ಸೋಮವಾರ, ಸೆಪ್ಟೆಂಬರ್ 27, 2021
22 °C
ಬೀದರ್ ಡೇರಿಯಲ್ಲಿ ಸ್ವಾತಂತ್ರ್ಯೋತ್ಸವ

ಪ್ರತಿಯೊಬ್ಬರೂ ದೇಶಾಭಿಮಾನ ಬೆಳೆಸಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಇಲ್ಲಿಯ ಚಿಕ್ಕಪೇಟೆ ಸಮೀಪ ಇರುವ ಕಲಬುರ್ಗಿ-ಯಾದಗಿರಿ-ಬೀದರ್ ಹಾಲು ಒಕ್ಕೂಟದ ಬೀದರ್ ಡೇರಿಯಲ್ಲಿ ಭಾನುವಾರ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಒಕ್ಕೂಟದ ನಿರ್ದೇಶಕ ಮಲ್ಲಿಕಾರ್ಜುನ ಬಿರಾದಾರ ಮಾತನಾಡಿ, ‘ಪ್ರತಿಯೊಬ್ಬರೂ ದೇಶಾಭಿಮಾನ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು. ಒಕ್ಕೂಟದ ಅಧಿಕಾರಿ ಶಾಲಿವಾನ ವಾಡೆ ಹಾಗೂ ಸಿಬ್ಬಂದಿ ಇದ್ದರು
 
ಜೆಡಿಎಸ್ ಕಚೇರಿ: ನಗರದ ನಂದಿ ಕಾಲೊನಿಯ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ ಧ್ವಜಾರೋಹಣ ನೆರವೇರಿಸಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪೂರ, ಪಕ್ಷದ ಪ್ರಧಾನ ಕಾರ್ಯದರ್ಶಿ ಅಶೋಕ ಕೋಡಗೆ. ಸೋಮನಾಥ ಕಂದಗುಳೆ, ದೇವೇಂದ್ರ ಸೋನಿ, ಬಸವರಾಜ ಪಾಟೀಲ, ನಗರಸಭೆ ಸದಸ್ಯರಾದ ರಾಜು ಚಿಂತಾಮಣಿ. ರಾಜಶೇಖರ ಜವಳೆ, ರಾಜಕುಮಾರ ಶಿವಪೂಜೆ, ಸುದರ್ಶನ ಸುಂದರರಾಜ, ಸಂಗಪ್ಪ ಚಿದ್ರಿ, ಪ್ರಭು ಮದರ್ಗಿಕರ್, ಶೇಖ ಅಭಿದ್‌ಅಲಿ, ಅಭಿ‌ ಕಾಳೆ, ವಿನಯಕುಮಾರ, ಅಬ್ದುಲ್ ಸಮದ್, ಎಂ ಡಿ. ಫಾರೂಕ್ ಅಲಿ‌, ಶಿವರಾಜ್ ಕಟಗಿ, ಬಾಬುರಾವ್ ಲದ್ದೆ, ಸೌದ್ ಖಾದ್ರಿ ಇದ್ದರು.
 
ಭೂಮರಡ್ಡಿ ಕಾಲೇಜ್: ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಿ.ವಿ. ಭೂಮರಡ್ಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನಲ್ಲಿ  ಸ್ವಾತಂತ್ರ್ಯದ ಅಮೃತ ಮಹೋತ್ಸಹ ಕಾರ್ಯಕ್ರಮ ನಡೆಯಿತು.

ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ.ರಜನೀಶ ವಾಲಿ ಧ್ವಜಾರೋಹಣ ನೆರವೇರಿಸಿದರು. ಪ್ರಾಚಾರ್ಯ ಡಾ.ಎಸ್.ಕೆ. ಸಾತನೂರ ಹಾಜರಿದ್ದರು.

ಪನ್ನಾಲಾಲ್ ಕಾಲೇಜ್: ಪನ್ನಾಲಾಲ್ ಹೀರಾಲಾಲ್ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ರಾಜಕುಮಾರ ಅಗರವಾಲ ಅಧ್ಯಕ್ಷತೆ ವಹಿಸಿದ್ದರು. ಬ್ರಿಜ್‌ಕಿಶೋರ ಮಾಲಾಣಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವದ ಪ್ರಯುಕ್ತ ಆವರಣದಲ್ಲಿ 200 ಸಸಿಗಳನ್ನು ನಡೆಲಾಯಿತು. ಪ್ರಾಚಾರ್ಯ ಬಸವರಾಜ ಬುಳ್ಳಾ ಸ್ವಾಗತಿಸಿದರು. ಶಿಕ್ಷಕಿ ಸುಧಾರಾಣಿ ನಿರೂಪಿಸಿದರು, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಸಂಜೀವಕುಮಾರ ವಂದಿಸಿದರು.

ಮರಕುಂದಾದಲ್ಲಿ ಧ್ವಜಾರೋಹಣ: ಬೀದರ್ ತಾಲ್ಲೂಕಿನ ಮರಕುಂದಾ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಮೆಹರುನಾಬೇಗಂ ಅವರು ಬಿಲ್ವಪತ್ರೆ ವೃಕ್ಷ ವಿತರಿಸಿದರು. ಪಂಚಾಯಿತಿ ಉಪಾಧ್ಯಕ್ಷೆ ಶೇಕಮ್ಮ, ಸದಸ್ಯರಾದ ಸಂತೋಷ ನಾಗವಾರ, ಅಬ್ದುಲಸಾಜಿದ್ ಪಾಶಾ, ಮಾದಪ್ಪ ಚಾಮಾ, ಬೀರಪ್ಪ ಮಿತ್ರಾ, ಪಾರಮ್ಮ, ಜಾಕೀರ್‌ಖಾನ್, ಮಾಣಿಕಪ್ಪ, ಶಿಲ್ಪಾರಾಣಿ, ಭೀಮರಾವ್, ಪಿಡಿಒ ಶಶಿಕಲಾ ಕಮಠಾಣೆ, ನಿವೃತ್ತ ಶಿಕ್ಷಕ ನಾಗಶೆಟ್ಟಿ ಚಾಮ, ಶಾಮರಾವ್ ಹುಡೇದ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.