ಭಾನುವಾರ, ಮೇ 29, 2022
22 °C
ಗೌರಿ ಹುಣ್ಣಿಮೆ ದಿನ ಜಾತ್ರೆ: ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಬರುವ ಭಕ್ತರು

ಕಮಲನಗರ: ದಟ್ಟ ಅರಣ್ಯ ಪ್ರದೇಶದಲ್ಲಿ ದೈವಾರಾಧನೆ

ಮನೋಜಕುಮಾರ ಹಿರೇಮಠ Updated:

ಅಕ್ಷರ ಗಾತ್ರ : | |

Prajavani

ಕಮಲನಗರ: ತಾಲ್ಲೂಕಿನ ಡೋಣಂಗಾವ (ಎಂ) ಗ್ರಾಮದಿಂದ ಉತ್ತರಕ್ಕೆ 2 ಕಿ.ಮೀ ದೂರದಲ್ಲಿರುವ ‘ಅಕ್ಕೇರಿ ಭಕ್ತಮುಡಿ ತಪೋವನ’ ಭಕ್ತರನ್ನು ಸೆಳೆಯುತ್ತಿದೆ.‌‌ ಮಾಳಪ್ಪಯ್ಯ ದಟ್ಟ ಕಾನನದ ಮಧ್ಯೆ ನೆಲೆಸಿ ಭಕ್ತರನ್ನು ಕಾಯುತ್ತಾನೆ ಎಂಬುವ ನಂಬಿಕೆ ಇದೆ.

ಅರಣ್ಯದಲ್ಲಿ ಹಳ್ಳದ ಜುಳು, ಜುಳು ನಿನಾದದ ಅನುರಣನ ನಿರಂತರವಾಗಿರುತ್ತದೆ. ಮಂದಿರದ ಎದುರು ಗೌರಿಕುಂಡ, ಅಗ್ನಿಕುಂಡ ಇದೆ. ಮೌಲಿಕ ಗಿಡಮೂಲಿಕೆಗಳು ಸಹ ಇಲ್ಲಿ ದೊರಕುತ್ತವೆ.

ಪ್ರತಿವರ್ಷ ಗೌರಿ ಹುಣ್ಣಿಮೆಯಂದು ಇಲ್ಲಿ ಜಾತ್ರೆ ನಡೆಯುತ್ತದೆ. ಜಾತ್ರಾ ಮಹೋತ್ಸವದ ಪ್ರಯುಕ್ತ ಸಪ್ತಾಹ ಹಮ್ಮಿಕೊಳ್ಳಲಾಗುತ್ತದೆ. ವಿವಾಹ, ಅಭಿಷೇಕ, ಜವಳ, ನೈವೇದ್ಯ ಹಾಗೂ ಕಂಟಲ್ಯ ಬಿಡುವುದು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಜಾತ್ರೆಗೆ ಮಹಾರಾಷ್ಟ್ರ ಸೇರಿದಂತೆ ರಾಜ್ಯದ ಬೇರೆ, ಬೇರೆ ನಗರಗಳಿಂದ ಭಕ್ತರು ಬರುತ್ತಾರೆ.

ಹಿನ್ನೆಲೆ: ಈ ಅರಣ್ಯ ಪ್ರದೇಶಕ್ಕೆ ರಂಭಾಪುರಿ ಪೀಠದ ಜಗದ್ಗುರು ವಿರುಪಾಕ್ಷ ಎಂಬ ತಪಸ್ವಿ ಬರುತ್ತಾರೆ. ಚನ್ನಮಲ್ಲಪ್ಪ ಎನ್ನುವರರ ಜತೆ ವಾಸವಾಗಿರುತ್ತಾರೆ. ಸಮೀಪದ ಹಣೆಗಾಂವ ಗ್ರಾಮದ ಮಂಡಲಾಪುರ ಮನೆತನದ ಬಾಲಕ ಮಾಳಪ್ಪ ದನ ಮೇಯಿಸುತ್ತ ಬಾಲ ಲೀಲೆಗಳನ್ನು ಮಾಡಿಕೊಂಡು ಇರುತ್ತಾರೆ. ಜಗದ್ಗುರು ವೀರುಪಾಕ್ಷ ಬಿಟ್ಟು ಬೇರೆಡೆ ಹೋಗುತ್ತಾರೆ. ಗ್ರಾಮದ ಬಸವಂತಪ್ಪ ದೇಶಮುಖರು ಅವರ ಪಾದುಕೆಗಳನ್ನು ಹತ್ತಿರದ ಡೋಣಗಾಂವ ತಂದು ಮಠ ಸ್ಥಾಪಿಸಿದರು. ಈ ಮಠಕ್ಕೆ ಈಗ ಡಾ.ಶಂಬುಲಿಂಗ ಶಿವಾಚಾರ್ಯರು ಅಧಿಪತಿಯಾಗಿದ್ದಾರೆ. ಇವರು 116ನೇ ಪೀಠಾಧಿಪತಿ.

ರಂಡ್ಯಾಳ ಚನ್ನಮಲ್ಲಪ್ಪ, ಭಕ್ತಮುಡಿ ಮಾಳಪ್ಪಯ್ಯ ಹಾಗೂ ಡೋಣಂಗಾವನ ವೀರುಪಾಕ್ಷರನ್ನು ಇಲ್ಲಿಯ ಜನ ಆರಾಧಿಸುತ್ತಾರೆ. ಇವು ಪುಣ್ಯ ಸ್ಥಳಗಳಾಗಿವೆ. ಇವು ತಲಾ ಎರಡು ಕಿ.ಮೀ ಅಂತರದಲ್ಲಿರುವುದು ವಿಶೇಷ. 

‘ಈ ಮೂವರು ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರಾಗಿ ಅವತರಿಸಿದ್ದಾರೆ’ ಎಂದು ಮಾಹಿತಿ ಸಂಗ್ರಾಹಕ ಸಾಹಿತಿ ಸಂಗಮೇಶ್ವರ ಮುರ್ಕೆ ಹೊಳಸಮುದ್ರಕರ್ ತಿಳಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು