ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತ ಶಿಕ್ಷಕ ಜಾನಾಪುರೆಗೆ ಬೀಳ್ಕೊಡುಗೆ

Last Updated 9 ಅಕ್ಟೋಬರ್ 2021, 16:09 IST
ಅಕ್ಷರ ಗಾತ್ರ

ಬೀದರ್: ವಯೋನಿವೃತ್ತಿ ಹೊಂದಿದ ಇಲ್ಲಿಯ ಜೀಜಾಮಾತಾ ಪ್ರೌಢಶಾಲೆಯ ಶಿಕ್ಷಕ ಅಂಬಾದಾಸ ಜಾನಾಪೂರೆ ಅವರನ್ನು ಶಾಲೆಯಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.

ಶಿವ ಛತ್ರಪತಿ ಸ್ಮಾರಕ ಸಮಿತಿ ಅಧ್ಯಕ್ಷ ಸತೀಶ ಮುಳೆ ಮಾತನಾಡಿ, ಅಂಬಾದಾಸ ಜಾನಾಪೂರೆ ಅವರ ಸೇವಾ ನಿಷ್ಠೆ, ಪ್ರಾಮಾಣಿಕತೆ ಹಾಗೂ ಸಮಯ ಪ್ರಜ್ಞೆ ಎಲ್ಲರಿಗೆ ಮಾದರಿಯಾಗಿದೆ ಎಂದು ತಿಳಿಸಿದರು.

ಸಮಾಜದಲ್ಲಿ ಶಿಕ್ಷಕರಿಗೆ ಬಹಳ ಗೌರವ ಇದೆ. ಶಿಕ್ಷಕರು ತಮ್ಮ ವೃತ್ತಿಯನ್ನು ಪ್ರೀತಿಸಬೇಕು ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಶ್ರಮಿಸಬೇಕು ಎಂದು ಸಲಹೆ ಮಾಡಿದರು.

ಈಚೆಗೆ ನಿಧನರಾದ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಲ್ಲಪ್ಪ ಹೂಗಾಡೆ ಅವರು ಸರಳ, ಸಜ್ಜನ ವ್ಯಕ್ತಿಯಾಗಿದ್ದರು. ಸಂಸ್ಥೆಗೆ ಅವರು ನೀಡಿದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕಿ ಗೀತಾ ಗಡ್ಡಿ ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದರು. ಮಲ್ಲಪ್ಪ ಹೂಗಾಡೆ ಅವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷಗಳ ಮೌನ ಆಚರಿಸಲಾಯಿತು.

ಶಿಕ್ಷಕರಾದ ಮಲ್ಲಿಕಾರ್ಜುನ, ಪ್ರತಾಪ ಸೂರ್ಯವಂಶಿ, ಪ್ರಕಾಶ ದಾಡಗೆ, ಬಾಲಾಜಿ ಬಿರಾದಾರ, ಶ್ರೀಕಾಂತ ಹೂಗಾಡೆ, ವಾಸುದೇವ, ಚಂದ್ರಕಾಂತ, ಸುಧೀರ ರಾಗಾ, ಪ್ರಭಣ್ಣ, ಅರ್ಜುನ, ಬಸವರಾಜ, ಭೀಮಶಾ, ರಾಮ, ರಾಜಕುಮಾರ, ವಿವೇಕ, ಕುಮಾರ, ಅನೀಲಕುಮಾರ, ಆನಂದ ಉಪಸ್ಥಿತರಿದ್ದರು.

ಶಿಕ್ಷಕ ತಾನಾಜಿ ಕಾರಬಾರಿ ಸ್ವಾಗತಿಸಿದರು. ಜೀಜಾಮಾತಾ ಕನ್ಯಾ ಪ್ರೌಢಶಾಲೆಯ ಮುಖ್ಯಶಿಕ್ಷಕ ಪರಮೇಶ್ವರ ಬಿರಾದಾರ ಸ್ವಾಗತಿಸಿದರು. ಮೋಹನ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT