ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ವರ್ಷ 8 ಲಕ್ಷ ಜನರಿಗೆ ಹೃದ್ರೋಗ: ತಜ್ಞ ಡಾ. ವಿವೇಕ ಜವಳಿ

Last Updated 19 ಸೆಪ್ಟೆಂಬರ್ 2021, 12:58 IST
ಅಕ್ಷರ ಗಾತ್ರ

ಬೀದರ್‌: ‘ವಿಶ್ವದಲ್ಲಿ ಪ್ರತಿ ಒಂದು ಲಕ್ಷ ಜನರ ಪೈಕಿ 272 ಜನರಿಗೆ ಹೃದ್ರೋಗ ಬರುತ್ತಿದೆ. ಭಾರತದಲ್ಲಿ ಪ್ರತಿ ವರ್ಷ 8 ಲಕ್ಷ ಜನರು ಹೃದಯ ಸಂಬಂಧಿ ಕಾಯಿಲೆಗೆ ಸಿಲುಕುತ್ತಿದ್ದಾರೆ’ ಎಂದು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ವಿವೇಕ ಜವಳಿ ಹೇಳಿದರು.

ನಗರದ ಗುದಗೆ ಮಲ್ಟಿ ಸುಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನೂತನ ಕ್ಯಾಥಲ್ಯಾಬ್ ಉದ್ಘಾಟಿಸಿ ಅವರು ಮಾತನಾಡಿದರು.
‘ಬೆಂಗಳೂರಿನಲ್ಲಿ 75 ಹಾಗೂ ಉಳಿದೆಡೆ 100 ಸೇರಿ ಒಟ್ಟು 175 ಹೃದ್ರೋಗ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರ ಕನಿಷ್ಠ 10 ಲಕ್ಷ ಜನರ ಪೈಕಿ 800 ಜನರಿಗೆ ಅನುಕುಲವಾಗುವ ರೀತಿಯಲ್ಲಿ ಹೃದ್ರೋಗ ಆಸ್ಪತ್ರೆಗಳಿಗೆ ಅವಕಾಶ ಕೊಡಬೇಕು’ ಎಂದರು.
‘ಹೃದಯ ಸಂಬಂಧಿ ಕಾಯಿಲೆ ಹಾಗೂ ಚಿಕಿತ್ಸೆ ನೀಡಿಕೆಯಲ್ಲಿ ದೇಶದಲ್ಲೇ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ, ಕೇರಳ ಎರಡನೇ ಹಾಗೂ ಕರ್ನಾಟಕ ಮೂರನೇ ಸ್ಥಾನದಲ್ಲಿದೆ’ ಎಂದು ತಿಳಿಸಿದರು.

‘ಪಟ್ಟಣ ಪ್ರದೇಶದಲ್ಲಿ ವಾಸಿಸುವ ಪ್ರತಿ ಏಳು ಜನರಲ್ಲಿ ಒಬ್ಬರಿಗೆ ಸಕ್ಕರೆ ಕಾಯಿಲೆ, ರಕ್ತದೊತ್ತಡ ಸಾಮಾನ್ಯವಾಗಿ ಕಂಡು ಬರುತ್ತಿದೆ. ಇದು ಮುಂದೆ ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ. ಸಾತ್ವಿಕ ಆಹಾರ ಸೇವನೆ ಮಾಡುವ ಜತೆಗೆ ದಿನಕ್ಕೆ ಕನಿಷ್ಠ 40 ನಿಮಿಷ ವಾಕಿಂಗ್ ಮಾಡಬೇಕು’ ಎಂದು ಹೇಳಿದರು,

‘ಆಯುಷ್ಮಾನ ಭಾರತ ಹಾಗೂ ಆರೋಗ್ಯ ಕರ್ನಾಟಕ ಸೇರಿದಂತೆ ಇತರೆ ಯೋಜನೆಗಳು ಬಡವರಿಗೆ ಅನುಕೂಲವಾಗಿವೆ’ ಎಂದು ತಿಳಿಸಿದರು.

ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಹಾಗೂ ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ ಅವರು ಗುದಗೆ ಆಸ್ಪತ್ರೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಗುದಗೆ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ನಿತೀನ್ ಗುದಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎನ್.ಬಿ.ರೆಡ್ಡಿ ಗುರೂಜಿ, ಶಾಸಕ ರಹೀಮ್ ಖಾನ್, ಕೆ.ಎಸ್.ಐ.ಐ.ಡಿ.ಸಿ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಬೂಡಾ ಅಧ್ಯಕ್ಷ ಬಾಬುವಾಲಿ, ಕೆ.ಆರ್.ಇ ಸಂಸ್ಥೆ ಅಧ್ಯಕ್ಷ ಡಾ.ಬಸವರಾಜ ಪಾಟೀಲ, ಯುವ ಮುಖಂಡ ಅಭಿಷೆಕ ಪಾಟೀಲ ಇದ್ದರು.

ಡಾ.ಚಂದ್ರಕಾಂತ ಗುದಗೆ–ನಂದಾ, ಡಾ.ನಿತಿನ್ ಗುದಗೆ–ಡಾ.ವಿಜಯಲಕ್ಷ್ಮಿ, ಡಾ.ಸಚಿನ್ ಗುದಗೆ ಹಾಗೂ ಡಾ.ಶಾರದಾ ದಂಪತಿಯನ್ನು ಸನ್ಮಾನಿಸಲಾಯಿತು. ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ರಾಜಯೋಗ ಕೇಂದ್ರ ಪಾವನಧಾಮ ಸಂಚಾಲಕಿ ಬಿ.ಕೆ ಪ್ರತಿಮಾ ಬಹೆನ್‍ಜಿ, ಶಕುಂತಲಾ ಬೆಲ್ದಾಳೆ, ಬಾಬುರಾವ್ ಗುದಗೆ, ಬಿ.ಎಸ್ ಕುದರೆ, ವೈಜಿನಾಥ ಕಮಠಾಣೆ, ಡಾ.ಚನ್ನಬಸಪ್ಪ ಹಾಲಹಳ್ಳಿ, ಶಿವಶರಣಪ್ಪ ವಾಲಿ, ಬಸವರಾಜ ಪಾಟೀಲ, ಬಸವರಾಜ ಜಾಬಶೆಟ್ಟಿ, ಸುಮಿತ್ ಮೋರ್ಗೆ, ಡಾ.ಜನಾರ್ಧನ್, ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಸ್ವಾತಿ, ಡಾ.ನಾಗಭೂಷಣ.ಎಂ, ಡಾ.ಮಹೇಶ ತೊಂಡಾರೆ ಇದ್ದರು. ಡಾ.ಚಂದ್ರಕಾಂತ ಗುದಗೆ ಸ್ವಾಗತಿಸಿದರು. ಆಕಾಶವಣಿ ಕಲಾವಿದ ನವಲಿಂಗ ಪಾಟೀಲ ನಿರೂಪಿಸಿದರು, ಡಾ.ಸಚಿನ್ ಗುದಗೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT