ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಸಾಹಿತಿಗಳನ್ನು ಪ್ರೋತ್ಸಾಹಿಸಿ

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಮನವಿ
Last Updated 4 ನವೆಂಬರ್ 2020, 13:42 IST
ಅಕ್ಷರ ಗಾತ್ರ

ಬೀದರ್‌: ‘ಉತ್ತಮ ಬರಹಗಾರರ ಬೆನ್ನು ಚಪ್ಪರಿಸಬೇಕು. ಸ್ಥಳೀಯ ಸಾಹಿತಿಗಳ ಬೆಳವಣಿಗೆಗೆ ಕೈಲಾದಷ್ಟು ಪ್ರೋತ್ಸಾಹ ನೀಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಮನವಿ ಮಾಡಿದರು.

ನಗರದ ಕೃಷಿ ಕಾಲೊನಿಯಲ್ಲಿ ಶಿವಕುಮಾರ ಕಟ್ಟೆ ರಚಿತ ‘ನಾಲ್ದೇರಾ’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಶಿವಕುಮಾರ ಕಟ್ಟೆ ಉತ್ತಮ ಸಾಹಿತಿಯಾಗಿದ್ದಾರೆ. ತಮ್ಮ ಪ್ರವಾಸದ ಅನುಭವಗಳನ್ನು ನಾಲ್ದೇರಾ ಕೃತಿಯಲ್ಲಿ ಅಚ್ಚುಕಟ್ಟಾಗಿ ಹಂಚಿಕೊಂಡಿದ್ದಾರೆ. ಸಾಕಷ್ಟು ಮಾಹಿತಿ ಹೊಂದಿರುವ ಈ ಪುಸ್ತಕವನ್ನು ಎಲ್ಲರೂ ಓದಬೇಕು. ಪುಸ್ತಕವನ್ನು ಖರೀದಿಸಿ ಓದುವ ಮನೋಭಾವ ಪ್ರತಿಯೊಬ್ಬರಲ್ಲಿಯೂ ಬೆಳೆಯಬೇಕು’ ಎಂದು ಹೇಳಿದರು.

ನಂತರ ಸ್ಥಳದಲ್ಲೇ ಪುಸ್ತಕವನ್ನು ಖರೀದಿಸುವ ಮೂಲಕ ಪುಸ್ತಕಗಳನ್ನು ಖರೀದಿಸಿ ಓದುವ ಸಂಪ್ರದಾಯಕ್ಕೆ ನಾಂದಿ ಹಾಡಿದರು.

ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ ಕಟ್ಟೆ ಪ್ರಾಸ್ತಾವಿಕ ಮಾತನಾಡಿ, ‘ಉತ್ತರ ಹಾಗೂ ಪೂರ್ವ ಭಾರತದ ವಿವಿಧ ರಾಜ್ಯಗಳಲ್ಲಿ ಪ್ರವಾಸ ಕೈಗೊಂಡಿದ್ದ ವೇಳೆ ಗಮನಿಸಿರುವ ಅಂಶಗಳು ಮತ್ತು ಹೊಸ ಅನುಭವಗಳನ್ನು ನಾಲ್ದೇರಾ ಕೃತಿಯ ಮೂಲಕ ತಿಳಿಸಿದ್ದೇನೆ. ಸಚಿವರು ಹಿಂದೆ ಘೋಷಿಸಿದಂತೆ ಸ್ಥಳೀಯ ಸಾಹಿತಿಗಳನ್ನು ಪ್ರೋತ್ಸಾಹಿಸುತ್ತಾ ಬರುತ್ತಿದ್ದಾರೆ. ಅವರ ಹೆಸರಿನ ಪ್ರಕಾಶನವಾದ `ಪ್ರಭು’ ಪ್ರಕಾಶನದ ಮೂಲಕ ಈ ಪುಸ್ತಕ ಮುದ್ರಣಗೊಂಡಿದೆ’ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಬಿಜೆಪಿ ಮುಖಂಡರಾದ ಅಶೋಕ ಹೊಕ್ರಾಣೆ, ಶಶಿ ಹೊಸಳ್ಳಿ, ಬಂಡೆಪ್ಪ ಕಂಟೆ, ರೇವಣಸಿದ್ದಪ್ಪ ಜಲಾದೆ, ಗುರುನಾಥ ರಾಜಗೀರಾ, ಪ್ರಕಾಶ ಅಲ್ಮಾಜೆ, ರಾಮಶೆಟ್ಟಿ ಪನ್ನಾಳೆ, ಸಾಹಿತಿಗಳಾದ ಡಾ.ಸಂಜೀವಕುಮಾರ ಅತಿವಾಳೆ, ರಮೇಶ ಬಿರಾದಾರ, ರಘುನಾಥ ಹಡಪದ, ರಜಿಯಾ ಬಳಬಟ್ಟಿ, ದೆಶಾಂಶ ಹುಡಗಿ, ಬಸವರಾಜ ಬಲ್ಲೂರ, ಸುನೀತಾ ಬಿರಾದಾರ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಬಕ್ಕಪ್ಪ ನಿರ್ಣೆಕರ್, ಮಲ್ಲಿಕಾರ್ಜುನ.ಬಿ, ರವೀಂದ್ರಕುಮಾರ ಬಡಿಗೇರ, ಚನ್ನಬಸಪ್ಪ ಪಾಟೀಲ, ಗೌತಮ, ಎಂ.ಡಿ.ವಕೀಲ ಪಟೇಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT