ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಟಗುಪ್ಪ | ಸರ್ಕಾರಿ ಶಾಲೆಗೆ ಕಂಪ್ಯೂಟರ್‌ ಕೊಡುಗೆ; ಶಿಕ್ಷಕ ಸುದರ್ಶನಗೆ ಸತ್ಕಾರ

Published 29 ಜನವರಿ 2024, 14:28 IST
Last Updated 29 ಜನವರಿ 2024, 14:28 IST
ಅಕ್ಷರ ಗಾತ್ರ

ಚಿಟಗುಪ್ಪ: ತಾಲ್ಲೂಕಿನ ಕಂದಗೂಳ ಸರ್ಕಾರಿ ಶಾಲೆಯ ಶಿಕ್ಷಕ ಸುದರ್ಶನ ವಿಶ್ವಕರ್ಮ ತಾವು ಸೇವೆ ಸಲ್ಲಿಸುವ ಶಾಲೆಗೆ ಕಂಪ್ಯೂಟರ್‌ ಹಾಗೂ ಟಿ.ವಿ. ಕೊಡುಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ವಿಜ್ಞಾನ ಶಿಕ್ಷಕರಾಗಿರುವ ಸುದರ್ಶನ,  ಶಾಲೆಯ ಮಕ್ಕಳು ಅಧ್ಯಯನದ ವೇಳೆ ಅನುಭವಿಸುತ್ತಿರುವ ಸಮಸ್ಯೆ ಅರಿತು ಸ್ವಂತ ಹಣದಲ್ಲಿ ಟಿ.ವಿ., ಕಂಪ್ಯೂಟರ್‌ ಖರೀದಿಸಿಕೊಟ್ಟಿದ್ದಾರೆ.

ಇವರ ಪ್ರೇರಣೆಯಿಂದ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಕಾಂತ ಔರಂಗಬಾದ್‌, ಅಣ್ಣೆಪ್ಪ ನಾಗನಕೇರಾ, ಸಂಗಮೇಶ್‌ ಧೂಳ ಅವರು ಕಂಪ್ಯೂಟರ್‌ ಹಾಗೂ ಸಂಜುಕುಮಾರ ವಿಶ್ವಕರ್ಮ ಅವರು ಸ್ವಾತಂತ್ರ ಹೋರಾಟಗಾರರ 20 ಚಿತ್ರಗಳು ಶಾಲೆಗೆ ದೇಣಿಗೆ ನೀಡಿದ್ದಾರೆ.

ಸೋಮವಾರ ಶಾಲೆಯಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಶಿಕ್ಷಕ ಸುದರ್ಶನ ಅವರನ್ನು ಸತ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಅನಿಲಕುಮಾರ್‌ ಸಿಂದಗಿರಿ, ಬಸವರಾಜ್‌ ಪಾಟೀಲ, ಜನಾರ್ದನ ರಡ್ಡಿ ಶೇರಿಕಾರ್‌, ಅಣ್ಣೆಪ್ಪ ನಾಗನಕೇರಾ, ರಾಜು ದೇವಣಿ, ಜಾನಿ ಮಿಯ್ಯ, ವಿಠಲ, ಪ್ರವೀಣ, ಸಿದ್ಧಲಿಂಗ ಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷೆ ಶ್ರೀದೇವಿ ಹಡಪದ್‌, ಮುಖ್ಯ ಶಿಕ್ಷಕ ರಾಜಕುಮಾರ, ಶಿವರಾಜ್‌, ಕಮಲಾ, ಪ್ರಶೀಲ, ರೇಣುಕಾ, ಲಲಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT