ಬೀದರ್: ಮೈಸೂರಿನ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ(ಸಿಪೆಟ್)ಯು ತಕ್ಷಣ ನೌಕರಿ ಹಾಗೂ ಸ್ವಂತ ಉದ್ಯೋಗ ಕಂಡುಕೊಳ್ಳಲು ನೆರವಾಗುವ ತನ್ನ ವಿವಿಧ ಡಿಪ್ಲೊಮಾ ಕೋರ್ಸ್‍ಗಳ ಬಗ್ಗೆ ಜಿಲ್ಲೆಯಲ್ಲೂ ಜಾಗೃತಿ ಮೂಡಿಸುತ್ತಿದೆ.

ಸಂಸ್ಥೆಯ ಅಧಿಕಾರಿಗಳು ಜಿಲ್ಲೆಯ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು, ಉಪನ್ಯಾಸಕರು, ಪಾಲಕರು ಹಾಗೂ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಹಾಗೂ ಬಿ.ಎಸ್ಸಿ ಪೂರ್ಣಗೊಳಿಸಿದವರಿಗೆ ಇರುವ ಡಿಪ್ಲೊಮಾ ಕೋರ್ಸ್‍ಗಳ ಮಾಹಿತಿ ನೀಡುತ್ತಿದ್ದಾರೆ.
ಸಿಪೆಟ್‍ನಲ್ಲಿ ಡಿಪ್ಲೊಮಾ ಮುಗಿಸಿದ ಎಲ್ಲ ಅಭ್ಯರ್ಥಿಗಳಿಗೂ ಉದ್ಯೋಗ ಲಭಿಸಿದೆ. ಅನೇಕರು ಸ್ವಂತ ಉದ್ಯೋಗ ಶುರು ಮಾಡಿದ್ದಾರೆ. ಡಿಪ್ಲೊಮಾ ಕೋರ್ಸ್‍ಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಹಾಸ್ಟೇಲ್, ವಿದ್ಯಾರ್ಥಿ ವೇತನ ಸೇರಿದಂತೆ ವಿವಿಧ ಸೌಲಭ್ಯಗಳು ಇವೆ ಎಂದು ಸಿಪೆಟ್‍ನ ಅಧಿಕಾರಿ ಸದಾಶಿವಪ್ಪ ಅವರು ತಿಳಿಸಿದರು.

10ನೇ ತರಗತಿ, ಎಸ್ಸೆಸ್ಸೆಲ್ಸಿ, ಪಿಯುಸಿ ಉತ್ತೀರ್ಣರಾದವರು ಮೂರು ವರ್ಷಗಳ ಅವಧಿಯ ‘ಡಿಪ್ಲೊಮಾ ಇನ್ ಪ್ಲಾಸ್ಟಿಕ್ಸ್ ಮೌಲ್ಡ್ ಟೆಕ್ನಾಲಜಿ’ (ಡಿಪಿಎಂಟಿ) ಅಥವಾ ‘ಡಿಪ್ಲೊಮಾ ಇನ್ ಪ್ಲಾಸ್ಟಿಕ್ಸ್ ಟೆಕ್ನಾಲಜಿ’ (ಡಿಪಿಟಿ)ಯಲ್ಲಿ ಪ್ರವೇಶ ಪಡೆಯಬಹುದು. ಬಿ.ಎಸ್ಸಿ ಪೂರ್ಣಗೊಳಿಸಿದವರು ಎರಡು ವರ್ಷ ಅವಧಿಯ ‘ಪೊಸ್ಟ್ ಗ್ರ್ಯಾಜುಯೇಟ್ ಡಿಪ್ಲೊಮಾ ಇನ್ ಪ್ಲಾಸ್ಟಿಕ್ಸ್ ಪ್ರೊಸೆಸಿಂಗ್ ಆ್ಯಂಡ್ ಟೆಸ್ಟಿಂಗ್’ (ಪಿಜಿಡಿ-ಪಿಪಿಟಿ) ಕೋರ್ಸ್‍ಗೆ ಪ್ರವೇಶ ಪಡೆಯಬಹುದು ಎಂದು ಹೇಳಿದರು.

ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಜೂನ್ 5 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಕೋರ್ಸ್‍ಗಳ ಮಾಹಿತಿ ಮತ್ತು ಪ್ರವೇಶಕ್ಕಾಗಿ ಸಿಪೆಟ್, #437/ಎ, ಹೆಬ್ಬಾಳ ಕೈಗಾರಿಕಾ ಪ್ರದೇಶ, ಮೆಟಗಳ್ಳಿ, ಮೈಸೂರು- 570016 ಗೆ ಖುದ್ದು ಅಥವಾ ದೂರವಾಣಿ ಸಂಖ್ಯೆ 0821-2510618, ಮೊಬೈಲ್ ಸಂಖ್ಯೆ 9483431968ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.