ಬೀದರ್: ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಶಾಲಾ ಮಕ್ಕಳ ಆಧಾರ್ ಕಾರ್ಡ್ ಅಪ್ಡೇಟ್ ಆಗದ ಕಾರಣ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.

ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಬೇಕಾದರೆ ಆಧಾರ್ ಇರುವುದು ಕಡ್ಡಾಯ. ಶಿಷ್ಯವೇತನ, ಲಸಿಕೆ, ಚುಚ್ಚುಮದ್ದು, ಶಾಲಾ ದಾಖಲಾತಿ ವೇಳೆ ಆಧಾರ್ ಸಲ್ಲಿಸುವುದು ಕಡ್ಡಾಯಗೊಳಿಸಲಾಗಿದೆ. ಎಸ್ಎಟಿಎಸ್ನಲ್ಲಿ(ಸ್ಯಾಟ್ಸ್–ಸ್ಟೂಡೆಂಟ್ಸ್ ಟ್ರ್ಯಾಕಿಂಗ್ ಸಿಸ್ಟಂ) ವಿದ್ಯಾರ್ಥಿಗಳ ಸಂಪೂರ್ಣ ವಿವರ ದಾಖಲಿಸುವುದು ಕಡ್ಡಾಯ ಮಾಡಲಾಗಿದೆ.

ಎಲ್ಲ ಜಿಲ್ಲೆಗಳಲ್ಲಿ ನೂರಕ್ಕೆ ನೂರರಷ್ಟು ವಿದ್ಯಾರ್ಥಿಗಳ ವಿವರ ನಮೂದಿಸುವಂತೆ ತಿಳಿಸಲಾಗಿದೆ. ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಪ್ರಸಕ್ತ ಸಾಲಿನ ಜನವರಿ 21ರಂದು ಸುತ್ತೋಲೆ ಹೊರಡಿಸಿ, ಅತಿ ತುರ್ತಾಗಿ ಈ ಕೆಲಸ ಮುಗಿಸಬೇಕೆಂದು ರಾಜ್ಯದ ಎಲ್ಲ ಡಿಡಿಪಿಐಗಳಿಗೆ ನಿರ್ದೇಶನ ನೀಡಿದ್ದಾರೆ. ಹೀಗಿದ್ದರೂ ಕೆಲಸ ನಿಧಾನ ಗತಿಯಲ್ಲಿ ಆಗುತ್ತಿದೆ. ಅದರ ಪರಿಣಾಮ ವಿದ್ಯಾರ್ಥಿಗಳ ಮೇಲೆ
ಆಗುತ್ತಿದೆ.

‘ಈಗ ಪ್ರತಿಯೊಂದಕ್ಕೂ ಆಧಾರ್ ಕಾರ್ಡ್ ಬೇಕು. ಅದು ಇರದಿದ್ದರೆ ಯಾವುದೇ ರೀತಿಯ ಕೆಲಸಗಳು ಆಗುವುದಿಲ್ಲ. ಸಂವಿಧಾನದಲ್ಲಿಯೇ ಶಿಕ್ಷಣ ಮೂಲಹಕ್ಕು ಎಂದು ತಿಳಿಸಲಾಗಿದೆ. ಆಧಾರ್ನಿಂದ ಮಗುವಿನ ಶಿಕ್ಷಣಕ್ಕೆ ತೊಡಕಾದರೆ ಗಂಭೀರ ಪ್ರಮಾದ’ ಎನ್ನುತ್ತಾರೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.