ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಭೀತಿ: ಮದುವೆಯಲ್ಲಿ ಅಂತರ ಮಾಯ, ಮಾಸ್ಕ್ ಧರಿಸದೇ ನಿಯಮ ಉಲ್ಲಂಘನೆ

Last Updated 14 ಜುಲೈ 2021, 7:14 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ರಾಜ್ಯದಾದ್ಯಂತ ಅನ್‌ಲಾಕ್ ಘೋಷಣೆ ಆದರೂ ಮದುವೆಗೆ ಸೀಮಿತ ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಮದುವೆಯಲ್ಲಿ ಭಾಗವಹಿಸುವವರು ಮಾಸ್ಕ್ ಧರಿಸುವುದು ಸೇರಿದಂತೆ ಕೊರೊನಾ ನಿಯಮಗಳನ್ನು ಪಾಲಿಸದೇ ಇರುವುದರಿಂದ ಕೊರೊನಾ ಹರಡುವ ಆತಂಕ ಹೆಚ್ಚಾಗಿದೆ.

‘ಮದುವೆ ಮಾಡುವವರು ಅನುಮತಿ ಪಡೆಯುವಾಗ ಕಡ್ಡಾಯ ವಾಗಿ ಮಾಸ್ಕ್ ಬಳಕೆ, ಸುರಕ್ಷಿತ ಅಂತರ ಕಾಪಾಡುವುದು ಹಾಗೂ ಸೀಮಿತ ಜನರಿಗೆ ಅವಕಾಶವೆಂದು ಲಿಖಿತ ರೂಪದಲ್ಲಿ ತಿಳಿಸಲಾಗುತ್ತದೆ. ಆದರೆ, ಅದು ಆದೇಶಕ್ಕೆ ಸೀಮಿತವಾಗುತ್ತಿದೆ. ಸಾರ್ವಜನಿಕರು ಯಾವುದೇ ನಿಯಮಗಳನ್ನು ಪಾಲಿಸದಿರುವುದು ಸೋಂಕು ಹೆಚ್ಚಳಕ್ಕೆ ಕಾರಣವಾಗಬಹುದು’ ಎಂದು ಹಿರಿಯರಾದ ಸತ್ತಾರ್ ಷಾ ಅನುಮಾನ ವ್ಯಕ್ತಪಡಿಸಿದ್ದಾರೆ.

‘ಕಲ್ಯಾಣ ಮಂಟಪದ ಪ್ರವೇಶ ದ್ವಾರದಲ್ಲಿ ‘ಮಾಸ್ಕ್ ಕಡ್ಡಾಯ, ಮಾಸ್ಕ್ ಧರಿಸದವರಿಗೆ ಪ್ರವೇಶವಿಲ್ಲ’ ಎಂದು ನಾಮಫಲಕ ಹಾಕಲಾಗಿರುತ್ತದೆ. ಆದರೆ ಇದು ಫಲಕಕ್ಕೆ ಸೀಮಿತವಾಗುತ್ತಿದೆ. ಈ ಮೂಲಕ ತಪಾಸಣೆಯಲ್ಲಿ ಅಧಿಕಾರಿಗಳಿಂದ ತಪ್ಪಿಸಿಕೊಳ್ಳುವ ಕೆಲಸವಾಗುತ್ತಿದೆ’ ಎಂದು ಪ್ರವೀಣ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.

‘ಲಾಕ್‌ಡೌನ್ ಸಮಯದಲ್ಲಿ ಮದುವೆಗೆ ಆಹ್ವಾನಿಸಿದರೂ ಕೊರೊನಾಗೆ ಹೆದರಿ ಯಾರೂ ಬರುತ್ತಿರಲಿಲ್ಲ. ಆದರೆ ಅನ್‌ಲಾಕ್ ಘೋಷಣೆ ಆಗುತ್ತಿದ್ದಂತೆ ಜನರು ಯಾವುದೇ ಆತಂಕವಿಲ್ಲದೆ ಪಾಲ್ಗೊಳ್ಳುತ್ತಿದ್ದಾರೆ’ ಎನ್ನುತ್ತಾರೆ ಸಂಗಮೇಶ್ವರ ಜಾಂತೆ.

‘ತಾಲ್ಲೂಕು ಆಡಳಿತ, ಪೊಲೀಸರು ಅಲ್ಲಲ್ಲಿ ತಪಾಸಣೆ ಮಾಡಿ ದಂಡ ವಿಧಿಸಿದಲ್ಲಿ ಮಾತ್ರ ಜನರು ಕೋವಿಡ್ ನಿಯಮಗಳನ್ನು ಪಾಲಿಸುತ್ತಾರೆ. ಇಲ್ಲವಾದಲ್ಲಿ ಮೂರನೇ ಅಲೆ ವ್ಯಾಪಿಸುವುದು ಖಚಿತ’ ಎಂದು ಶಿಕ್ಷಕ ಚಂದ್ರಕಾಂತ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT