ಹುಮನಾಬಾದ್: ‘ಸರ್ಕಾರಿ ಸೌಲಭ್ಯಗಳ ಲಾಭ ಪಡೆದು ಆರ್ಥಿಕವಾಗಿ ಸದೃಢರಾಗಬೇಕು’ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಹೇಳಿದರು.

ಪಟ್ಟಣದ ಶಾಸಕರ ಕಚೇರಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 9 ಫಲಾನುಭವಿಗಳಿಗೆ ಪಂಪ್ಸೆಟ್ ವಿತರಿಸಿ ಮಾತನಾಡಿದರು.

‘ಸಾವಿರಾರು ರೂಪಾಯಿ ನೀಡಿ ಪಂಪ್, ಮೋಟಾರ್ ಮತ್ತು ಪೈಪ್ಗಳನ್ನು ಕೊಂಡುಕೊಳ್ಳಲಾಗದ ಬಡ ರೈತರನ್ನು ಗುರುತಿಸಿ ಪ್ರತಿವರ್ಷ ಉಚಿತವಾಗಿ ಸರ್ಕಾರ ಸಲಕರಣೆಗಳನ್ನು ನೀಡುತ್ತಿದೆ’ ಎಂದರು.

ಸಂತೋಷ ಪಾಟೀಲ, ನಾಗಭೂಷಣ ಸಂಗಮ್, ಗೌತಮ್ ಸೇಡೋಳ, ನಾರಾಯಣ ರೆಡ್ಡಿ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.