ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಸ್ಪರ ಸಹಕಾರದಿಂದ ರೈತರ ಏಳಿಗೆ’

Published 1 ಸೆಪ್ಟೆಂಬರ್ 2023, 12:42 IST
Last Updated 1 ಸೆಪ್ಟೆಂಬರ್ 2023, 12:42 IST
ಅಕ್ಷರ ಗಾತ್ರ

ಔರಾದ್: ‘ಪರಸ್ಪರ ಸಹಕಾರದಿಂದ ರೈತರ ಏಳಿಗೆ ಆಗಲಿದೆ’ ಎಂದು ರಿಲಾಯನ್ಸ್ ಫೌಂಡೇಶನ್ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಾಮಚಂದ್ರ ಶೇರಿಕಾರ ಹೇಳಿದರು.

ತಾಲ್ಲೂಕಿನ ನಾಗೂರ (ಎನ್) ಗ್ರಾಮದಲ್ಲಿ ಶುಕ್ರವಾರ ನಡೆದ ಬೀದರ್ ಕೃಷಿ ಉತ್ಪಾದಕ ರೈತ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ರೈತರಿಂದಲೇ ಸ್ಥಾಪಿತವಾದ ಈ ಸಂಘದಿಂದ ಅನೇಕ ರೀತಿಯ ಅನುಕೂಲ ಆಗಿವೆ. ಈ ಸಂಘ ಇದೇ ರೀತಿ ಮುಂದುವರಿಯಲಿ’ ಎಂದು ತಿಳಿಸಿದರು.

ಮುಖಂಡ ಅಯೂಬಖಾನ್ ಮಾತನಾಡಿ ‘ಈ ರೈತ ಉತ್ಪಾದಕ ಸಂಘ ರೈತರ ಆರ್ಥಿಕ ಅಭಿವೃದ್ಧಿಗೆ ಏನೆಲ್ಲ ಮಾಡಬೇಕು ಅದನ್ನು ಮಾಡುತ್ತಿದೆ’ ಎಂದು ಹೇಳಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಕಾಂತ ಸ್ವಾಮಿ, ರೈತ ಗಣಪತಿ ಸಿಂಗಟೆ, ಘಾಳರೆಡ್ಡಿ, ದೇವಿದಾಸರಾವ, ಭಗವಾನ ಪಾಟೀಲ್, ಅಯೂಬ್ ಖಾನ್ ಪಟೇಲ್, ಅಮೃತರಾವ, ದಯಾನಂದ ಹಳ್ಳಿಖೇಡೆ, ತುಳಸಿರಾಮ, ಶಂಕ್ರೆಪ್ಪ ಜೈನಾಪುರೆ, ಶಿವರಾಜ ಪಾಟೀಲ, ಹಣಮಂತ ಮಡಿವಾಳ, ಈಶ್ವರ ಜೈನಾಪುರ, ಶಿವಲಿಂಗಯ್ಯ ಸ್ವಾಮಿ, ಸಂಗಪ್ಪ ಅತಿವಾಳ, ಮಹೇಶ ಕಣಜೆ, ಮಾರುತಿ ಕಮಠಾಣಾ, ಶಿವು ಮಾಡಿವಾಳ, ಸಂಗಮೇಶ ಕೊಡಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT