 ಮೀ. ರಿಲೇ–ಸಿದ್ದೇಶ್ವರಿ ಹಾಗೂ ತಂಡ. 4X400 ವೈಷ್ಣವಿ ಹಾಗೂ ತಂಡ. ವಾಲಿಬಾಲ್–ಭಾಲ್ಕಿಯ ಅಕ್ಕಮಹಾದೇವಿ ಪದವಿಪೂರ್ವ ಕಾಲೇಜು. ಕಬಡ್ಡಿ–ಭಾಲ್ಕಿ ಸರ್ಕಾರಿ ಪ್ರೌಢಶಾಲೆ. ಕೊಕ್ಕೊ –ಭಾಲ್ಕಿ ತಂಡ. ಥ್ರೋಬಾಲ್–ಭಾಲ್ಕಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.