ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾಲ್ಕಿ | ಬಡ್ಡಿ ಮನ್ನಾ ಯೋಜನೆ ಏ.30ರವರೆಗೆ ದಿನಾಂಕ ವಿಸ್ತರಿಸಿ; ರೈತ ಸಂಘ ಒತ್ತಾಯ

Published 3 ಮಾರ್ಚ್ 2024, 15:58 IST
Last Updated 3 ಮಾರ್ಚ್ 2024, 15:58 IST
ಅಕ್ಷರ ಗಾತ್ರ

ಭಾಲ್ಕಿ: ಮಧ್ಯಮ ಅವಧಿ ಸಾಲದ ಬಡ್ಡಿ ಮನ್ನಾ ಅವಧಿ ಏ.30ರವರೆಗೆ ವಿಸ್ತರಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಜಿಲ್ಲಾ ರೈತ ಸಂಘ ಒತ್ತಾಯಿಸಿದೆ.

ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲದಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.

ಜಿಲ್ಲೆಯಲ್ಲಿ ಸತತವಾಗಿ ರೈತರು ಅತಿವೃಷ್ಟಿ-ಅನಾವೃಷ್ಟಿ ಹೊಡೆತಕ್ಕೆ ಸಿಲುಕಿ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ರೈತರ ಸಂಪೂರ್ಣ ಸಾಲಮನ್ನಾ ಮಾಡುವಂತೆ ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ತರಲಾಗುತ್ತಿದೆ. ರಾಜ್ಯ ಸರ್ಕಾರ ಮಧ್ಯಮ ಅವಧಿ ಸಾಲ ಕಟ್ಟಿದರೇ ಬಡ್ಡಿ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದೆ. ಅದಕ್ಕೆ ಫೆ.28 ಗಡುವು ನೀಡಲಾಗಿತ್ತು.  ಈ ಗಡುವು ಯಾವ ಮಾನದಂಡದ ಆಧಾರದ ಮೇಲೆ ಘೋಷಣೆ ಮಾಡಲಾಗಿದೆ ಎನ್ನುವುದು ತಿಳಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರು ಬೆಳೆದ ಬೆಳೆ ಕಟಾವು ಮಾರ್ಚ್-ಏಪ್ರಿಲ್‍ನಲ್ಲಿ ನಡೆಯುತ್ತದೆ. ಬೆಳೆದ ಬೆಳೆಗೆ ಸಕಾಲಕ್ಕೆ ಸೂಕ್ತ ದರ ಸಿಗುವುದಿಲ್ಲ. ನೀಡಿದ ಗಡುವಿನೊಳಗೆ ರೈತರಿಗೆ ಅಸಲು ಕಟ್ಟಲು ಸಾಧ್ಯವಾಗುವುದಿಲ್ಲ. ಕಬ್ಬು ಸಾಗಿಸಿದ ರೈತರಿಗೂ ಸಕ್ಕರೆ ಕಾರ್ಖಾನೆ ಮಾಲೀಕರು ಹಣ ಪಾವತಿಸಿಲ್ಲ. ಕೂಡಲೇ ಸರ್ಕಾರ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಕಬ್ಬು ಸಾಗಿಸಿದ ರೈತರ ಖಾತೆಗೆ ಕೂಡಲೇ ಹಣ ಪಾವತಿಸಲು ಸೂಚನೆ ನೀಡಬೇಕು. ಬರ ಪರಿಹಾರ, ಬೆಳೆವಿಮೆ ಹಣ ತಕ್ಷಣಕ್ಕೆ ಕೊಡಿಸಬೇಕು ಎಂದು ಒತ್ತಾಯಿಸಿದರು.

ಸಹಕಾರಿ ಬ್ಯಾಂಕ್‍ಗಳಿಂದ ರೈತರಿಗೆ ನೋಟಿಸ್ ನೀಡುವುದು, ಕಿರುಕುಳ ನೀಡುವುದು ನಿಲ್ಲಿಸಬೇಕು. ಕಾಡು ಪ್ರಾಣಿಗಳಿಂದ ಬೆಳೆ ಹಾನಿ ಅನುಭವಿಸಿದ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಬೇಕು. ಇಲ್ಲದಿದ್ದರೇ ಮಾ.11 ರಂದು ಜಿಲ್ಲೆಯಾದ್ಯಂತ ರಸ್ತೆತಡೆ ಆಂದೋಲನ ನಡೆಸಲಾಗುತ್ತದೆ ಎಂದು ಮನವಿ ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.

ರೈತ ಸಂಘದ ಪ್ರಮುಖರಾದ ನಾಗಶೆಟೆಪ್ಪ ಲಂಜವಾಡೆ, ಶಾಂತಮ್ಮ ಮೂಲಗೆ, ವೀರಾರೆಡ್ಡಿ ಪಾಟೀಲ, ವಿಠ್ಠಲರಾವ್ ಮೇತ್ರೆ, ಬಸವರಾಜ ಅಷ್ಟೂರ, ವಿಠಲರೆಡ್ಡಿ ಆಣದೂರ, ವಿಜಯಕುಮಾರ ಬಾವುಗೆ, ಶಿವರಾಜ ಜಲ್ದೆ, ಕರಬಸಪ್ಪ ಹುಡಗಿ, ಪ್ರಭಾವತಿ, ಪರಮೇಶ್ವರ, ಶಿವಕುಮಾರ ಖಂಡ್ರೆ, ರುದ್ರು ಸ್ವಾಮಿ, ಮುಖಿಮೋದ್ದಿನ ಪಟೇಲ್, ಸನ್ಮುಖಪ್ಪ ಆಣದೂರ, ಸಂತೋಷ ಗುದಗೆ, ಖಾನಸಾಬ್, ಕಂಟೆಪ್ಪ ತರನಳ್ಳಿ, ನಾಗೇಂದ್ರಪ್ಪ ತರನಳ್ಳಿ, ಸಂಜು ಪಾಟೀಲ, ಶಿವಯೋಗಿ ಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT